ಸಾರಾಂಶ
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಅವಳಿ ನಗರಗಳಾದ ಪೊನ್ನಂಪೇಟೆ, ಗೋಣಿಕೊಪ್ಪದ ಅಭಿವೃದ್ಧಿ ದೃಷ್ಟಿಯಿಂದ ಪೊನ್ನಂಪೇಟೆ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಪರಿವರ್ತಿಸಲು ಸಂಪುಟ ದರ್ಜೆ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದರು.
ಶುಕ್ರವಾರ ಇಲ್ಲಿನ ಕಿರೆ ಹೊಳೆಗೆ ಸಣ್ಣ ನೀರಾವರಿ ಇಲಾಖೆಯ ಮೂರು ಕೋಟಿ ರು. ಅನುದಾನದಲ್ಲಿ ಬೈಪಾಸ್ ರಸ್ತೆಯ 7ನೇ ವಿಭಾಗದ ಬಲಪಾರ್ಶ್ವದ ತಡೆಗೋಡೆ ಕಾಮಗಾರಿಗೆ ಭೂಮಿಗೆ ಅಕ್ಷತೆ ಹಾಕುವ ಮೂಲಕ ಚಾಲನೆ ನೀಡಿದರು.
ಗ್ರಾಮ ಪಂಚಾಯಿತಿ ಸೂಕ್ತ ವ್ಯವಸ್ಥೆಯನ್ನು ಹೊಂದಿದ್ದರೂ, ಸಾಕಷ್ಟು ಅನುದಾನವನ್ನ ಒದಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ನಗರಸಭೆ ಅಥವಾ ಪುರಸಭೆಯನ್ನಾಗಿ ಮಾಡಿದಾಗ ದಕ್ಕುವಷ್ಟು ಅನುದಾನವನ್ನು ಬಳಸಿಕೊಳ್ಳಬಹುದಾಗಿದೆ.
ಇದರಿಂದ ಗೋಣಿಕೊಪ್ಪ ಮತ್ತು ಪೊನ್ನಂಪೇಟೆ ನಗರಗಳು ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂಬ ಚಿಂತನೆ ಇದೆ ಎಂದು ಹೇಳಿದರು.
ಕಿರೆ ಹೊಳೆ ಬದಿಗಳಲ್ಲಿ ಮಣ್ಣು ಕುಸಿತದಿಂದ ಸಾಕಷ್ಟು ಅನಾಹುತಗಳು ಸಂಭವಿಸುವ ಅಂದಾಜಿನಿಂದಾಗಿ ೯ ಕೋಟಿ ಅನುದಾನವನ್ನ ಸದ್ಬಳಕೆ ಮಾಡಿಕೊಂಡು ತಡೆಗೋಡೆ ನಿರ್ಮಿಸಲು ಯೋಜನೆ ಅನುಷ್ಠಾನಗೊಳಿಸಲಾಗಿದೆ. ಮೊದಲ ಹಂತವಾಗಿ 3 ಕೋಟಿಯಲ್ಲಿ ರಾಜ ಕಾಲುವೆ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷೆ ಸೌಮ್ಯ ಬಾಲು, ಸದಸ್ಯರಾದ ಚೈತ್ರಾ ಚೇತನ್, ಬಿ.ಎನ್.ಪ್ರಕಾಶ್, ಮಂಜುಳಾ, ರತಿ ಅಚ್ಚಪ್ಪ, ಶರತ್ ಕಾಂತ್, ಕುಲ್ಲಚಂಡ ಗಣಪತಿ, ವಿವೇಕ್ ರಾಯ್ಕರ್, ಧ್ಯಾನ ಸುಬ್ಬಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್.
ನಗರ ಕಾಂಗ್ರೆಸ್ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಹಿರಿಯ ಮುಖಂಡ ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ, ಸಹಾಯಕ ಎಂಜಿನಿಯರ್ ಅರುಣ್, ಗುತ್ತಿಗೆದಾರರಾದ ದೇವರಾಜ್, ದಿನೇಶ್, ಪಕ್ಷದ ಪ್ರಮುಖರಾದ ಟಾಟು ಮೊಣ್ಣಪ್ಪ, ಅರವಿಂದ್ ಕುಟ್ಟಪ್ಪ, ಶಿವಾಜಿ, ವಿ.ಟಿ. ವಾಸು, ರಾಜಶೇಖರ್, ಸಿ.ಡಿ ಮಾದಪ್ಪ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಅಂಕಿತ್ ಪೊನ್ನಪ್ಪ ಮುಂತಾದವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಸೂಕ್ತ ವ್ಯವಸ್ಥೆಯನ್ನು ಹೊಂದಿದ್ದರೂ, ಸಾಕಷ್ಟು ಅನುದಾನವನ್ನ ಒದಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ನಗರಸಭೆ ಅಥವಾ ಪುರಸಭೆಯನ್ನಾಗಿ ಮಾಡಿದಾಗ ದಕ್ಕುವಷ್ಟು ಅನುದಾನವನ್ನು ಬಳಸಿಕೊಳ್ಳಬಹುದಾಗಿದೆ. ಇದರಿಂದ ಗೋಣಿಕೊಪ್ಪ ಮತ್ತು ಪೊನ್ನಂಪೇಟೆ ನಗರಗಳು ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂಬ ಚಿಂತನೆ ಇದೆ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು.