ಕಾಲುಬಾಯಿ ಜ್ವರಕ್ಕೆ ಲಸಿಕೆಯಿಂದ ರಕ್ಷಣೆ: ನವೀನ್‌ಕುಮಾರ್

| Published : Nov 16 2024, 12:31 AM IST

ಸಾರಾಂಶ

Protection against foot-and-mouth disease vaccine: Naveen Kumar

-ಪಶುವೈದ್ಯ ಇಲಾಖೆಯಿಂದ ಜಾನುವಾರು ಕಾಲುಬಾಯಿಜ್ವರ ನಿಯಂತ್ರಣ ಲಸಿಕೆ ವಿತರಣೆ

----

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಪಶುವೈದ್ಯ ಅಧಿಕಾರಿಗಳ ತಂಡ ಗ್ರಾಮದೆಲ್ಲೆಡೆ ಸಂಚರಿಸಿ ಜಾನುವಾರುಗಳಿಗೆ ಲಸಿಕೆ ನೀಡುವ ಮೂಲಕ ಅವುಗಳ ಸಂರಕ್ಷಣೆಗೆ ಮುಂದಾಗಿರುವುದು ಸಂತಸ ಸಂಗತಿ ಎಂದು ನಗರಂಗೆರೆ ಗ್ರಾಮ ಪಂಚಾಯಿತಿ ಸದಸ್ಯ ನವೀನ್‌ಕುಮಾರ್ ಹೇಳಿದರು.

ಹೊಟ್ಟೆಪ್ಪನಹಳ್ಳಿ ಮೇಗಳಗೊಲ್ಲರಹಟ್ಟಿಯಲ್ಲಿ ಪಶುವೈದ್ಯ ಇಲಾಖೆಯಿಂದ ಜಾನುವಾರುಗಳ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಭಾಗಗಳಲ್ಲಿ ಜಾನುವಾರು ಕಾಲುಬಾಯಿ ಜ್ವರದಿಂದ ನರಳಿ ಸಾವನಪ್ಪುತ್ತಿರುವ ಸಂಖ್ಯೆ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಲು ಪಶುವೈದ್ಯ ಇಲಾಖೆ ಮುಂದಾಗಿದೆ. ಈಗಾಗಲೇ ಪಶುವೈದ್ಯ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರನ್ನು ಜಾಗೃತಗೊಳಿಸಿ ಜಾನುವಾರುಗಳಿಗೆ ಕಾಲುಬಾಯಿಜ್ವರ ನಿಯಂತ್ರಣ ಲಸಿಕೆ ಹಾಕುವ ಮೂಲಕ ಅವುಗಳನ್ನು ಸಾವಿನಿಂದ ಕಾಪಾಡಿದ್ದಾರೆ. ಪಶುವೈದ್ಯ ಇಲಾಖೆ ಸಹಕಾರ ಇದೇ ರೀತಿ ಮುಂದುವರೆಯಬೇಕು ಎಂದರು.

ಇದೇ ವೇಳೆ ಗ್ರಾಮಸ್ಥರು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೇವಣ್ಣ, ಡಾ.ಶ್ರೀನಿವಾಸ್‌ ಬಾಬು ಅವರನ್ನು ಸನ್ಮಾನಿಸಿದರು.

ಪಶುವೈದ್ಯ ಇಲಾಖೆಯ ಡಾ.ರೇವಣ್ಣ ಮಾತನಾಡಿ, ಪ್ರಸ್ತುತ ಗ್ರಾಮದಲ್ಲಿ ಒಟ್ಟು ೪೫೦೦ ಕುರಿ, ಮೇಕೆಗಳಿಗೆ ಜಂತುನಾಶಕ ಔಷಧಿಯನ್ನು ವಿತರಣೆ ಮಾಡಲಾಗಿದೆ. ೨೫೦ಕ್ಕೂ ಹೆಚ್ಚು ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ಹಾಕಲಾಗಿದೆ. ಗ್ರಾಮಸ್ಥರು ತಮ್ಮ ಜಾನುವಾರುಗಳಿಗೆ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಕೂಡಲೇ ಪಶುವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಶ್ರೀನಿವಾಸ್, ಈರಣ್ಣ, ಚಿಕ್ಕಣ್ಣ, ರಾಜಣ್ಣ, ಗಟ್ಟೆಪ್ಪ, ಕುಮಾರ್, ಕುರಿಚಿಕ್ಕಣ್ಣ, ಪೂಜಾರಿಕಾಟಯ್ಯ, ಸಿರಿಯಣ್ಣ, ಕಾಟಯ್ಯ, ಗೋವಿಂದಪ್ಪ ಇದ್ದರು.

----------

ಪೋಟೋ: ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಮೇಗಳಗೊಲ್ಲರಹಟ್ಟಿಯಲ್ಲಿ ಪಶುವೈದ್ಯ ಇಲಾಖೆಯಿಂದ ಜಾನುವಾರುಗಳ ಕಾಲುಬಾಯಿಜ್ವರ ನಿಯಂತ್ರಣ ಲಸಿಕೆ ವಿತರಿಸಲಾಯಿತು.

-----

೧೩ಸಿಎಲ್‌ಕೆ೧