ಮಹರ್ಷಿ ವಾಲ್ಮೀಕಿ ಅಭಯಾರಣ್ಯಕ್ಕೆ ಪ್ರಸ್ತಾವನೆ

| Published : Oct 08 2025, 01:01 AM IST

ಸಾರಾಂಶ

ಮಹರ್ಷಿ ವಾಲ್ಮೀಕಿ ಅವರಿಂದಲೇ ಶ್ರೀರಾಮಾಯಣದ ಮೂಲಕ ಶ್ರೀರಾಮನ ಆದರ್ಶ ಏಕಪತ್ನಿ ವ್ರತಸ್ಥ. ಮರ್ಯಾದೆ ಪುರುಷೋತ್ತಮ, ಸಹೋದರರ ಬಗ್ಗೆ ಇರುವ ಪ್ರೀತಿ ಪ್ರಸ್ತುತ ಜನಾಂಗಕ್ಕೆ ದಾರಿದೀಪವಾಗಿದೆ

ಗಂಗಾವತಿ: ರಾಮಾಯಣ ಮಹಾಕಾವ್ಯದ ಮೂಲಕ ವಿಶ್ವಕ್ಕೆ ದಿವ್ಯ ಸಂದೇಶ ನೀಡಿದ ಶ್ರೀಮಹರ್ಷಿ ವಾಲ್ಮೀಕಿ ಅವರ ಹೆಸರನ್ನು ಶಾಶ್ವತವಾಗಿ ಸ್ಮರಿಸುವ ಉದ್ದೇಶದಿಂದ ಗಂಗಾವತಿಯ ಕಿಷ್ಕಿಂದ ಪ್ರಾಂತದ ಭಾಗದಲ್ಲಿ ಅಭಯಾರಣ್ಯ ಸ್ಥಾಪಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಅವರು ತಾಲೂಕಾಡಳಿ, ತಾಪಂ, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಮಹಾಸಭಾ ತಾಲೂಕು ಘಟಕ ಗಂಗಾವತಿ ನೇತೃತ್ವದಲ್ಲಿ ವಾಲ್ಮೀಕಿ ವೃತ್ತದಲ್ಲಿ ಜರುಗಿದ ವಾಲ್ಮೀಕಿ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಅವರಿಂದಲೇ ಶ್ರೀರಾಮಾಯಣದ ಮೂಲಕ ಶ್ರೀರಾಮನ ಆದರ್ಶ ಏಕಪತ್ನಿ ವ್ರತಸ್ಥ. ಮರ್ಯಾದೆ ಪುರುಷೋತ್ತಮ, ಸಹೋದರರ ಬಗ್ಗೆ ಇರುವ ಪ್ರೀತಿ ಪ್ರಸ್ತುತ ಜನಾಂಗಕ್ಕೆ ದಾರಿದೀಪವಾಗಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಕಲ್ಮಠದ ಕೊಟ್ಟೂರು ಮಹಾಸ್ವಾಮಿಗಳು ಒಂದು ಎಕರೆ ಭೂಮಿಯನ್ನು ವಾಲ್ಮೀಕಿ ದೇವಸ್ಥಾನದ ನಿರ್ಮಾಣಕ್ಕೆ ನೀಡುವುದಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ವಿಪ ಸದಸ್ಯ ಎಚ್.ಆರ್.ಶ್ರೀನಾಥ್, ರಾಜಮಾತೆ ಲಲಿತಾರಾಣಿ ರಾಯಲು, ಮಾಜಿ ಶಾಸಕ ಜಿ ವೀರಪ್ಪ, ಜೋಗದ ಹನುಮಂತಪ್ಪ ನಾಯಕ, ಜೋಗದ ನಾರಾಯಣಪ್ಪ ನಾಯಕ, ಸದಸ್ಯ ರಮೇಶ ಚೌಡ್ಕಿ, ವೀರಭದ್ರಪ್ಪ ನಾಯಕ, ಬಸಪ್ಪನಾಯಕ, ರಂಗನಾಥ ವಕೀಲರು, ತಹಸೀಲ್ದಾರ ಯು.ನಾಗರಾಜ್, ನಗರಸಭೆಯ ಪೌರಾಯುಕ್ತ ವಿರೂಪಾಕ್ಷ ಮೂರ್ತಿ, ಅಧ್ಯಕ್ಷೆ ಹೀರಾಬಾಯಿ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ್, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಗ್ಯಾನನಗೌಡ, ಸಂಘದ ಅಧ್ಯಕ್ಷ ವೀರಭದ್ರಪ್ಪ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಹನುಮಂತಪ್ಪ ನಾಯಕ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಅನ್ಯ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬಾರದೆಂದು ಕೈಗೆ ಕಪ್ಪು ಪಟ್ಟಿ ಧರಿಸಿ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.