ಪರಮೇಶ್ವರ್ ಶಿಕ್ಷಣ ಸಂಸ್ಥೆ ಮೇಲಿನ ಇಡಿ ದಾಳಿ ಖಂಡಿಸಿ ಪ್ರತಿಭಟನೆ

| Published : May 23 2025, 11:57 PM IST / Updated: May 23 2025, 11:58 PM IST

ಪರಮೇಶ್ವರ್ ಶಿಕ್ಷಣ ಸಂಸ್ಥೆ ಮೇಲಿನ ಇಡಿ ದಾಳಿ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ಖಂಡಿಸಿ ದಲಿತ ಮಹಾಸಭಾದವರು ನಗರದ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಶುಕ್ರವಾರ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ಖಂಡಿಸಿ ದಲಿತ ಮಹಾಸಭಾದವರು ನಗರದ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಶುಕ್ರವಾರ ಪ್ರತಿಭಟಿಸಿದರು.

ಕೇಂದ್ರ ಬಿಜೆಪಿ ಸರ್ಕಾರವು ಜಾರಿ ನಿರ್ದೇಶನಾಲಯವನ್ನು ತನ್ನ ಅಸ್ತ್ರ ಮಾಡಿಕೊಂಡಿದೆ. ಬಿಜೆಪಿ, ದಲಿತ ನಾಯಕರನ್ನು ಕಾಂಗ್ರೆಸ್‌ನಿಂದ ಬಿಡಿಸಿ ಬಿಜೆಪಿಗೆ ಸೇರಿಸಿಕೊಳ್ಳಲು ಇಡಿ, ಐಟಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಸಿದ್ಧಾರ್ಥ ಶಿಕ್ಷöಣ ಸಂಸ್ಥೆಯಲ್ಲಿ ಈವರೆಗೂ 60 ಸಾವಿರ ಎಂಜಿನಿಯರ್, 30 ಸಾವಿರ ವೈದ್ಯರನ್ನು, ಸಾವಿರಾರು ಪದವೀಧರರಿಗೆ ಶಿಕ್ಷಣ ನೀಡಿದೆ. ಈ ಸಂಸ್ಥೆಗೆ ಮಸಿ ಬಳಿಯಲು ಸಂಸ್ಥೆಯನ್ನು ಮುಗಿಸಲು ಬಿಜೆಪಿ ಸರ್ಕಾರ ಇಡಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ದೂರಿದರು.

ಡಾ.ಜಿ. ಪರಮೇಶ್ವರ್ ಸರಳತೆ, ಪ್ರಾಮಾಣಿಕತೆಗೆ ಹೆಸರುಳ್ಳ ನಾಯಕರಾಗಿದ್ದಾರೆ. ದಲಿತ ನಾಯಕರಾಗಿ ರಾಜ್ಯಾದ್ಯಂತ ಜನಪ್ರಿಯ ನಾಯಕತ್ವವನ್ನು ಕೆಡವಿ ಹಾಕಲು ಇಡಿ ಅಧಿಕಾರಿಗಳನ್ನು ಛೂ ಬಿಟ್ಟು, ದಲಿತ ನಾಯಕನ ಮುಗಿಸಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಕಿಡಿಕಾರಿದರು.

ದಲಿತ ಮಹಾಸಭಾ ಅಧ್ಯಕ್ಷ ಎಸ್. ರಾಜೇಶ್, ದಸಂಸ ವಿಭಾಗೀಯ ಸಂಚಾಲಕ ಶಿವಣ್ಣ, ಮುಖಂಡರಾದ ಕೇಶವ, ಮೋಹನ್‌ ಕುಮಾರ್, ಪ್ರಮೋದ್, ಎಸ್.ಎ. ರಹೀಂ, ರಾಮು, ಪಾಷ, ರವಿ, ಶ್ರೀನಿವಾಸ್, ಸೈಯದ್ ಫಾರೂಕ್ ಮೊದಲಾದವರು ಇದ್ದರು.