ಸಾರಾಂಶ
ಆಲಮೇಲ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಸೀಮೆ ಹಸುಗಳ ಕೆಚ್ಚಲು ಕತ್ತರಿಸಿದ ಅಮಾನವೀಯ ಘಟನೆಯನ್ನು ಖಂಡಿಸಿ ಪಟ್ಟಣದ ಬಸ್ ನಿಲ್ದಾಣದ ಬಳಿ ಹಿಂದು ಜನ ಜಾಗೃತಿ ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು. ವಿಶ್ವ ಹಿಂದು ಪರಿಷತ್ ಮುಖಂಡ ಶ್ರೀಮಂತ ದುದ್ದಗಿ ಮಾತನಾಡಿ ಹಿಂದುಗಳ ಪವಿತ್ರ ದೇವತೆ ಎಂದು ಪೂಜೆ ಮಾಡುವ ಗೋ ಮಾತೆಯ ಕೆಚ್ಚಲವನ್ನು ಕತ್ತರಿಸುವ ಜಿಹಾದಗಳ ಅಟ್ಟಹಾಸವನ್ನು ಬಲವಾಗಿ ಖಂಡಿಸುತ್ತೇವೆ. ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರ ಈ ಕೃತ್ಯವೆಸಗಿದವರನ್ನು ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಆಲಮೇಲ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಸೀಮೆ ಹಸುಗಳ ಕೆಚ್ಚಲು ಕತ್ತರಿಸಿದ ಅಮಾನವೀಯ ಘಟನೆಯನ್ನು ಖಂಡಿಸಿ ಪಟ್ಟಣದ ಬಸ್ ನಿಲ್ದಾಣದ ಬಳಿ ಹಿಂದು ಜನ ಜಾಗೃತಿ ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು. ವಿಶ್ವ ಹಿಂದು ಪರಿಷತ್ ಮುಖಂಡ ಶ್ರೀಮಂತ ದುದ್ದಗಿ ಮಾತನಾಡಿ ಹಿಂದುಗಳ ಪವಿತ್ರ ದೇವತೆ ಎಂದು ಪೂಜೆ ಮಾಡುವ ಗೋ ಮಾತೆಯ ಕೆಚ್ಚಲವನ್ನು ಕತ್ತರಿಸುವ ಜಿಹಾದಗಳ ಅಟ್ಟಹಾಸವನ್ನು ಬಲವಾಗಿ ಖಂಡಿಸುತ್ತೇವೆ. ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರ ಈ ಕೃತ್ಯವೆಸಗಿದವರನ್ನು ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.ಈ ವೇಳೆ ಮುಖಂಡರಾದ ಸಂಗಮೇಶ ಗುಂಡದ, ರತನ್ ಒಣಕುದರಿ, ಸುನಿಲ್ ತೆಲ್ಲೂರ, ನಾಗರಾಜ ಸುಲ್ತಾನಪೂರ, ಶಿವಾನಂದ ರಜಪೂತ, ಅಜಯ ರಜಪೂತ, ಹನುಮಂತ ರಜಪೂತ, ಅಭಯ ಅಲೋಣಿ, ಸಾಯಿಕುಮಾರ, ನಾಗರಾಜ ಆಲೂರ,ಬಂಡು ಸಾರಂಗಮಠ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.