ಪುರಸಭಾ ವ್ಯಾಪ್ತಿ ವಿಸ್ತರಿಸಿ ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸಲಹೆ

| Published : Feb 01 2025, 12:04 AM IST

ಪುರಸಭಾ ವ್ಯಾಪ್ತಿ ವಿಸ್ತರಿಸಿ ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಪಟ್ಟಣದ ಸಮೀಪವೇ ರಾ.ಹೆ. ಬೈಪಾಸ್ ಹಾದುಹೋಗುತ್ತಿದ್ದು, ಪಟ್ಟಣ ಬಳಿ ಇರುವ ಅತ್ತಿಗನಾಳು, ದೋರನಾಳು ಗ್ರಾಪಂಗಳ ಪ್ರದೇಶಗಳನ್ನು ಪುರಸಭಾ ವ್ಯಾಪ್ತಿಯಲ್ಲಿ ಸೇರ್ಪಡೆಗೊಳಿಸಿಕೊಂಡು ಪುರಸಭಾ ಗಡಿ ವಿಸ್ತರಿಸಿ ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಬಹುದು. ಇದರಿಂದ ಪುರಸಭೆಗೂ ಒಳ್ಳೆಯ ಆದಾಯ ಬರುತ್ತದೆ ಎಂದು ಸದಸ್ಯ ಟಿ.ಜಿ.ಶಶಾಂಕ್‌ ಸಲಹೆ ಮಾಡಿದರು.

ತರೀಕೆರೆ ಪುರಸಭೆ ಕಾರ್ಯಾಲಯದಲ್ಲಿ ಸಾಮಾನ್ಯ ಸಭೆಯಲ್ಲಿ ಟಿ.ಜಿ.ಶಶಾಂಕ್‌

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದ ಸಮೀಪವೇ ರಾ.ಹೆ. ಬೈಪಾಸ್ ಹಾದುಹೋಗುತ್ತಿದ್ದು, ಪಟ್ಟಣ ಬಳಿ ಇರುವ ಅತ್ತಿಗನಾಳು, ದೋರನಾಳು ಗ್ರಾಪಂಗಳ ಪ್ರದೇಶಗಳನ್ನು ಪುರಸಭಾ ವ್ಯಾಪ್ತಿಯಲ್ಲಿ ಸೇರ್ಪಡೆಗೊಳಿಸಿಕೊಂಡು ಪುರಸಭಾ ಗಡಿ ವಿಸ್ತರಿಸಿ ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಬಹುದು. ಇದರಿಂದ ಪುರಸಭೆಗೂ ಒಳ್ಳೆಯ ಆದಾಯ ಬರುತ್ತದೆ ಎಂದು ಸದಸ್ಯ ಟಿ.ಜಿ.ಶಶಾಂಕ್‌ ಸಲಹೆ ಮಾಡಿದರು.

ಪುರಸಭಾ ಕಾರ್ಯಾಲಯದಲ್ಲಿ ಗುರುವಾರ ಅಧ್ಯಕ್ಷ ವಸಂತಕುಮಾರ್ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ ಈ ವಿಸ್ತರಣೆಯಿಂದ ಪರಸಭೆ ನಗರಸಭೆಯಾಗಲು ಸಾಧ್ಯವಾಗಲಿದೆ ಎಂದರು.

ಸದಸ್ಯ ಟಿ.ಜಿ.ಲೋಕೇಶ್ ಮಾತನಾಡಿ ಪುರಸಭೆ ವ್ಯಾಪ್ತಿಯಲ್ಲಿ ಈಗಿರುವ ಹಳ್ಳಿಗಳಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿಕೊಡಬೇಕು. ಜಿಲ್ಲಾ ಕೇಂದ್ರದಲ್ಲಿರುವ ಟೌನ್ ಪ್ಲಾನಿಂಗ್ ಅಧಿಕಾರಿಗಳು ವಾರಕ್ಕೊಮ್ಮೆ ಮಾತ್ರ ತರೀಕೆರೆ ಪುರಸಭೆಗೆ ಬರುತ್ತಾರೆ. ಇದರಿಂದ ಅಧಿಕಾರಿಗಳ ನಿರೀಕ್ಷೆಯಲ್ಲಿರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಟೌನ್ ಪ್ಲಾನಿಂಗ್ ಅಧಿಕಾರಿಗಳು ತರೀಕೆರೆ ಪುರಸಭೆಯಲ್ಲಿ ವಾರದಲ್ಲಿ ಮೂರು ದಿನವಾದರೂ ಇರುವ ಹಾಗೆ ಕ್ರಮ ವಹಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳ ಬಳಿಗೆ ನಿಯೋಗ ಹೋಗಬೇಕೆಂದು ಸೂಚಿಸಿದರು.ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ ಪಟ್ಟಣದ ಬಿ.ಎಚ್.ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿರುವಾಗ ತಾಲೂಕು ಕಚೇರಿ ಮುಂಭಾಗದಲ್ಲಿ ಅನಧಿಕೃತವಾಗಿ ಪೆಟ್ಟಿಗೆ ಅಂಗಡಿಗಳು ಪುರಸಭೆ ಜಾಗದಲ್ಲೂ ಪ್ರಾರಂಭವಾಗುತ್ತಿವೆ. ಈ ಬಗ್ಗೆ ಪುರಸಭೆ ಅಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು. ಪಟ್ಟಣದ ನಾಗಪ್ಪ ಕಾಲೋನಿಯಲ್ಲಿ ಸಾರ್ವಜನಿಕ ಗ್ರಂಥಾಲಯ ವಿದ್ದು ಕಟ್ಟಡ ಸುಭದ್ರವಾಗಿದೆ. ಇಲ್ಲಿ ವಿನೂತನ ಮಾದರಿಯ ಡಿಜಿಟಲ್‌ ಗ್ರಂಥಾಲಯ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ಸದಸ್ಯ ಟಿ.ದಾದಾಪೀರ್‌ ಮಾತನಾಡಿ ಪಟ್ಟಣದಲ್ಲಿ ಗ್ರಂಥಾಲಯ ಆರಂಭಿಸಲು ಕ್ರಮ ವಹಿಸಬೇಕು. ಪಟ್ಟಣ ಹೆಚ್ಚು ವಿಸ್ತಾರವಾಗಿದ್ದು ಸಾರ್ವಜ ನಿಕರಿಗೆ ಅನುಕೂಲವಾಗುವಂತೆ ಅಲ್ಲಲ್ಲಿ ಗ್ರಂಥಾಲಯ ತೆರೆಯಬೇಕು ಎಂದರು.ಸದಸ್ಯ ಟಿ.ಜಿ.ಅಶೋಕ್ ಕುಮಾರ್ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದು ವಿಳಂಬವಾಗುತ್ತಿದೆ. ಶೀಘ್ರದಲ್ಲಿ ವಿದ್ಯಾರ್ಥಿ ವೇತನ ವಿತರಿಸಲು ಕ್ರಮವಹಿಸಬೇಕು ಎಂದು ಹೇಳಿದರು.ಪಟ್ಟಣದ ಎಲ್ಲಾ ಕೊಳಚೆ ಪ್ರದೇಶಗಳಲ್ಲೂ ಸಾರ್ವಜನಿಕ ಗ್ರಂಥಾಲಯ ಪ್ರಾರಂಭಿಸಬಹುದು ಎಂದು ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಸಭೆಯಲ್ಲಿ ತಿಳಿಸಿದರು.

ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ಸದಸ್ಯರಾದ ಪರಮೇಶ್, ಕುಮಾರಪ್ಪ, ಬಸವರಾಜ್, ನಾಮಿನಿ ಸದಸ್ಯರಾದ ಟಿ.ಜಿ. ಮಂಜುನಾಥ್, ಟಿ.ಡಿ.ಮಂಜುನಾಥ್, ಅದಿಲ್ ಪಾಷ ವಿವಿಧ ಚರ್ಚೆಯಲ್ಲಿ ಭಾಗವಹಿಸಿದ್ದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ವ್ಯವಸ್ಥಾಪಕ ವಿಜಯಕುಮಾರ್, ಪುರಸಭೆ ನೌಕರರು, ಸದಸ್ಯರು, ನಾಮಿನಿ ಸದಸ್ಯರು, ಭಾಗವಹಿಸಿದ್ದರು.30ಕೆಟಿಆರ್.ಕೆ

ತರೀಕೆರೆಯಲ್ಲಿ ಪುರಸಭಾ ಕಾರ್ಯಾಲಯದಿಂದ ಪುರಸಭೆ ಅಧ್ಯಕ್ಷ ವಸಂತಕುಮಾರ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆನಡೆಯಿತು. ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಇದ್ದರು.