ನೂತನ ಡಿಗ್ರಿ ಕಾಲೇಜಿನ ಕ್ಯಾಂಪಸ್ ನಿರ್ಮಾಣಕ್ಕೆ 5ಎಕರೆಗೆ ಪ್ರಸ್ತಾವನೆ: ಶಾಸಕ ಕೆ.ಎಸ್. ಆನಂದ್

| Published : Feb 01 2024, 02:03 AM IST

ನೂತನ ಡಿಗ್ರಿ ಕಾಲೇಜಿನ ಕ್ಯಾಂಪಸ್ ನಿರ್ಮಾಣಕ್ಕೆ 5ಎಕರೆಗೆ ಪ್ರಸ್ತಾವನೆ: ಶಾಸಕ ಕೆ.ಎಸ್. ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸ್ವಾಗತ ಮತ್ತು ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಕೆ.ಎಸ್. ಆನಂದ್‌ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಡೂರು

ಕಡೂರು ಪಟ್ಟಣದ ಸುಂದರ ವಾತಾವರಣದಲ್ಲಿ ನೂತನ ಡಿಗ್ರಿ ಕಾಲೇಜಿನ ಕ್ಯಾಂಪಸ್ ನಿರ್ಮಾಣಕ್ಕೆ 5ಎಕರೆ ಜಾಗಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ಅವರು ಕಡೂರು ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸ್ವಾಗತ ಮತ್ತು ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಕೆ.ಎಸ್. ಆನಂದ್‌ ಮಾತನಾಡಿದರು.

ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂಬುದು ತಮ್ಮಇಚ್ಚೆ ಆಗಿದೆ. ಸದ್ಯದಲ್ಲೇ ಒಳ್ಳೆ ಸುಂದರವಾದ ವಾತಾವರದ ಡಿಗ್ರಿ ಕಾಲೇಜು ಬರಲಿದೆ. ಜೊತೆಯಲ್ಲಿ ಈ ಕಾಲೇಜಿಗೆ ಇಂಗ್ಲೀಷ್ ಮಾಧ್ಯಮ ತರಲು ಹಾಗು ಕೆಪಿಎಸ್‌ ಶಾಲೆಗಳನ್ನು ಗ್ರಾಪಂ ಮಟ್ಟದಲ್ಲಿ ತೆರೆಯುವ ಪ್ರಯತ್ನ ಮಾಡುತ್ತೇನೆ. ಬರುವ ವರ್ಷದೊಳಗೆ ರಂಗ ಮಂದಿರ ಮಾಡಿಸಿ ಕೊಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.

ತಮ್ಮ ವಿದ್ಯಾರ್ಥಿ ಜೀವನ ಮುಗಿಯಿತು ಎಂದು ಬೇಸರಿಸುವುದು ಬೇಡ. ಆದರೆ ಪಿಯುಸಿ ಪ್ರಮುಖ ಬದಲಾವಣೆ ಘಟ್ಟ. ಇದನ್ನು ಅರಿತು ಇಂದು ಹೆಣ್ಣು ಮಕ್ಕಳು ಪೈಪೋಟಿ ಜಗತ್ತಿನಲ್ಲಿ ಡಬಲ್‌ ಡಿಗ್ರಿ ಮಾಡಿದರೆ ಯಾವುದೇ ಉದ್ಯೋಗ ಮಾಡಬಹುದು.

ವಿದ್ಯಾರ್ಥಿ ಜೀವನವು ಗೋಲ್ಡನ್ ಲೈಫ್ ಎನ್ನುವುದು ಸತ್ಯ. ಆದರೆ ಮದುವೆ ನಂತರದ ಜೀವನ ಒತ್ತಡದಲ್ಲಿರುತ್ತದೆ. ಹಾಗಾಗಿ ಶಿಕ್ಷಣದ ಜೊತೆ ಎಲ್ಲ ಚಟುವಟಿಕಗಳಲ್ಲೂ ಪೈಪೋಟಿ ನೀಡಲು ಸಿದ್ಧರಾಗಬೇಕು. ಬದುಕಲು ಶಿಕ್ಷಣದ ಜೊತೆ ಶಿಸ್ತು, ದೇಶಾಭಿಮಾನ, ಶ್ರದ್ಧೆ, ಗುರುಹಿರಿಯರಿಗೆ ಗೌರವ ಬಹುಮುಖ್ಯ ಎಲ್ಲವೂ ಇರಬೇಕು ಎಂದರು.

ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾದ್ಯ. ಹೆಣ್ಣು ಸಮಾಜದ ಕಣ್ಣಾಗಿದ್ದು, ಸರ್ಕಾರಿ ಮಕ್ಕಳೇ ತುಂಬಾ ಸ್ಟ್ರಾಂಗ್‌ ಎಂಬುದು ರುಜುವಾತಾಗಿದೆ.

ಯಾವುದೇ ಸಮಾಜವು ಬದಲಾಗಲು ಶಿಕ್ಷಣದಿಂದ ಮಾತ್ರ ಸಾದ್ಯ ಎಂದರು. ಜ್ಞಾನದ ಬಲದಿಂದ ಅಜ್ಞಾನದ ಕೇಡು ಎನ್ನುವಂತೆ. ದೂರ ದೃಷ್ಟಿ ಅರಿತಿದ್ದ ಶಾಸಕರಾಗಿದ್ದ ಕೆ.ಎಂ.ಕೃಷ್ಣಮೂರ್ತಿಯವರು ಪಟ್ಟಣಕ್ಕೆ ಬಾಲಕಿಯರ ಕಾಲೇಜು ತಂದಿದ್ದು ಫಲ ಕೊಡುತ್ತಿದೆ ಹೇಳಿದರು,

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ರಾಜಪ್ಪ, ಉತ್ತಮ ಉಪನ್ಯಾಸಕರು ಸಿಬ್ಬಂದಿ ವರ್ಗದಿಂದ ಕಾಲೇಜಿಗೆ ಪ್ರತೀ ವರ್ಷ ಉತ್ತಮ ಫಲಿತಾಂಶ ಬರುತ್ತಿದೆ. ಶಾಸಕರು ಕಾಲೇಜಿಗೆ ಮೂಲಭೂತ ಸವಲತ್ತುಗಳ ಜೊತೆ ರಂಗಮಂದಿರ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು. ವಾರ್ಷಿಕ ವರದಿಯನ್ನು ಉಪನ್ಯಾಸಕ ಶಿವಕುಮಾರ್ ಓದಿದರು. ಉಪನ್ಯಾಸಕ ಮಂಜುನಾಥ್ ಮಾತನಾಡಿ ಸರಳತೆ ಪ್ರತಿಕವಾಗಿ ನೂತನ ಶಾಸಕರಾದ ಆನಂದ್ ರವರು ಕ್ಷೇತ್ರದಲ್ಲಿ ಜನಪರವಾದ ನಿಲುವುಗಳನ್ನು ತೆಗೆದುಕೊಳ್ಳುತಿದ್ದಾರೆ ಎಂದರು. ಮಕ್ಕಳಿಂದ ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಲ್ಲೇಶ್ವರ ಗ್ರಾಪಂ ಮಾಜಿ ಅಧ್ಯಕ್ಷ ವಸಂತ್ ಕುಮಾರ್, ಪುರಸಭೆ ಸದಸ್ಯ ಶ್ರೀಕಾಂತ್, ಮಾಜಿ ತಾಪಂ ಅಧ್ಯಕ್ಷ ಆಸಂದಿ ಕಲ್ಲೇಶ್, ಫ್ರೌಢಶಾಲೆ ಮುಖ್ಯಶಿಕ್ಷಕ ಸುರೇಶ್‌,ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುರೇಶ್‌ ಬಾಬು, ಉಪನ್ಯಾಸಕ ವೈ.ಟಿ.ಹನುಮಂತಪ್ಪ, ಉಪನ್ಯಾಸಕರಾದ ಜ್ಞಾನೇಶ್, ಮಂಜುನಾಥ್, ಶಿವಕುಮಾರ್‌ ಸೇರಿ ಮತ್ತಿತರರಿದ್ದರು.