ಹಿಂದೂ ಧರ್ಮದ ಶ್ರೇಷ್ಠ ಪರಂಪರೆ, ಸಂಸ್ಕೃತಿ, ಧಾರ್ಮಿಕ ನಂಬಿಕೆ ಬಗ್ಗೆ ಮಕ್ಕಳಿಗೆ ಪರಿಚಯಿಸಿ ಅವುಗಳ ಮಹತ್ವ ಸಾರಬೇಕು. ಹಿಂದೂಗಳು ಒಗ್ಗಟ್ಟಾಗಿರುವವರಿಗೂ ಹಿಂದೂ ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದು ಪಾವಗಡದ ರಾಮಕೃಷ್ಣಾಶ್ರಮದ ಡಾ. ಸ್ವಾಮಿ ಜಪಾನಂದಜೀ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರುಹಿಂದೂ ಧರ್ಮದ ಶ್ರೇಷ್ಠ ಪರಂಪರೆ, ಸಂಸ್ಕೃತಿ, ಧಾರ್ಮಿಕ ನಂಬಿಕೆ ಬಗ್ಗೆ ಮಕ್ಕಳಿಗೆ ಪರಿಚಯಿಸಿ ಅವುಗಳ ಮಹತ್ವ ಸಾರಬೇಕು. ಹಿಂದೂಗಳು ಒಗ್ಗಟ್ಟಾಗಿರುವವರಿಗೂ ಹಿಂದೂ ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದು ಪಾವಗಡದ ರಾಮಕೃಷ್ಣಾಶ್ರಮದ ಡಾ. ಸ್ವಾಮಿ ಜಪಾನಂದಜೀ ಹೇಳಿದರು. ಹಿಂದೂ ಸಮಾಜೋತ್ಸವ ಸಮಿತಿ ನಗರದ ವಿಜಯನಗರದ ನಳಂದ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಹಿಂದೂ ಜನಜಾಗೃತಿ ಸಮಾಜೋತ್ಸವದಲ್ಲಿ ಮಾತನಾಡಿದ ಸ್ವಾಮೀಜಿ, ಶ್ರೇಷ್ಠ ಆದರ್ಶ, ಪರಂಪರೆಯ ಹಿಂದೂ ಧರ್ಮ ಉಳಿದರೆ ಜಗತ್ತು ಉಳಿಯುತ್ತದೆ. ಭಾರತ ದೇಶದ ಸಂಸ್ಕೃತಿ, ಪರಂಪರೆಯನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲರ ಮೇಲಿದೆ. ಎಲ್ಲಾ ಹಿಂದೂಗಳೂ ಇದಕ್ಕೆ ಬದ್ಧರಾಗಿರಬೇಕು. ಈ ಹಿಂದಿನ ತಪ್ಪುಗಳಿಂದ ಸಮಾಜ ಪಾಠ ಕಲೆತು ಮುಂದಿನ ಪೀಳಿಗೆಯನ್ನು ಸರಿಯಾದ ದಾರಿಯಲ್ಲಿ ನಡೆಸಬೇಕು. ಬೇರೆ ಬೇರೆ ರಾಷ್ಟ್ರಗಳಲ್ಲಿ ಬದಲಾವಣೆ ಪರ್ವ ಆರಂಭವಾಗಿದ್ದು ಎಲ್ಲರ ನೋಟ ನಮ್ಮ ಮೇಲಿದೆ. ವಿಶ್ವಗುರುವಾಗುವತ್ತ ಸಾಗುತ್ತರುವ ಭಾರತದ ನಡೆಯ ಮೇಲೆ ವಿಶ್ವದ ನಡೆ ಎನ್ನುವುದನ್ನು ನಾವು ಮರೆಯಬಾರದು. ಸಮಾಜವನ್ನು ವಿವಿಧ ಸ್ಥರಗಳಲ್ಲಿ ಒಡೆಯಲಾಗುತ್ತಿದೆ. ಆದರೆ ಹಿಂದೂ ಸಮಾಜ ಒಂದಾದಲ್ಲಿ ಅದನ್ನು ತಡೆಯಬಹುದು. ಹಿಂದುಗಳು ಒಂದಾಗಿ ನಮ್ಮ ಭಾಷೆ, ಪರಂಪರೆ, ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಿಕೊಂಡು ಮುಂದೆ ಸಾಗಬೇಕು ಎಂದು ಹೇಳಿದರು.ಸ್ಫೂರ್ತಿ ಡೆವಲಪರ್ಸ್ ಮಾಲೀಕ ಎಸ್.ಪಿ.ಚಿದಾನಂದ್ ಮಾತನಾಡಿ, ಸಾವಿರಾರು ವರ್ಷಗಳಿಂದ ಉಳಿದು ಬೆಳೆದುಬಂದಿರುವ ಹಿಂದೂ ಸಂಸ್ಕೃತಿ ಉಳಿದುಬೆಳೆದುಬಂದಿದೆ ಎಂದರೆ ಅದು ಶಕ್ತಿ ಮತ್ತು ಸಂಪತ್ತರಿನಿಂದಲ್ಲ, ನಮ್ಮ ಧಾರ್ಮಿಕ ಶ್ರದ್ಧೆ ಮತ್ತು ಆಚರಣೆಯಿಂದ ಮಾತ್ರ. ಇಂದಿನ ದಿನಗಳಲ್ಲಿ ಎಲ್ಲವೂ ಯುವ ಪಡೆಯ ಮೇಲಿದೆ. ಈ ಯುವ ಪಡೆ ಮುಂದಿನ ದಿನಗಳಲ್ಲಿ ಬದಲಾವಣೆಗೆ ಕಾರಣವಾಗುವ ಶಕ್ತಿ ಹೊಂದಿದ್ದು ಅದನ್ನು ಸರಿಯಾದ ದಾರಿಯಲ್ಲಿ ನಡೆಸಲು ಹಿಂದೂ ಸಮಾಜಕ್ಕೆ ದೊಡ್ಡ ಅವಕಾಶವಿದ್ದು ಅದನ್ನು ಬಳಸಿಕೊಂಡು ವಸುದೈವ ಕುಟುಂಬಕಂ ಎನ್ನುವ ಮಾತಿನಂತೆ ನಾವೆಲ್ಲ ಒಂದಾಗಿ ಸಮಾಜವನ್ನು ಕಟ್ಟಬೇಕಿದೆ ಎಂದರು. ಈ ವೇಳೆ ನಿವೃತ್ತ ಸೈನಿಕರಾದ ನಾಗರಾಜ್, ಹರಿ ಓಂ ಪಂತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಹಿತಿ ಬಾಲಚಂದ್ರ, ನಿವೃತ್ತ ಇಂಜಿನಿಯರ್ ನಟರಾಜ್ ಶೆಟ್ಟಿ, ಡಾ.ನಿತಾ, ಸಮಿತಿ ಖಜಾಂಚಿ ಹೆಚ್.ಶಂಕರಪ್ಪ ಮೊದಲಾದವರು ಭಾಗವಹಿಸಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.