ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕಣಿವೆಕೊಪ್ಪಲು ಗ್ರಾಮದ ಹಲವು ಕುಟುಂಬಗಳಿಗೆ ಗ್ರಾಪಂನಿಂದ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಬಿಜೆಪಿ ಮುಖಂಡರ ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ತಾಪಂ ಕಚೇರಿ ಎದುರು ಸೇರಿದದ ಗ್ರಾಮಸ್ಥರು ಗ್ರಾಪಂ, ತಾಪಂ ಹಾಗೂ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆಕೂಗಿದರು.
ಗ್ರಾಮದಿಂದ ಹೊನಗಾನಹಳ್ಳಿ ಕಡೆಗೆ ಹೋಗುವ ರಸ್ತೆ ಪಕ್ಕದಲ್ಲಿ ಐದಾರು ಕುಟುಂಬಗಳು ಕಳೆದ ಮೂರು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಮನೆ ನಿರ್ಮಾಣಕ್ಕೆ ಪಂಚಾಯಿತಿಯಿಂದ ವಸತಿ ಯೋಜನೆಯಡಿ ಗ್ರಾಂಟ್ ಸಹ ನೀಡಿದ್ದೂರು ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಸಿಕೊಟ್ಟಿಲ್ಲ. ಇದರಿಂದ ಕುಟುಂಬಗಳು ಸಾಕಷ್ಟು ತೊಂದರೆಗಳಿಗೆ ಒಳಗಾಗಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಳೆದ ಒಂದು ತಿಂಗಳ ಹಿಂದೆ ಹೊನಗಾನಹಳ್ಳಿ ಗ್ರಾಪಂ ಎದುರು ಗ್ರಾಮಸ್ಥರು ಉಪವಾಸ ಸತ್ಯಗ್ರಹ ನಡೆಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ 15 ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರೂ ಇದುವರೆಗೂ ಸಮಸ್ಯೆ ಬಗೆಹರಿಸಿಲ್ಲ. ಅಧಿಕಾರಿಗಳ ನಡುವೆಯೇ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ ಎಂದು ದೂರಿದರು.
ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಾರೆ ಎಂಬ ಮಾಹಿತಿ ತಿಳಿದು ಇಓ ರಜೆ ಹಾಕಿದ್ದಾರೆ. ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಸಹ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಶಾಸಕರ ಗಮನಕ್ಕೂ ತರಲಾಗಿದೆ. ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ಅಧ್ಯಕ್ಷ ಧನಂಜಯ, ಪುರಸಭೆ ಉಪಾಧ್ಯಕ್ಷ ಅಶೋಕ್, ಎಸ್.ಎನ್.ಟಿ.ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಆನಂದ್, ಮಂಜಾಚಾರಿ, ವೀರಭದ್ರ, ಚನ್ನೇಗೌಡ, ಟೌನ್ ಅಧ್ಯಕ್ಷ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಸೋಮಚಾರಿ, ಭಾಸ್ಕರ್, ರಾಮು, ಕಣಿವೆಕೊಪ್ಪಲು ಗ್ರಾಮದ ಚಂದ್ರಕಲಾ, ಭಾಗ್ಯಮ್ಮ, ಪುಟ್ಟಗೌರಮ್ಮ,ಶೈಲಜಾ, ಯಶೋಧ ಸೇರಿದಂತೆ ಹಲವರು.
ಶ್ರೀಆಂಜನೇಯಸ್ವಾಮಿ ಉತ್ಸವ ಸಂಭ್ರಮಪಾಂಡವಪುರ: ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಶ್ರೀಆಂಜನೇಯಸ್ವಾಮಿ ಉತ್ಸವವನ್ನು ವಿಜೃಂಭಣೆಯಿಂದ ಸೋಮವಾರ ನಡೆಸಲಾಯಿತು.
ಉತ್ಸವಕ್ಕೂ ಮೊದಲ ಗ್ರಾಮದ ಸಿದ್ಧಿ ವಿನಾಯಕ ದೇವಸ್ಥಾನ, ಶ್ರೀರಾಮೇಶ್ವರದೇವಸ್ಥಾನ, ಶ್ರೀಅಂಕನಾಥೇಶ್ವರ ದೇವಸ್ಥಾನ, ಶ್ರೀಆಂಜನೇಯಸ್ವಾಮಿ ದೇವಸ್ಥಾನ, ಶ್ರೀಮನೆಮಂಚಮ್ಮ ಹಾಗೂ ಮಾಸ್ತಮ್ಮ ದೇವಸ್ಥಾನ ಮತ್ತು ಶ್ರೀಲಕ್ಷ್ಮೀದೇವಿ ದೇವಸ್ಥಾನಗಳಲ್ಲಿ ದೇವರಿಗೆ ವಿಷೇಶವಾಗಿ ಅಲಂಕರಿಸಿ ಅಭಿಷೇಕ ನಡೆಸಿ ವಿಷೇಶ ಪೂಜೆ ಸಲ್ಲಿಸಲಾಯಿತು.ನಂತರ ಗ್ರಾಮದ ಎಲ್ಲಾ ಪ್ರಮುಖ ಬೀದಿಗಳಲ್ಲೂ ಗ್ರಾಮದ ಸಾಕಮ್ಮ ಮಂಚೇಗೌಡ ಕುಟುಂಬ ವರ್ಗದಿಂದ ಶ್ರೀಆಂಜನೇಯಸ್ವಾಮಿ ಉತ್ಸವವನ್ನು ಮೆರವಣಿಗೆ ನಡೆಸಲಾಯಿತು. ಉತ್ಸವ ಬರುವ ಬೀದಿಗಳಲ್ಲಿ ಭಕ್ತರು ದೇವರಿಗೆ ಪೂಜೆಸಲ್ಲಿಸಿ ಭಕ್ತಿಭಾವ ಪ್ರದರ್ಶಿಸಿದರು.
;Resize=(128,128))
;Resize=(128,128))
;Resize=(128,128))