ಚಿಂತಾಮಣಿ: ವಿದ್ಯುಚ್ಛಕ್ತಿಯ ಖಾಸಗೀಕರಣ ಮತ್ತು ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಕೆ ವಿರೋಧಿಸಿ ಆಳುವ ಸರ್ಕಾರಗಳ ವಿರುದ್ಧ ಇದೇ ಜೂ. 22 ರ ಸೋಮವಾರ ಪ್ರತಿಭಟನೆ ಮಾಡಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಚಿಂತಾಮಣಿ ತಾ. ಸಮಿತಿ ಅಧ್ಯಕ್ಷ ಸೀಕಲ್ ರಮಣಾರೆಡ್ಡಿ ತಿಳಿಸಿದರು.
ನಗರದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗೆ ಯಾವುದೇ ಸಹಾಯ ಹಸ್ತ ನೀಡದೆ ಜೀವನ ನಡೆಸಲು ಕಷ್ಟಕರವಾಗಿದ್ದು, ಕೃಷಿಗೆ ಬೇಕಾಗಿರುವ ಸಾಮಗ್ರಿ ಬೆಲೆ ಮಾತ್ರ ಏರುಮುಖವಾಗಿದ್ದು, ಅವಿಭಜಿತ ಕೋಲಾರ ಜಿಲ್ಲೆಯ ರೈತರು ಮಳೆಯಾಧಾರಿತ ಬೇಸಾಯದೊಂದಿಗೆ ಕೊಳವೆಬಾವಿಯನ್ನೇ ಹೆಚ್ಚು ನಂಬಿದ್ದು, ರೈತರ ಜೀವನೋಪಾಯದ ಪರ್ಯಾಯ ಮಾರ್ಗವೇ ಕೊಳವೆಬಾವಿಗಳಾಗಿದ್ದು, 1800 ಅಡಿ ಕೊರೆಸಿ ನೀರನ್ನು ಹೊರತೆಗೆದು ವೈವಿಧ್ಯಮಯವಾದ ತರಕಾರಿ, ಹಣ್ಣುಗಳನ್ನು ಬೆಳೆಯುತ್ತಿದ್ದಾನೆ, ಈ ಕೊಳವೆಬಾವಿಗಳಿಗೆ ಸರ್ಕಾರದಿಂದ ರೈತರಿಗೆ 10 ಹೆಚ್.ಪಿ. ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಉಚಿತ ವಿದ್ಯುತ್ ಸರಬರಾಜು ಮಾಡುತ್ತಿದ್ದರು.ಇತ್ತೀಚೆಗೆ ಐ.ಪಿ ಸೆಟ್‌ಗಳಿಗೆ ಸಂಪರ್ಕ ತೆಗೆದುಕೊಳ್ಳಲು ಅವಶ್ಯಕ ಪರಿಕರಗಳಾದ ಕಂಬಗಳು, ವೈರ್, ಟಿ.ಸಿ. ಫಿಟ್ಟಿಂಗ್ಸ್ ಹಾಗೂ ಇಲಾಖೆ ಠೇವಣಿ ಸೇರಿ ಸುಮಾರು 2-3 ಲಕ್ಷ ರೈತರೇ ಭರಿಸಬೇಕಾಗಿದ್ದು ಇದರಿಂದ ಹೆಚ್ಚುವರಿ ಹೊರೆಯಾಗಿ ರೈತರು ಕಂಗಾಲಾಗಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರಗಳ ದ್ವಂದ್ವ ನಿಲುಗಳಿಗೆ ಬೆಸತ್ತು ಸರ್ಕಾರದ ವಿರುದ್ಧ ಇದೇ ಜೂ. 22 ರ ಸೋಮವಾರ ನಗರದ ಪ್ರವಾಸಿಮಂದಿರದಿಂದ ರ‍್ಯಾಲಿ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆಮನವಿ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಆರ್‌ಎಸ್‌ಸಿ ಆಂಜನೇಯರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಂ.ಎಲ್. ಆಂಜನೇಯರೆಡ್ಡಿ, ಚೀಮನಹಳ್ಳಿ ಜಿ.ಮುನಿರೆಡ್ಡಿ, ಗಂಜೂರು ಕೆ ನಾರಾಯಣಸ್ವಾಮಿ, ರಾಯಪಲ್ಲಿ ಆನಂದರೆಡ್ಡಿ, ಕೆಂಚರ‍್ಲಹಳ್ಳಿ ಕೆ.ವಿ. ಕೃಷ್ಣಾರೆಡ್ಡಿ, ಲಕ್ಷ್ಮೀದೇವನಕೋಟೆ ಎಸ್.ಆರ್. ಶಿವಾರೆಡ್ಡಿ ಇದ್ದರು.