ಅರಣ್ಯ ಸಂಪತ್ತು, ವನ್ಯಜೀವಿಗಳು ನಮ್ಮ ಪರಿಸರದ ಅವಿಭಾಜ್ಯ ಅಂಗಗಳಾಗಿದ್ದು, ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಎಸ್‌.ಡಿ. ಬಬಲಾದಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ಅರಣ್ಯ ಸಂಪತ್ತು, ವನ್ಯಜೀವಿಗಳು ನಮ್ಮ ಪರಿಸರದ ಅವಿಭಾಜ್ಯ ಅಂಗಗಳಾಗಿದ್ದು, ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಎಸ್‌.ಡಿ. ಬಬಲಾದಿ ಹೇಳಿದರು.

ನಗರದ ಆದರ್ಶ ವಿದ್ಯಾಲಯದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್‌, ಅರಣ್ಯ ಇಲಾಖೆ ಸಹಯೋಗದಲ್ಲಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಆಯೋಜಿಸಿದ್ದ ಅರಣ್ಯ ಮತ್ತು ವನ್ಯಜೀವಿಗಳ ಕುರಿತ ಚಿತ್ರಕಲೆ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಸರ್ಗ ನಮಗೆ ಗಾಳಿ, ಬೆಳಕು ಸೇರಿ ಅನೇಲ ನಿಸರ್ಗದತ್ತವಾದ ಸಂಪತನ್ನು ನೀಡಿದೆ. ಅರಣ್ಯ ಮತ್ತು ವನ್ಯಜೀವಿಗಳಿಂದ ನಿರ್ಮಾಣವಾಗುವ ಜೀವ ವೈವಿದ್ಯ, ಆಹಾರ ಚಕ್ರ, ನೈಸರ್ಗಕ ಪ್ರಕ್ರಿಯೆ ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜಾಶ್ಮೀನ್‌ ಕಿಲ್ಲೇದಾರ್‌, ವಿದ್ಯಾರ್ಥಿಗಳು ನಿರಂತರ ಅಭ್ಯಾಸದೊಂದಿಗೆ ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ತಿಳಿದುಕೊಳ್ಳಲು ಈ ಸ್ಪರ್ಧೆ ಸಹಕಾರಿಯಾಗಿದೆ. ಅರಣ್ಯ ಮತ್ತು ವನ್ಯಜೀವಿಗಳು ಪೋಷಣೆ ಪ್ರತಿಯೋಬ್ಬರ ಕರ್ತವ್ಯ ಎಂದು ಹೇಳಿದರು.

ಹುನಗುಂದ ವರದಿಗಾರ ಅಮರೇಶ ನಾಗೂರ ಹಾಗೂ ಬಿಆರ್‌ಪಿ ವಿನೋದ ಬೋವಿ ಮಾತನಾಡಿದರು. ಪ್ರಾಚಾರ್ಯ ಬಿ.ಎಸ್‌. ಅರಕೇರಿ, ಚಿತ್ರಕಾ ಶಿಕ್ಷಕರಾದ ಚಂದ್ರಶೇಖರ ಸರೋದೆ, ನಿರ್ಣಾಯಕರಾಗಿ ಎಸ್‌.ಎನ್‌. ಪೋಚಗುಂಡಿ ನಡೆಸಿಕೊಟ್ಟರು. 50ಕ್ಕೂ ಅಧಿಕ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಹುಮಾನ ವಿಜೇತರು:

8ನೇ ತರಗತಿ: ಪ್ರಥಮ ಸ್ಥಾನ- ಅಭಿಷೇಕ್ ಪತ್ತಾರ್ ಸರ್ಕಾರಿ ಆದರ್ಶ ವಿದ್ಯಾಲಯ ಹುನಗುಂದ

ದ್ವಿತೀಯ ಸ್ಥಾನ- ವೀರೇಶ ಪೂಜಾರ ಮಾದರಿ ಪ್ರೌಢಶಾಲೆ ಹುನಗುಂದ

ತೃತೀಯ ಸ್ಥಾನ- ಅಪೂರ್ವ ರಾಮವಾಡಗಿ ವಿಮ ಬಾಲಕಿಯ ಪ್ರೌಢಶಾಲೆ ಹುನಗುಂದ

9ನೇ ತರಗತಿ: ಪ್ರಥಮ ಸ್ಥಾನ- ಸೃಷ್ಟಿ ಮುಂಡೇವಾಡಿ ಸರ್ಕಾರಿ ಆದರ್ಶ ವಿದ್ಯಾಲಯ ಹುನಗುಂದ

ದ್ವಿತೀಯ ಸ್ಥಾನ- ರಶ್ಮಿ ಕೊರತೆಗೇರಿ ವಿಮ ಬಾಲಕಿಯರ ಪ್ರೌಢಶಾಲೆ ಹುನಗುಂದ

ತೃತೀಯ ಸ್ಥಾನ- ಬಸನಗೌಡ ಹಡಗಲಿ ಎಂಡಿಆರ್ ಎಸ್ ದನ್ನೂರ

10ನೇ ತರಗತಿ: ಪ್ರಥಮ ಸ್ಥಾನ- ಸೃಷ್ಟಿ ಗುಗ್ರಿ ಸರ್ಕಾರಿ ಆದರ್ಶ ವಿದ್ಯಾಲಯ ಹುನಗುಂದ

ದ್ವಿತೀಯ ಸ್ಥಾನ- ತ್ರಿವೇಣಿ ಚೆನ್ನಪ್ಪನವರ

ತೃತೀಯ ಸ್ಥಾನ- ನದಾಫ್ ವಿಮ ಬಾಲಕಿಯರ ಪ್ರೌಢಶಾಲೆ ಹುನಗುಂದ

ಈ ಎಲ್ಲ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದರು.