ಸಾರಾಂಶ
ಪ್ರಕೃತಿ, ಪರಿಸರ ನಮ್ಮೆಲ್ಲರ ಪಾಲಿಗೂ ದೇವರಿದ್ದಂತೆ. ಜಾಗತೀಕರಣದಿಂದ ಪ್ರಕೃತಿ ಮುನಿದು ಹಲವು ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ. ಪರಿಸರ ಉತ್ತಮವಾಗಿದ್ದರೆ ಮನುಷ್ಯರು ಸಹ ಆರೋಗ್ಯವಾಗಿರುತ್ತಾರೆ. ಪರಿಸರ ಹದಗೆಟ್ಟರೆ ಮನುಷ್ಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪರಿಸರ ಸಂರಕ್ಷಣೆ ಗುರಿಯಾಗಿಟ್ಟುಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಗಳು ಮನೆಗೊಂದು ಗಿಡನೆಟ್ಟು ಪರಿಸರ ರಕ್ಷಣೆ ಮಾಡಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತಾ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಎನ್.ಕಾಂತರಾಜ್ ಸಲಹೆ ನೀಡಿದರು.ತಾಲೂಕಿನ ಎಲೆಕೆರೆ ಹ್ಯಾಂಡ್ ಪೋಸ್ಟ್‌ನಲ್ಲಿ ಇರುವ ಆದರ್ಶ ವಿದ್ಯಾಲಯ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ನಡೆದ ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಲಿಖಿತ ರಸಪ್ರಶ್ನೆ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಮುಖ್ಯ ಗುರಿಯಾಗಬೇಕು. ಜವಾಬ್ದಾರಿಯಿಂದ ವಿದ್ಯಾರ್ಥಿಗಳು ಪರಿಸರ ಜಾಗೃತಿ ಮೂಡಿಸಿಕೊಂಡು ಪ್ರತಿವರ್ಷಕೊಮ್ಮ ಒಂದೊಂದು ಗಿಡನೆಟ್ಟು ಬೆಳೆಸಬೇಕು ಎಂದರು.ಪ್ರಕೃತಿ, ಪರಿಸರ ನಮ್ಮೆಲ್ಲರ ಪಾಲಿಗೂ ದೇವರಿದ್ದಂತೆ. ಜಾಗತೀಕರಣದಿಂದ ಪ್ರಕೃತಿ ಮುನಿದು ಹಲವು ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ. ಪರಿಸರ ಉತ್ತಮವಾಗಿದ್ದರೆ ಮನುಷ್ಯರು ಸಹ ಆರೋಗ್ಯವಾಗಿರುತ್ತಾರೆ. ಪರಿಸರ ಹದಗೆಟ್ಟರೆ ಮನುಷ್ಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು, ಪ್ಲಾಸ್ಟಿಕ್ ಮುಕ್ತ ಪರಿಸರ ಸಂರಕ್ಷಣೆ ಮಾಡುವ ಮೂಲಕ ಪರಿಸರ ಮಾಲಿನ್ಯವಾಗದಂತೆ ತಡೆಗಟ್ಟುವ ಕೆಲಸವಾಗಬೇಕು ಎಂದರು.ಇದೇ ವೇಳೆ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಕುರಿತಂತೆ ಲಿಖಿತ ರಸಪ್ರಶ್ನೆ ಸ್ಪರ್ಧೆ ನಡೆದು ವಿಜೇತರಾದ ವಿದ್ಯಾರ್ಥಿಗಳಾದ ಸೀಮಾ, ಪುನೀತ್‌ಗೌಡ, ವರ್ಷಿತ ಅವರಿಗೆ ನಗದು ಬಹುಮಾನ ನೀಡಿ ಗೌರವಿಸಿ ಪ್ರಶಂಸಾ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಮಹೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ ಎನ್.ಸಿ., ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಪುಟ್ಟಸ್ವಾಮಿ, ವಿಜ್ಞಾನ ಶಿಕ್ಷಕ ಶಾಹೀನ್ ತಾಜ್, ಕನ್ನಡ ಶಿಕ್ಷಕ ಚೆಲುವರಾಜು ಭಾಗವಹಿಸಿದ್ದರು.