ಮಕ್ಕಳ ಹಕ್ಕುಗಳನ್ನು ಕಾಯುವುದು ಅತ್ಯಂತ ಅವಶ್ಯ-ಜನಾರ್ದನ

| Published : Nov 16 2024, 12:34 AM IST

ಮಕ್ಕಳ ಹಕ್ಕುಗಳನ್ನು ಕಾಯುವುದು ಅತ್ಯಂತ ಅವಶ್ಯ-ಜನಾರ್ದನ
Share this Article
  • FB
  • TW
  • Linkdin
  • Email

ಸಾರಾಂಶ

ಹದಿನಾಲ್ಕು ವರ್ಷ ವಯೋಮಾನದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಮತ್ತು ಮಕ್ಕಳ ಹಕ್ಕುಗಳನ್ನು ಕಾಯುವುದು ಅತ್ಯಂತ ಅವಶ್ಯವಾಗಿದೆಯಲ್ಲದೆ ,ಇಂದಿನ ಮಕ್ಕಳೇ ನಾಳಿನ ಈ ನಾಡಿದ ಸಮರ್ಥ ಆಸ್ತಿ ಶಕ್ತಿ ಎಂದು ಹಾನಗಲ್ಲ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಎಸ್.ಕೆ. ಜನಾರ್ಧನ ತಿಳಿಸಿದರು.

ಹಾನಗಲ್ಲ: ಹದಿನಾಲ್ಕು ವರ್ಷ ವಯೋಮಾನದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಮತ್ತು ಮಕ್ಕಳ ಹಕ್ಕುಗಳನ್ನು ಕಾಯುವುದು ಅತ್ಯಂತ ಅವಶ್ಯವಾಗಿದೆಯಲ್ಲದೆ ,ಇಂದಿನ ಮಕ್ಕಳೇ ನಾಳಿನ ಈ ನಾಡಿದ ಸಮರ್ಥ ಆಸ್ತಿ ಶಕ್ತಿ ಎಂದು ಹಾನಗಲ್ಲ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಎಸ್.ಕೆ. ಜನಾರ್ದನ ತಿಳಿಸಿದರು.ಹಾನಗಲ್ಲ ತಾಲೂಕಿನ ಅರಳೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಸಂಯುಕ್ತವಾಗಿ ಆಯೋಜಿಸಿದ ಕಾನೂನು ಅರಿವು ನೆರವು ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ಶಾಲೆಯಲ್ಲಿ ಓದಿದವರು ಬಹು ಎತ್ತರಕ್ಕೆ ಬೆಳೆದವರಿದ್ದಾರೆ. ಸರಕಾರಿ ಶಾಲೆಗಳನ್ನು ಇನ್ನೂ ಹೆಚ್ಚು ಗುಣಾತ್ಮಕ ಮಾಡಲು ಮುಂದಾಗಬೇಕು. ಪ್ರಾಥಮಿಕ ಶಾಲೆಯಲ್ಲಿ ಓದಿದ ನೆನಪುಗಳು ಮರೆಯಲು ಸಾಧ್ಯವಿಲ್ಲ. ಈ ವಯೋಮಾನದ ಮಕ್ಕಳಿಗೆ ಅತ್ಯಂತ ಸಂತೋಷವಾಗಿರುವುದನ್ನು ಕಲಿಸಬೇಕು ಎಂದರು.ನ್ಯಾಯವಾದಿ ಶೃತಿ ಜಾಧವ ಮಾತನಾಡಿ, ನಮ್ಮ ಸಂವಿಧಾನದಲ್ಲಿ ಮಕ್ಕಳಿಗೆ ಅತಿ ಹೆಚ್ಚು ಸೌಲಭ್ಯಗಳು ಇವೆ. ಅವುಗಳ ಸದುಪಯೋಗ ಆಗಬೇಕು. ಮಕ್ಕಳ ಹಕ್ಕುಗಳು ಅವರಿಗೆ ನಿಲುಕಬೇಕು. ಇಂದಿನ ಸ್ಪರ್ಧಾತ್ಮ ಜಗತ್ತನ್ನು ಎದುರಿಸುವ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದಲೇ ನೀಡಬೇಕು. ಮಾನವೀಯ ಮೌಲ್ಯದ ಶಿಕ್ಷಣಕ್ಕೆ ಆದ್ಯತೆ ನೀಡೋಣ ಎಂದರು.ವಕೀಲರ ಸಂಘದ ಕಾರ್ಯದರ್ಶಿ ನ್ಯಾಯವಾದಿ ಎಂ.ಎಸ್. ಕಾಳಂಗಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪಾಲಕರ ಪಾತ್ರವೂ ಬಹು ಪ್ರಮುಖವಾದುದು. ಎಲ್ಲ ಸಂದರ್ಭಗಳಲ್ಲಿ ಶಿಕ್ಷಕರೇ ಎಲ್ಲ ಹೊಣೆ ಹೊರಲಾಗದು. ಪ್ರತಿ ಮಗುವನ್ನು ಅವರ ಪಾಲಕರು ಪೋಷಕರು ಕಾಳಜಿ ಮಾಡಬೇಕು. ಅಲ್ಲದೆ ಅವರ ಶೈಕ್ಷಣಿಕ ಬೆಳವಣಿಗೆ ಗಮನಿಸಿ ಅಗತ್ಯ ಸಲಹೆ ಮಾರ್ಗದರ್ಶನಗಳನ್ನೂ ನೀಡುವ ಅಗತ್ಯವಿದೆ ಎಂದರು.

ಮುಖ್ಯ ಶಿಕ್ಷಕ ವಾಯ್.ಡಿ. ಹೊಸಮನಿ ಅಧ್ಯಕ್ಷತೆವಹಿಸಿದ್ದರು. ಶಿಕ್ಷಕ ಸುಭಾಸ ಹೊಸಮನಿ ಪ್ರಾಸ್ತಾವಿಕ ಮಾತನಾಡಿದರು. ಎಸ್.ಕೆ.ಶಾಸ್ತ್ರಿ, ಶಿಕ್ಷಕರಾದ ಬಿ.ಎನ್. ಕರೇಪ್ಯಾಟಿ, ನಾಗರಾಜ ಪೂಜಾರ, ಸುಶ್ಮಿತಾ ಹೀರೂರ, ರೂಪಾ ಪಾಟೀಲ, ಗಂಗಮ್ಮ ನಾಗನೂರ, ರಾಜೇಶ್ಚರಿ, ಶಿಲ್ಪಾ ನಂದಿಕೋಲ್ ಇದ್ದರು.