ಶಿಕ್ಷಣ ಇಲಾಖೆ ಆವರಣದಲ್ಲಿ ಸಾರ್ವತ್ರಿಕ ಪ್ರಜಾಸೌಧ ಕಟ್ಟಿದಲ್ಲಿ ಮುಂದಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ, ಶಿಕ್ಷಣಕ್ಕಾಗಿ ಮೀಸಲಾದ ಜಾಗದಲ್ಲಿ ಹೊಸ ಶಿಕ್ಷಣ ಯೋಜನೆಗಳಿಗೆ ಅನುಕೂಲವಾಗಬೇಕು ಆದರೆ, ಕಾಲೇಜು ಆವರಣದಲ್ಲಿ ಪ್ರಜಾಸೌಧ ನಿರ್ಮಾಣ ಮಾಡುವುದು ತರವಲ್ಲ ಎಂದು ಮಾಜಿ ಶಾಸಕ ಗುರುಪಾಟೀಲ ಶಿರವಾಳ ತಿಳಿಸಿದರು.
ಯಾದಗಿರಿ: ಶಿಕ್ಷಣ ಇಲಾಖೆ ಆವರಣದಲ್ಲಿ ಸಾರ್ವತ್ರಿಕ ಪ್ರಜಾಸೌಧ ಕಟ್ಟಿದಲ್ಲಿ ಮುಂದಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ, ಶಿಕ್ಷಣಕ್ಕಾಗಿ ಮೀಸಲಾದ ಜಾಗದಲ್ಲಿ ಹೊಸ ಶಿಕ್ಷಣ ಯೋಜನೆಗಳಿಗೆ ಅನುಕೂಲವಾಗಬೇಕು ಆದರೆ, ಕಾಲೇಜು ಆವರಣದಲ್ಲಿ ಪ್ರಜಾಸೌಧ ನಿರ್ಮಾಣ ಮಾಡುವುದು ತರವಲ್ಲ ಎಂದು ಮಾಜಿ ಶಾಸಕ ಗುರುಪಾಟೀಲ ಶಿರವಾಳ ತಿಳಿಸಿದರು.
ಅವರು ಪ್ರಜಾಸೌಧ ನಿರ್ಮಾಣ ವಿರೋಧಿಸಿ ನಡೆದ ನಿರಂತರ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಜಾಸೌಧ ನಿರ್ಮಾಣಕ್ಕಾಗಿ ಬಹುತೇಕ ಜನ ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಜಾಸೌಧ ಹಳೆಯ ತಹಸೀಲ್ ಕಚೇರಿಯ ಆವರಣದಲ್ಲೇ ನಿರ್ಮಾಣ ಮಾಡುವುದು ಸೂಕ್ತಕರವಾಗಿದೆ ಎಂದು ಶಿರವಾಳ ತಿಳಿಸಿದರು.ಮುಖಂಡರಾದ ಮರೆಪ್ಪ ಪ್ಯಾಟಿ, ಜೆಡಿಎಸ್, ಅಧ್ಯಕ್ಷ ವಿಠ್ಠಲ ವಗ್ಗಿ, ಶೇಖರ ದೊರಿ, ರವಿಕುಮಾರ, ಹಾಗೂ ಭೀಮಾಶಂಕರ ಕಟ್ಟಿಮನಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಅಕ್ಷಯಗೌಡ ಕಟ್ಟಿಮನಿ, ಅಶೋಕ ನಾಯಕ, ಮರೆಪ್ಪ ಹಯ್ಯಾಳಕರ್, ಅಮರೇಶ ಬಿಲ್ಲವ್, ಮರೆಪ್ಪ ದೊಡ್ಮನಿ, ಮುರುಳೀಧರ ಕುಲಕರ್ಣಿ, ವಿಕಾಸ್ ಖುರೇಶಿ, ರವಿ ಬೊಮ್ಮನಳ್ಳಿ, ಹಣಮಂತ ಪೂಜಾರಿ, ಶ್ರೀನಿವಾಸ ನಾಯಕ ಸೇರಿದಂತೆ ನಿರಂತರ ಪ್ರತಿಭಟನಾ ನಿರತರಾದ ಮಹೇಶಗೌಡ ಸುಬೇದಾರ, ಮಲ್ಲಣ್ಣ ಪರಿವಾಣ, ಇಸ್ಮಾಯಿಲ್ ತಿಮ್ಮಾಪುರಿ ಸೇರಿದಂತೆ ಅನೇಕರು ಇದ್ದರು.