ನಾವೆಲ್ಲ ಒಂದು ನಾವೆಲ್ಲ ಹಿಂದೂ ಎಂದು ಘೋಷಣೆ ಮಾಡಿದಿರಲ್ಲದೆ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಜನತೆ ಭಾಗಿಯಾಗಿರುವುದು ನನಗೆ ಸಂತಸ ತಂದಿದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಮುಳಬಾಗಿಲುಬೇರೆ ಧರ್ಮಗಳು ಸನಾತನ ಹಿಂದು ಧರ್ಮವನ್ನು ಛಿದ್ರ ಮಾಡಲು ಹೊರಟಿವೆ. ಜೊತೆಗೆ ಬೇರೆ ಧರ್ಮಗಳಿಗೆ ಹಿಂದೂ ಧರ್ಮದವರನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದಾರೆ, ಇದಕ್ಕೆ ನಮ್ಮ ಹಿಂದುಗಳು ಅವಕಾಶ ನೀಡದೆ ಎಚ್ಚೆತ್ತುಕೊಳ್ಳುವ ಮೂಲಕ ಸನಾತನ ಹಿಂದೂ ಧರ್ಮವನ್ನು ರಕ್ಷಿಸಿ ಬೆಳೆಸಿ ಉಳಿಸಬೇಕೆಂದು ಜೆಡಿಎಸ್ ಶಾಸಕ ಸಮೃದ್ಧಿ ವಿ.ಮಂಜುನಾಥ್ ಕರೆ ನೀಡಿದರು.ನಗರದ ನೇತಾಜಿ ಕ್ರೀಡಾಂಗಣದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯಿಂದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವೆಲ್ಲ ಒಂದು ನಾವೆಲ್ಲ ಹಿಂದೂ ಎಂದು ಘೋಷಣೆ ಮಾಡಿದಿರಲ್ಲದೆ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಜನತೆ ಭಾಗಿಯಾಗಿರುವುದು ನನಗೆ ಸಂತಸ ತಂದಿದೆ ಎಂದು ತಿಳಿಸಿದರು.ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ರಾಜ್ಯದ ಮೂಡಣ ದಿಕ್ಕಿನಲ್ಲಿರುವ ಸೂರ್ಯ ಪ್ರತಿದಿನ ಬೆಳಗಿನ ಜಾವ ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ಉದಯಿಸುವ ಮುಳಬಾಗಿಲು ಕ್ಷೇತ್ರದಲ್ಲಿ ನಡೆಯುತ್ತಿರುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ನನಗೆ ಅಧ್ಯಕ್ಷತೆ ನೀಡಿರುವುದು ನನ್ನ ಪೂರ್ವ ಜನ್ಮದ ಪುಣ್ಯ. ನಿಮಗೂ ಮತ್ತು ನಮ್ಮ ಹಿಂದೂ ಸಮಾಜಕ್ಕೆ ಈ ಕ್ಷೇತ್ರದ ಜನತೆಗೆ ನಾನು ತಲೆಬಾಗಿ ನಮಿಸುತ್ತೇನೆ ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ಜಾತಿ ಜಾತಿಗಳನ್ನು ವಿಂಗಡಣೆ ಮಾಡಿ ಹಿಂದೂ ಧರ್ಮಕ್ಕೆ ಧಕ್ಕೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ ಈಗ ನಾನು ಎಂಬುದರ ಬದಲು ನಾವೆಲ್ಲ ಹಿಂದೂಗಳು ಎನ್ನುವ ಘೋಷವಾಕ್ಯ ಪ್ರತಿಯೊಬ್ಬರು ಮನದಾಳ ಆಗಬೇಕು ಎಂದು ಕರೆ ನೀಡಿದರು.ಖ್ಯಾತ ಜ್ಯೋತಿಷ್ಯ ದೇವಿ ಶ್ರೀ ಗುರೂಜಿ ಮಾತನಾಡಿ, ಸನಾತನ ಹಿಂದೂ ಧರ್ಮಕ್ಕೆ ಸಾವೇ ಇಲ್ಲ, ಹಾದಿಯೂ ಇಲ್ಲ, ಅಂತ್ಯವೂ ಇಲ್ಲ. ಅಹಂಕಾರ ಇಲ್ಲದ ಧರ್ಮ ಹಿಂದೂ ಧರ್ಮ ಜೊತೆಗೆ ಹಿಂದೂ ಧರ್ಮಕ್ಕೆ ಮಾತ್ರ ಮಾನವೀಯತೆ ಇದೆ. ಹಿಂದೂ ಧರ್ಮ ಆಕಾಶ ಎಷ್ಟು ಹಬ್ಬಿದ್ಯೋ ಅಲ್ಲಿವರೆಗೂ ಹಿಂದೂ ಧರ್ಮ ಹರಡಿದೆ ಎಂದರು.
ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ಶಾರೀರಿಕ ಪ್ರಮುಖ್ ಸತೀಶ್ ಕುತ್ಯಾರ್ ತಮ್ಮ ದಿಕ್ಸೂಚಿ ಭಾಷಣದಲ್ಲಿ ಹಿಮಾಲಯದಿಂದ ಕಾಶ್ಮೀರವರಿಗೂ ಹಿಂದೂ ಧರ್ಮ ಹರಡಿದ್ದು ಹಿಂದುತ್ವ ಮತ್ತೆ ಎದ್ದು ಸುವರ್ಣ ಯುಗ ಕಾಲ ಬರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.ಕೊರ್ಲಹಳ್ಳಿ ವೆಂಕಟೇಶ ಆಚಾರಿ, ಹೊಸಕೋಟೆ ಡಾ.ಲಕ್ಷ್ಮಿ, ಮುಳಬಾಗಿಲಿನ ಕಾಶಿನಾಥ್ ಶೆಟ್ಟಿ, ಆರ್‌ಎಸ್‌ಎಸ್ ನಾರಾಯಣಪ್ಪ, ಆರ್‌ಎಸ್‌ಎಸ್ ನರೇಂದ್ರ ಇದ್ದರು.
ನಗರದ ಪ್ರಮುಖ ಬೀದಿಗಳಲ್ಲಿ ಹಿಂದೂ ಸಮಾಜೋತ್ಸವದ ಪ್ರಯುಕ್ತ ಕೇಸರಿ ಬಣ್ಣದ ಧ್ವಜ ಮತ್ತು ಬಾವುಟಗಳನ್ನು ಸಿಂಗರಿಸಿ ಅಲಂಕರಿಸಲಾಗಿತ್ತು.