ಮೈಕ್ರೋ ಫೈನಾನ್ಸ್‌ಗಳ ಕಿರುಕಳ ವಿರೋಧಿಸಿ ಪ್ರತಿಭಟನೆ

| Published : Nov 21 2024, 01:03 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿ ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆದ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋಫೈನಾನ್ಸ್‌ಗಳ ಕಿರುಕುಳ ತಪ್ಪಿಸಬೇಕೆಂದು ಉದ್ಯಮಿ ತೌಫಿಕ್‌ ಪಾರ್ಥನಳ್ಳಿ ಆಗ್ರಹಿಸಿದರು. ನಗರದಲ್ಲಿ ಸೋಮವಾರ ವಿವಿಧ ಮಹಿಳಾ ಸಂಘಗಳ ಆಶ್ರಯದಲ್ಲಿ ಫೈನಾನ್ಸ್‌ ಕಂಪನಿಗಳ ವಿರುದ್ಧ ನಡೆದ ಪ್ರತಿಭಟನಾ ಮೆರವಣಿಗೆ ಉದ್ದೇಶಿಸಿ ಮಾತನಾಡಿ, ಫೈನಾನ್ಸ್‌ ಹೆಸರಿನಲ್ಲಿ ಸಾಲಗಾರರ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸುವುದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡುತ್ತಿರುವ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು.

ಕನ್ನಡಪ್ರಭ ವಾರ್ತೆ ಜಮಖಂಡಿ

ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆದ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋಫೈನಾನ್ಸ್‌ಗಳ ಕಿರುಕುಳ ತಪ್ಪಿಸಬೇಕೆಂದು ಉದ್ಯಮಿ ತೌಫಿಕ್‌ ಪಾರ್ಥನಳ್ಳಿ ಆಗ್ರಹಿಸಿದರು. ನಗರದಲ್ಲಿ ಸೋಮವಾರ ವಿವಿಧ ಮಹಿಳಾ ಸಂಘಗಳ ಆಶ್ರಯದಲ್ಲಿ ಫೈನಾನ್ಸ್‌ ಕಂಪನಿಗಳ ವಿರುದ್ಧ ನಡೆದ ಪ್ರತಿಭಟನಾ ಮೆರವಣಿಗೆ ಉದ್ದೇಶಿಸಿ ಮಾತನಾಡಿ, ಫೈನಾನ್ಸ್‌ ಹೆಸರಿನಲ್ಲಿ ಸಾಲಗಾರರ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸುವುದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡುತ್ತಿರುವ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು. ಮಹಿಳೆಯರು ಮನೆಯಲ್ಲಿ ಒಬ್ಬರೇ ಇರುವ ಸಮಯದಲ್ಲಿ ಬಂದು ಗೊಂದಲ ಸೃಷ್ಟಿಸುತ್ತಿದ್ದಾರೆ. ಮೈಕ್ರೋ ಫೈನಾನ್ಸ್‌ ಹಾಗೂ ವಿವಿಧ ಬ್ಯಾಂಕ್‌ನಿಂದ ಮಹಿಳೆಯರಿಗೆ ಆಗುತ್ತಿರುವ ಕಿರುಕುಳ ಹಾಗೂ ದಬ್ಬಾಳಿಕೆ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ.

ನಗರದ ಪ್ರಮುಖ ಬೀದಿಗಳಲ್ಲಿ ಮಹಿಳೆಯರಿಂದ ಪ್ರತಿಭಟಿಸಿ, ಮಹಿಳೆಯರು ಪಡೆದಿರುವ ಸಾಲವನ್ನು ಒತ್ತಾಯಪೂರ್ವಕವಾಗಿ ವಸೂಲಿ ಮಾಡುತ್ತಿರುವ ಕ್ರಮ ಖಂಡಿಸಲಾಯಿತು. ಜಮಖಂಡಿ ಹಾಗೂ ರಬಕವಿ ಬನಹಟ್ಟಿ ಅವಳಿ ತಾಲೂಕಿನಲ್ಲಿ ಸುಮಾರು 50ರಿಂದ 60 ಮೈಕ್ರೋ ಫೈನಾನ್ಸ್‌ ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲಾ ಬ್ಯಾಂಕ್ ಪ್ರತಿನಿಧಿಗಳು (ರಿಕವರಿ ಏಜೆಂಟರು) ಮಹಿಳೆಯರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು ಅವಾಚ್ಯವಾಗಿ ಶಬ್ಧಗಳಿಂದ ನಿಂದಿಸುತ್ತಿರುವುದನ್ನು ಖಂಡಿಸಲಾಯಿತು.

ರಾತ್ರಿ ಸಮಯದಲ್ಲಿ 11ರಿಂದ 12ರವರೆಗೆ ಮನೆ ಮುಂದೆ ಕುಳಿತುಕೊಳ್ಳುವುದು. ರಾತ್ರಿ ವೇಳೆ ಅಧಿಕಾರಿಗಳಿಗೆ ಭೇಟಿ ಮಾಡಿಸುತ್ತೇನೆ ಎಂದು ಮಾನಸಿಕ ಕಿರುಕುಳ ನೀಡುತ್ತಾರೆ. ಸಾಲ ಮರುಪಾವತಿ ಮಾಡುವುದು ತಡವಾದರೆ ಮದ್ಯಪಾನ ಮಾಡಿ ಬಂದು ರಾತ್ರಿ ಸಮಯದಲ್ಲಿ ಮನೆಯಲ್ಲಿರುವ ಸಾಮಾನುಗಳು, ಮೊಬೈಲ್‌ಗಳನ್ನು ಕಿತ್ತುಕೊಂಡು ಹೋಗುತ್ತಾರೆ ಎಂದು ಮಹಿಳೆಯರು ದೂರಿದರು.

ದೌರ್ಜನ್ಯ ಎಸಗುತ್ತಿರುವ ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ದೇಸಾಯಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು. ನಗರ ಡಿವೈಎಸ್ಪಿ ಶಾಂತವೀರಗೆ ಮನವಿ ಸಲ್ಲಿಸಿದರು. ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಫೀಕ್‌ ಬಾರಿಗಡ್ಡಿ, ಶಬಾನಾ ರಫೀಕ್ ಖಲೀಫಾ, ನೂರಜಹಾನ ಪಠಾನ, ರುಕ್ಸಾನಾ ಮೈಬೂಬ್ ಪಟೇಲ್, ರಾಜು ಮಸಳಿ, ವಕೀಲರಾದ ಶಶಿಕಾಂತ ದೊಡ್ಡಮನಿ ಇದ್ದರು.