ಸಾಧಕ ಹೆಣ್ಣುಮಕ್ಕಳು ಇತರರಿಗೆ ಮಾರ್ಗದರ್ಶನ ಮಾಡಿ: ಪಡಲ್ಕರ್‌

| Published : Mar 23 2024, 01:01 AM IST

ಸಾಧಕ ಹೆಣ್ಣುಮಕ್ಕಳು ಇತರರಿಗೆ ಮಾರ್ಗದರ್ಶನ ಮಾಡಿ: ಪಡಲ್ಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ವೃತ್ತಿ, ವ್ಯಾಪಾರ, ಉದ್ಯಮ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹೆಣ್ಣುಮಕ್ಕಳು, ಇನ್ನಿತರೆ ಮಹಿಳೆಯರು ಮುಂದೆ ಬರಲು ಮಾರ್ಗದರ್ಶನ ಮಾಡಬೇಕು ಎಂದು ಎಚ್‌ಡಿಎಫ್‌ಸಿ ಸಿಇಒ ವಿಭಾ ಪಡಲ್ಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವೃತ್ತಿ, ವ್ಯಾಪಾರ, ಉದ್ಯಮ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹೆಣ್ಣುಮಕ್ಕಳು, ಇನ್ನಿತರೆ ಮಹಿಳೆಯರು ಮುಂದೆ ಬರಲು ಮಾರ್ಗದರ್ಶನ ಮಾಡಬೇಕು ಎಂದು ಎಚ್‌ಡಿಎಫ್‌ಸಿ ಸಿಇಒ ವಿಭಾ ಪಡಲ್ಕರ್ ಹೇಳಿದರು.

ಶುಕ್ರವಾರ ನಗರದಲ್ಲಿ ‘ದಿ ಇನ್ಸ್‌ಟಿಟ್ಯೂಟ್ ಆಫ್ ಕಂಪನಿ ಸೆಕ್ಟ್ರೇಟರೀಸ್ ಆಫ್ ಇಂಡಿಯಾ’ (ಐಸಿಎಸ್‌ಐ) ಆಯೋಜಿಸಿದ್ದ ಎರಡನೇ ರಾಷ್ಟ್ರೀಯ ಮಹಿಳಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಸೆಬಿ’ ನೋಂದಾಯಿತ ಅನೇಕ ಕಂಪನಿಗಳಲ್ಲಿ ಹೆಣ್ಣುಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೆಚ್ಚು ಹೆಣ್ಣುಮಕ್ಕಳ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಯಶಸ್ವಿಯಾಗಿವೆ. ಲಾಭದಾಯಕವಾಗಿ, ವಿಸ್ತರಣೆಯಾಗುತ್ತಾ ಹೆಚ್ಚಿನ ಗ್ರಾಹಕರನ್ನು ತಲುಪುತ್ತಿವೆ. ಜೀವನದಲ್ಲಿ ಯಶಸ್ಸು ಸಾಧಿಸಿದ ಹೆಣ್ಣುಮಕ್ಕಳು ಬೇರೆ ಹೆಣ್ಣುಮಕ್ಕಳು ಕೂಡ ಮುಂದೆ ಬರಲು ದಾರಿ ದೀಪವಾಗಿ ಮಾರ್ಗದರ್ಶನ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆಯಾದರೂ, ಇನ್ನಷ್ಟು ಹೆಚ್ಚು ಪ್ರಯತ್ನಗಳು ಆಗಬೇಕು ಎಂದರು.

ಸುಮಾರು ಶೇ.50ರಷ್ಟು ಹೆಣ್ಣುಮಕ್ಕಳು ಭಾರತದ ಕಂಪನಿ ಸೆಕ್ರೆಟರೀಸ್ (ಸಿಎಸ್‌) ಮತ್ತು ಐಸಿಎಸ್‌ಐನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೆಣ್ಣುಮಕ್ಕಳಿಗೆ ಇನ್ನಷ್ಟು ಅವಕಾಶಗಳನ್ನು ಕಲ್ಪಿಸಿಕೊಡಲು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಹೆಣ್ಣುಮಕ್ಕಳ ಸಬಲೀಕರಣ ವಿಚಾರದಲ್ಲಿ ಐಸಿಎಸ್‌ಐ ಮುಂಚೂಣಿಯಲ್ಲಿದೆ ಎಂದು ಐಸಿಎಸ್‌ಐ ಅಧ್ಯಕ್ಷ ಸಿ.ಎಸ್.ಬಿ. ನರಸಿಂಹನ್ ಹೇಳಿದರು.