ರೈತರ ಹಿತ ರಕ್ಷಿಸಲು ನಂದಿನಿ ಉತ್ಪನ್ನಗಳನ್ನೇ ಬಳಸಿ

| Published : Aug 10 2024, 01:31 AM IST

ಸಾರಾಂಶ

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಲಬೆರಕೆಯ ಹಾಲಿನ ಉತ್ಪನ್ನಗಳ ಬಗ್ಗೆ ಗ್ರಾಹಕರು ಜಾಗೃತಿ ವಹಿಸಬೇಕು ಪರಿಶುದ್ಧವಾಗಿ ಹಾಲು ಉತ್ಪಾದಕರಿಂದ ನೇರವಾಗಿ ಖರೀದಿಸಿದ ಹಾಲಿನಿಂದ ತಯಾರಿಸಲಾಗುವ ನಂದಿನಿ ಉತ್ಪನ್ನಗಳ ಖರೀದಿಗೆ ಆದ್ಯತೆ ನೀಡಬೇಕು

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿನ ಹಾಲು ಉತ್ಪಾದಕರ ಹಿತ ದೃಷ್ಟಿಯಿಂದ ಕೋಮುಲ್ ಮತ್ತು ಕೆಎಂಎಫ್‌ನಿಂದ ಉತ್ಪಾದಿಸುವ ನಂದಿನಿ ಉತ್ಪನ್ನಗಳನ್ನು ಹೆಚ್ಚಾಗಿ ಬಳಕೆ ಮಾಡುವ ಮೂಲಕ ಉತ್ತಮ ಅರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಹಾಲು ಉತ್ಪಾದಕರ ಹಿತ ಕಾಪಾಡಬಹುದಾಗಿದೆ ಎಂದು ಕೋಮಲ್ ನಿರ್ದೇಶಕ ವಡಗೂರು ಡಿ.ವಿ.ಹರೀಶ್ ತಿಳಿಸಿದರು.ತಾಲೂಕಿನ ಮುದುವಾಡಿಯಲ್ಲಿ ಕೋಮುಲ್‌ನಿಂದ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನರನ್ನು ಹೈನುಗಾರಿಕೆಯ ಉದ್ಯಮ ಕೈಹಿಡಿದಿದೆ. ಹಾಲು ಉತ್ಪಾದನೆಯ ಜೊತೆಗೆ ಗುಣಮಟ್ಟದಲ್ಲಿ ಕೂಡ ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಎಂದರು.ಕೃಷ್ಣಪ್ಪನವರ ದೂರದೃಷ್ಟಿ ಫಲ

ಜಿಲ್ಲೆಯ ರೈತರು ಮಳೆ ಬೆಳೆ ಇಲ್ಲದೆ ಪರಿತಪಿಸುತ್ತಾ ಬರದ ಛಾಯೆಯಲ್ಲಿ ಇರುವುದನ್ನು ಗಮನಿಸಿ ಎಂ.ವಿ.ಕೃಷ್ಣಪ್ಪ ನವರು ದೂರದೃಷ್ಟಿಯಿಂದ ವಿದೇಶಿ ಹಾಲು ಉತ್ಪಾದನಾ ತಳಿಗಳನ್ನು ಪರಿಚಯಿಸಿದ ಕಾರಣ ಕೋಲಾರ ಜಿಲ್ಲೆಯ ರೈತರು ಇಂದು ತಮ್ಮ ಜೀವಾಳವನ್ನಾಗಿ ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವಂತಾಗಿದೆ ಎಂದರು.ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಲಬೆರಕೆಯ ಹಾಲಿನ ಉತ್ಪನ್ನಗಳ ಬಗ್ಗೆ ಗ್ರಾಹಕರು ಜಾಗೃತಿ ವಹಿಸಬೇಕು ಪರಿಶುದ್ಧವಾಗಿ ಹಾಲು ಉತ್ಪಾದಕರಿಂದ ನೇರವಾಗಿ ಖರೀದಿಸಿದ ಹಾಲಿನಿಂದ ತಯಾರಿಸಲಾಗುವ ನಂದಿನಿ ಉತ್ಪನ್ನಗಳ ಖರೀದಿಗೆ ಆದ್ಯತೆ ನೀಡಬೇಕು, ಕೋಮಲ್ ಮತ್ತು ಹಾಲು ಮಹಾ ಮಂಡಳಿಯಿಂದ ಸಿಗುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ಕೋಮುಲ್ ಉಪ ವ್ಯವಸ್ಥಾಪಕ ಡಾ.ಮಹೇಶ್, ಮಾರುಕಟ್ಟೆ ವ್ಯವಸ್ಥಾಪಕ ಲಕ್ಷ್ಮೀನಾರಾಯಣ, ಉಪ ವ್ಯವಸ್ಥಾಪಕ ನಂಜುಂಡಗೌಡ, ಸಹಾಯಕ ವ್ಯವಸ್ಥಾಪಕ ಲೋಕೇಶ್, ಮುದುವಾಡಿ ಗ್ರಾಪಂ ಅಧ್ಯಕ್ಷ ಹರೀಶ್ ಬಾಬು ಇದ್ದರು.