ಶುದ್ಧ ಗಾಳಿ, ನೀರಿಗಾಗಿ ಪರಿಸರ ರಕ್ಷಿಸಿ: ಗಿರೀಶ

| Published : Jun 06 2024, 12:31 AM IST

ಸಾರಾಂಶ

ಶುದ್ಧ ಗಾಳಿ, ಆಹಾರ, ಮಳೆ ಮುಂತಾಗಿ ಎಲ್ಲವಕ್ಕೂ ಉತ್ತಮ ಪರಿಸರ ಅಗತ್ಯ. ಪರಿಸರ ಸಂರಕ್ಷಣೆ ಮತ್ತು ಗಿಡಮರಗಳ ಪೋಷಣೆ ಅತಿ ಅಗತ್ಯ.

ಸಿದ್ದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಮನ್ಮನೆಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಗಿರೀಶ ಜಿ. ಕಾರ್ಯಕ್ರಮ ಉದ್ಘಾಟಿಸಿ ಪರಿಸರ ರಕ್ಷಣೆಯ ಕುರಿತು ವಿವರಿಸಿದರು. ಪ್ರೌಢಶಾಲಾ ಮುಖ್ಯಾಧ್ಯಾಪಕ ರವಿಕುಮಾರ್ ಮಾತನಾಡಿ, ಶುದ್ಧ ಗಾಳಿ, ಆಹಾರ, ಮಳೆ ಮುಂತಾಗಿ ಎಲ್ಲವಕ್ಕೂ ಉತ್ತಮ ಪರಿಸರ ಅಗತ್ಯ. ಪರಿಸರ ಸಂರಕ್ಷಣೆ ಮತ್ತು ಗಿಡಮರಗಳ ಪೋಷಣೆ ಅತಿ ಅಗತ್ಯ ಎಂದರು.

ಶಿಕ್ಷಕಿ ರೀನಾ ಗಿಡಗಳ ನಾಟಿ, ಸಂರಕ್ಷಣೆ, ಪರಿಸರದ ವಿವಿಧ ಹಂತಗಳು, ಪರಿಸರದ ಪ್ರಯೋಜನದ ಕುರಿತು ವಿದ್ಯಾರ್ತಿಗಳಿಗೆ ವಿವರಿಸಿದರು.

ಒಕ್ಕೂಟದ ಅಧ್ಯಕ್ಷೆ ಮಧುರ ನಾಯ್ಕ, ಶಿಕ್ಷಕರಾದ ಮೊಹಮ್ಮದ್ ಇರ್ಫಾನ್, ನಾಜಿಯಾ, ಜಯಶ್ರೀ, ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು.

ಮೇಲ್ವಿಚಾರಕಿ ಪೂರ್ಣೀಮಾ ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ಮಹಾದೇವ ಬಿ. ನಿರೂಪಿಸಿದರು. ಸೇವಾಪ್ರತಿನಿಧಿ ಅಣ್ಣಪ್ಪ ವಂದಿಸಿದರು. ಈ ಸಂದರ್ಭದಲ್ಲಿ ಪ್ರೌಢಶಾಲಾ ಆವರಣದಲ್ಲಿ ೫೦ ಗಿಡಗಳನ್ನು ನಾಟಿ ಮಾಡಲಾಯಿತು.

ಕೋಲಸಿರ್ಸಿ: ತಾಲೂಕಿನ ನಾಡದೇವಿ ಹೋರಾಟ ವೇದಿಕೆ ವತಿಯಿಂದ ಕೋಲಸಿರ್ಸಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಜರುಗಿತು. ಸಾಮಾಜಿಕ ಕಾರ್ಯಕರ್ತ ವೀರಭದ್ರ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿ ಹರೀಶ ನಾಯ್ಕ ಹಸ್ವಿಗುಳಿ, ನಾಡದೇವಿ ಹೋರಾಟ ವೇದಿಕೆಯ ಅಧ್ಯಕ್ಷ ಅನಿಲ ಕೊಠಾರಿ, ಪ್ರಾಚಾರ್ಯ ಪ್ರಶಾಂತ ತಾರಿಬಾಗಿಲು, ಆನಂದ ನಾಯ್ಕ ಪರಿಸರ ಸಂರಕ್ಷಣೆ ಕುರಿತು ಮಾತನಾಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ ನಾಯ್ಕ ಕತ್ತಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಕನ್ನೇಶ ಕೋಲಸಿರ್ಸಿ ಉಪನ್ಯಾಸ ನೀಡಿದರು. ಗಣೇಶ ಮಡಿವಾಳ, ಅಣ್ಣಪ್ಪ ಚಲುವಾದಿ ನಂದನ ಹಾರ್ಸಿಕಟ್ಟ ಮುಂತಾದವರು ಉಪಸ್ಥಿತರಿದ್ದರು.

ಪತ್ರಕರ್ತ ದಿವಾಕರ ಸಂಪಖಂಡ ಸ್ವಾಗತಿಸಿದರು. ಉಪನ್ಯಾಸಕ ಮಂಜಪ್ಪ ವಂದಿಸಿದರು. ಉಪನ್ಯಾಸಕ ಗೋಪಾಲ ಕಾನಳ್ಳಿ ನಿರೂಪಿಸಿದರು. ಈ ಸಂದರ್ಭದಲ್ಲಿ ಕಾಲೇಜು ಆವರಣದಲ್ಲಿ ಹನ್ನೀನ ಹಾಗೂ ಔಷಧಿಯ ಸಸ್ಯಗಳನ್ನು ನೆಡಲಾಯಿತು.