ಸಾರಾಂಶ
ಚಿಕ್ಕಮಗಳೂರುಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆ ನಾಲ್ಕನೇ ಹಂತದ ಕಾಮಗಾರಿಗೆ ಒಂದಿಷ್ಟು ಬೇಡಿಕೆಗಳನ್ನು ಪಂಚಾಯತ್‌ರಾಜ್ ಇಲಾಖೆ ಮುಖಾಂತರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆ ನಾಲ್ಕನೇ ಹಂತದ ಕಾಮಗಾರಿಗೆ ಒಂದಿಷ್ಟು ಬೇಡಿಕೆಗಳನ್ನು ಪಂಚಾಯತ್‌ರಾಜ್ ಇಲಾಖೆ ಮುಖಾಂತರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.ನಗರದ ಸಂಸದರ ಕಚೇರಿಯಲ್ಲಿ ಗ್ರಾಮ್ ಸಡಕ್ ಯೋಜನೆ ಬಗ್ಗೆ ಯೋಜನಾ ಅಧಿಕಾರಿಗಳೊಂದಿಗೆ ಚರ್ಚಿಸಿ ಶನಿವಾರ ಮಾತನಾಡಿದ ಅವರು, ಪ್ರಸ್ತುತ ಯೋಜನೆ ಮಾರ್ಗಸೂಚಿಗಳು ಯಾವುದೇ ಸಂಪರ್ಕವಿಲ್ಲದ ಗ್ರಾಮಕ್ಕೆ ಹೊಸದಾಗಿ ಸಂಪರ್ಕ ಕಲ್ಪಿಸುವುದಾಗಿದೆ ಎಂದರು.ಜಿಲ್ಲೆ ಭೌಗೋಳಿಕವಾಗಿರುವ ಒಟ್ಟು ಪರಿಸ್ಥಿತಿಯಲ್ಲಿ ಒಂದಲ್ಲೊಂದು ರೂಪದಲ್ಲಿ ಗ್ರಾಮಗಳಿಗೆ ರಸ್ತೆ ಸಂಪರ್ಕವಿದ್ದು ಆ ಹಿನ್ನೆಲೆ ಯಲ್ಲಿ ಯೋಜನೆಯನ್ನು ಪೂರೈಸಲು ಮಾರ್ಗಸೂಚಿಗಳಿಲ್ಲ ಎಂಬುದು ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಿದರು. ಹೀಗಾಗಿ ನಕ್ಸಲ್ ಹಾಗೂ ಹಿಂದುಳಿದ ಪ್ರದೇಶವಾದ ಜಿಲ್ಲೆಯಲ್ಲಿ ಹೆಚ್ಚು ಕೃಷಿ ಕ್ಷೇತ್ರವನ್ನು ಅವಲಂಬಿಸಿರುವ ಕಾರಣ ಗ್ರಾಮ್ ಸಡಕ್ ಯೋಜನೆಯ ಮಾರ್ಗಸೂಚಿಗಳಲ್ಲಿ ಕೆಲವು ವಿನಾಯ್ತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸ ಲಾಗಿದೆ ಎಂದು ತಿಳಿಸಿದರು.ಕೇಂದ್ರದಿಂದ ಪ್ರಸ್ತಾವನೆ ಅನುಮೋದನೆ ದೊರೆತಲ್ಲಿ ಯೋಜನೆ ಅನುಷ್ಟಾನಗೊಳಿಸಲು ಸುಲಭವಾಗಲಿದ್ದು ಪಿಎಂಜಿಎಸ್‌ವೈ ಇಲಾಖೆಯಿಂದ ಸಾರ್ವಜನಿಕರಿಗೆ ಅನುಕೂಲಕ್ಕೆ ಪ್ರಸ್ತಾವನೆ ಕಳಿಸಲು ಸೂಚಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪಿಎಂಜಿಎಸ್‌ವೈ ಇಲಾಖೆ ಕಾರ್ಯನಿರ್ವಹಕ ಅಭಿನಂತರ ತರುಣ್ ಶಶಿ, ಸಹಾಯಕ ಕಾರ್ಯ ನಿರ್ವಾಹಕ ಹರೀಶ್, ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ಬೊಗಸೆ ಇದ್ದರು.3 ಕೆಸಿಕೆಎಂ 6ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಗ್ರಾಮ್ ಸಡಕ್ ಯೋಜನೆ ಬಗ್ಗೆ ಯೋಜನಾ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿ ಚರ್ಚಿಸಿದರು.