ಹರವಿ ಗ್ರಾಮಕ್ಕೆ ಭೇಟಿ ನೀಡಿ ದಾಖಲನೆಗಳನ್ನು ಪರಿಶೀಲನೆ ಮಾಡಿದರು. ದೇವಸ್ಥಾನ ಮತ್ತು ಜಮೀನಿನ ಸ್ಥಳಕ್ಕೆ ಭೇಟಿ ನೀಡಿದ್ದರು.
ಹೂವಿನಹಡಗಲಿ: ತಾಲೂಕಿನ ಹರವಿ ಗ್ರಾಮದ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಸೇರಿದ್ದ 165, 166 ಸರ್ವೇ ನಂಬರಿನ 35.96 ಎಕರೆ ಜಮೀನನ್ನು, ಖಾಸಗಿ ವ್ಯಕ್ತಿಯೊಬ್ಬರು ಕಬಳಿಸುವ ಹುನ್ನಾರ ನಡೆದಿದೆ. ಈ ಭೂಮಿಯನ್ನು ದೇವಸ್ಥಾನಕ್ಕೆ ಉಳಿಸಬೇಕೆಂದು ಗ್ರಾಮಸ್ಥರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಉಪ ವಿಭಾಗಾಧಿಕಾರಿ ಟಿ.ಸುರೇಶಕುಮಾರ ಅವರಿಗೆ ಮನವಿ ಸಲ್ಲಿಸಿದರು.ದೇವಸ್ಥಾನಕ್ಕೆ ಸೇರಿದ್ದ ಈ ಜಮೀನು ವಿವಾದದ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ಟಿ.ಸುರೇಶಕುಮಾರ, ಹರವಿ ಗ್ರಾಮಕ್ಕೆ ಭೇಟಿ ನೀಡಿ ದಾಖಲನೆಗಳನ್ನು ಪರಿಶೀಲನೆ ಮಾಡಿದರು. ದೇವಸ್ಥಾನ ಮತ್ತು ಜಮೀನಿನ ಸ್ಥಳಕ್ಕೆ ಭೇಟಿ ನೀಡಿದ್ದರು.
ದಾಖಲೆಗಳ ಪರಿಶೀಲನೆ ವೇಳೆ ದೇವಸ್ಥಾನದ ಜಾಮೀನಿನ ಹಕ್ಕು ಹಾಗೂ ಸಂರಕ್ಷಣೆ ಕುರಿತಂತೆ ಮುಖಂಡ ನಾಗರಾಜಪ್ಪ ಕೆಂಚಮ್ಮನವರ, ದೇವಸ್ಥಾನ ಸಮಿತಿ ಅಧ್ಯಕ್ಷ ನಿತ್ಯಾನಂದ ಯಲಮಣ್ಣನವರ್, ಉಪಾಧ್ಯಕ್ಷ ಶಿವಯೋಗಿ ಉದಾಸಿ, ಕಾರ್ಯದರ್ಶಿ ರಾಮಚಂದ್ರಪ್ಪ ಗುಬ್ಬಿ, ಖಜಾಂಚಿ ಕನ್ನಪ್ಪ ಕಾಟಣ್ಣನವರ್ ಸೇರಿದಂತೆ ಸಮಿತಿಯ ಸದಸ್ಯರು, ಹರವಿ ಗ್ರಾಮದ ಲಕ್ಷ್ಮೀ ನಾರಾಯಣ ದೇವಸ್ಥಾನ ಬಹಳ ಪುರಾತನ ಕಾಲದಲ್ಲೇ ನಿರ್ಮಾಣವಾಗಿದೆ. ದೇವಸ್ಥಾನ ಜೀರ್ಣೋದ್ಧಾರಕ್ಕಾಗಿಯೇ ಇರುವ ಜಮೀನನ್ನು ಸಂರಕ್ಷಣೆ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ, ದೇವಸ್ಥಾನದ ಜಮೀನಿಗೆ ಸಂಬಂಧಿತ ದಾಖಲೆಗಳು ಹಾಗೂ ಕಾನೂನು ಅಂಶಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ವೇಳೆ ತಹಸೀಲ್ದಾರ್ ಕೆ.ಎಂ. ಗುರುಬಸವರಾಜ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಗೌಡ, ಎಂ.ದಿವಾಕರ್, ಸೈಫುಲ್ಲ ಖಾನ್, ರಾಜೇಂದ್ರ ಬಾಬು, ಎಸ್. ಹಾಲೇಶ್ ನಾಯಕ್, ನಾಗರಾಜಪ್ಪ, ಸುಭಾಷ ಗಿರಿಯಣ್ಣನವರ್, ಬಸಲಿಂಗಪ್ಪ ಕುಂಚೂರು, ವೆಂಕಟೇಶ್ ಕಾಟಣ್ಣನವರ್, ಶಿವಲಿಂಗಪ್ಪ ಲಕ್ಕಪ್ಪನವರ್, ಮೌನೇಶ್ ಬಡಿಗೇರ್, ಕೊಟ್ರೇಶ್ ಕೋರಿ, ಬಸವರಾಜ್ ಮಡಿವಾಳರ್, ಗ್ರಾಮಸ್ಥರು ಉಪಸ್ಥಿತರಿದ್ದರು.