ಶಾಲಿನಿ ರಜನೀಶ ಅವಹೇಳನ ಖಂಡಿಸಿ ಪ್ರತಿಭಟನೆ

| Published : Jul 03 2025, 11:49 PM IST

ಶಾಲಿನಿ ರಜನೀಶ ಅವಹೇಳನ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ವಿಧಾನ ಪರಿಷತ್ತು ಸದಸ್ಯ ರವಿಕುಮಾರ ವಿರುದ್ಧ ಪಟ್ಟಣದಲ್ಲಿ ಕಾಂಗ್ರೆಸ್‌ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ ಪೊಲೀಸ್‌ ಠಾಣೆಗೆ ದೂರು ನೀಡಲಾಯಿತು.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ವಿಧಾನ ಪರಿಷತ್ತು ಸದಸ್ಯ ರವಿಕುಮಾರ ವಿರುದ್ಧ ಪಟ್ಟಣದಲ್ಲಿ ಕಾಂಗ್ರೆಸ್‌ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ ಪೊಲೀಸ್‌ ಠಾಣೆಗೆ ದೂರು ನೀಡಲಾಯಿತು.

ಇಲ್ಲಿಯ ಪ್ರವಾಸಿ ಮಂದಿರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು ಎಂಎಲ್ಸಿ ರವಿಕುಮಾರ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರ ಗೌರವವನ್ನು ಹರಣ ಮಾಡುವ ಹೇಳಿಕೆ ನೀಡಿದ್ದು, ಆಧಾರ ರಹಿತ ಹಿರಿಯ ಮಹಿಳಾ ಐಎಎಸ್‌ ಅಧಿಕಾರಿಯೊಬ್ಬರ ಗೌರವಕ್ಕೆ ಧಕ್ಕೆಯುಂಟು ಮಾಡಿದ್ದಾರೆ.

ಇಂತಹ ಹೇಳಿಕೆಗಳು ಸಾರ್ವಜನಿಕ ವಿಶ್ವಾಸ ಕುಗ್ಗಿಸುವುದರ ಜೊತೆಗೆ ರಾಜ್ಯದಲ್ಲಿ ಉದ್ಯೋಗ ಮಾಡುತ್ತಿರುವ ಹೆಣ್ಣು ಮಕ್ಕಳ ಘನತೆಗೆ ಧಕ್ಕೆ ತರುವ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗುತ್ತವೆ. ಅಲ್ಲದೆ ಸಂವಿಧಾನಿಕ ವ್ಯವಸ್ಥೆಗಳ ಮಾನವನ್ನು ತಗ್ಗಿಸುತ್ತವೆ, ಇದು ನೈತಿಕತೆಗೆ ವಿರುದ್ಧ ಹಾಗೂ ರಾಜಕೀಯ ಶಿಷ್ಟಾಚಾರ ನಿಯಮಗಳನ್ನು ಉಲ್ಲಂಘಿಸುವ ನಡವಳಿಕೆಯಾಗಿದೆ.

ಆದ್ದರಿಂದ ವಿಧಾನಪರಿಷತ್ತು ಸದಸ್ಯ ರವಿಕುಮಾರ ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ತಕ್ಷಣ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಅವರು ಉಲ್ಲಂಘಿಸಿರುವ ವಿಧಿಗಳು ಹಾಗೂ ಶಿಸ್ತು ನಿಯಮಗಳ ಪ್ರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಪಟ್ಟಣದ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಕೋರಿದ್ದಾರೆ.

ಪುರಸಭಾ ಅಧ್ಯಕ್ಷೆ ಎಂ.ಪಾತೀಮಾಬಿ, ಉಪಾದ್ಯಕ್ಷ ಎಚ್.ಕೊಟ್ರೇಶ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ, ಸದಸ್ಯರಾದ ಲಾಟಿದಾದಾಪೀರ, ಜಾಕೀರ ಹುಸೇನ್, ಉದ್ದಾರ ಗಣೇಶ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಜಯಲಕ್ಷ್ಮಿ, ಗಾಯತ್ರಮ್ಮ, ಸುಮಾ ಜಗದೀಶ, ಕವಿತಾ ಸುರೇಶ, ವಕೀಲ ಬಸವರಾಜ ಸಂಗಪ್ಪನವರ, ತಾಪಂ ಮಾಜಿ ಸದಸ್ಯರಾದ ಹುಲ್ಲಿಕಟ್ಟಿ ಚಂದ್ಪಪ್ಪ, ಮೈದೂರು ರಾಮಣ್ಣ, ಇಸ್ಮಾಯಿಲ್‌ ಎಲಿಗಾರ, ಕೂಲ್‌ ಇರ್ಪಾನ್, ಎಚ್.ವಸಂತಪ್ಪ, ಬಂಡ್ರಿ ಗೋಣಿಬಸಪ್ಪ, ಟಿಎಚ್ಎಂ ಮಂಜುನಾಥ, ಎ.ಎಂ. ವಿಶ್ವನಾಥ, ಎಲ್‌.ಮಂಜನಾಯ್ಕ, ನೀಲಗುಂದ ವಾಗೀಶ, ಸೈಯದ್‌ ಇಬ್ರಾಹಿಂ, ಡಂಕಿ ವಾಸೀಮ್, ಒ.ಮಹಾಂತೇಶ, ದೇವೇಂದ್ರಗೌಡ, ಮತ್ತೂರು ಬಸವರಾಜ ಇತರರು ಇದ್ದರು.