ಪಿರಿಯಾಪಟ್ಟಣ ತಾಲೂಕಿನಾದ್ಯಂತ ಭಾರಿ ಮಳೆ, ರೈತ ಕಂಗಾಲು

| Published : Jun 04 2024, 12:30 AM IST

ಪಿರಿಯಾಪಟ್ಟಣ ತಾಲೂಕಿನಾದ್ಯಂತ ಭಾರಿ ಮಳೆ, ರೈತ ಕಂಗಾಲು
Share this Article
  • FB
  • TW
  • Linkdin
  • Email

ಸಾರಾಂಶ

ಬೆಟ್ಟದಪುರ ಹೋಬಳಿಯಾದ್ಯಂತ ಸೋಮವಾರ ಸಂಜೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಅತ್ತಿಗೋಡು, ಚಪ್ಪರದಹಳ್ಳಿ, ಹಾರನಹಳ್ಳಿ, ಚಿಕ್ಕನೇರಳೆ, ಹಲಗನಹಳ್ಳಿ, ಕಿತ್ತೂರು ಭಾಗಗಳಲ್ಲಿಯೂ ಹೆಚ್ಚು ಮಳೆಯಾಗಿದೆ.

ಕನ್ನಡಪ್ರಭ ವಾರ್ತೆ ಬೆಟ್ಟದಪುರ

ಪಿರಿಯಾಪಟ್ಟಣ ತಾಲೂಕಿನ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ರೈತರು ಕಂಗಾಲಾಗಿದ್ದಾರೆ.

ಗ್ರಾಮದ ಸಮೀಪ ಲಕ್ಷ್ಮಿಪುರ ಗ್ರಾಮದಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಮಳೆಗೆ ಜಮೀನಿಗೆ ಜಾನುವಾರುಗಳನ್ನು ಮೇಯಿಸಲು ಹೋಗಿದ್ದ ರೈತ ಹಾಗೂ ಜಾನುವಾರುಗಳು ನೀರಿನ ಸೆಳೆತಕ್ಕೆ ಸಿಲುಕಿದ್ದರು. ವಿಷಯ ತಿಳಿದ ಅಕ್ಕಪಕ್ಕದ ರೈತರು ಸಹಾಯಕ್ಕೆ ಬಂದು ರೈತ ಹಾಗೂ ಜಾನುವಾರಗಳನ್ನು ರಕ್ಷಣೆ ಮಾಡಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

ಬೆಟ್ಟದಪುರ ಹೋಬಳಿಯಾದ್ಯಂತ ಸೋಮವಾರ ಸಂಜೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಅತ್ತಿಗೋಡು, ಚಪ್ಪರದಹಳ್ಳಿ, ಹಾರನಹಳ್ಳಿ, ಚಿಕ್ಕನೇರಳೆ, ಹಲಗನಹಳ್ಳಿ, ಕಿತ್ತೂರು ಭಾಗಗಳಲ್ಲಿಯೂ ಹೆಚ್ಚು ಮಳೆಯಾಗಿದೆ.

ಸತತ ಮಳೆಯಿಂದ ರೈತರು ಜಮೀನಿಗೆ ಹಾಕಿರುವ ತಂಬಾಕು, ಶುಂಠಿ, ಜೋಳ, ಆಲೂಗೆಡ್ಡೆ, ಬೆಳೆಗಳು ಕೊಳೆಯುವ ಹಂತದಲ್ಲಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ.

ಜಮೀನನ್ನು ಹದ ಮಾಡಿ ಮಳೆ ಬಿದ್ದ ತಕ್ಷಣ ತಂಬಾಕು ಸಸಿಯನ್ನು ನಾಟಿ ಮಾಡಲಾಗಿದೆ, ಆದರೆ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ, ಜಮೀನಿನಲ್ಲಿ ಉಳುಮೆ ಮಾಡಲು ಆಗುತ್ತಿಲ್ಲ, ತಂಬಾಕು ಕೊಳೆಯುವ ಹಂತದಲ್ಲಿದೆ, ಇದೇ ರೀತಿ ಮಳೆ ಮುಂದುವರೆದರೆ, ಜಮೀನಿನಲ್ಲಿ ಬೇರೆ ಬೆಳೆ ಬೆಳೆಯುವ ಸಂದರ್ಭ ಬರಬಹುದು ಎಂದು ರೈತ ಉಮೇಶ್ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.