ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

| Published : Mar 09 2024, 01:35 AM IST

ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾಲದ ಮೊತ್ತಕ್ಕಿಂತ 4 ಪಟ್ಟು ಹೆಚ್ಚು ಹಣ ವಸೂಲಿ ಮಾಡಿ ನೊಟೀಸ್‌ ಕಳುಹಿಸುತ್ತಿದ್ದಾರೆ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿ ಬ್ಯಾಂಕ್‌ ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕಮಲಾಪುರ

ಖಾಸಗಿ ಸಾಲಗಾರರಂತೆ ರೈತರ ವಿರುದ್ಧ ಬಡ್ಡಿ, ಚಕ್ರಬಡ್ಡಿ ಸಾಲ ವಸೂಲಿ ಮಾಡುತ್ತಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ರೈತ ಸಂಘ ಪ್ರತಿಭಟನೆ ನಡೆಸಿತು.

ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಕೃಷಿ ಚಟುವಟಿಕೆಗಾಗಿ ಪಡೆದಿರುವ ಸಾಲಗಾರ ರೈತರನ್ನು ಖಾಸಗಿ ಫೈನಾನ್ಸ್ ರೀತಿಯಲ್ಲಿ ವಸೂಲಿಗೆ ಬಡ್ಡಿ, ಚಕ್ರ ಬಡ್ಡಿ, ಸುಸ್ತಿ ಬಡ್ಡಿ, ಸೇರಿಸಿ ಸಾಲದ ಮೊತ್ತಕ್ಕಿಂತ 4 ಪಟ್ಟು ಹೆಚ್ಚು ಹಣವನ್ನು ವಸೂಲಿ ಮಾಡುವಂತೆ ನೋಟಿಸ್‌ ನೀಡುತ್ತಿದ್ದಾರೆ. ಬ್ಯಾಂಕ್‌ನವರು ಕಾನೂನು ಬಾಹಿರವಾಗಿ ನೋಟಿಸ್ ನೀಡುತ್ತಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ಜಿಲ್ಲಾ ಮುಖಂಡರು ದೂರಿದರು.

ಕಮಲಾಪುರ ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಿಂದ ಬಸ್‌ನಿಲ್ದಾಣ ಮಾರ್ಗವಾಗಿ ಪ್ರತಿಭಟನಾಕಾರರು ತಹಸೀಲ್ದಾರ್ ಕಚೇರಿಗೆ ತಲುಪಿ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ದಯಾನಂದ ಪಾಟೀಲ್ ಮಾತನಾಡಿ, ರಾಜ್ಯದ್ಯಂತ ಬರಗಾಲ ಆವರಿಸಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಇತ್ತೀಚಿನ ದಿನಗಳಲ್ಲಿ ಸಾಲ ವಸೂಲಾತಿ ನ್ಯಾಯ ಮಂಡಳಿಯಲ್ಲಿ ಡಿಆರ್‌ಟಿ ವಿವಿಧ ನ್ಯಾಯಾಲಯಗಳಲ್ಲಿ ಸಾಲಗಾರರ ರೈತರ ಮೇಲೆ ದಾವೆಗಳನ್ನು ಹೂಡುತ್ತಿರುವುದರಿಂದ ರೈತರ ಮನೆಯ ಬಾಗಿಲಿಗೆ ನೋಟಿಸ್‌ ಬರುತ್ತಿದ್ದು, ನೋಟಿಸ್‌ಗಳಲ್ಲಿ ಪಡೆದ ಸಾಲಕ್ಕಿಂತ ನಾಲ್ಕು ಪಟ್ಟು ಹೆಚ್ಚು ಜಮಾ ಮಾಡುವಂತೆ ತಿಳಿಸುತ್ತಿದ್ದಾರೆ ಎಂದರು.

ರೈತರು ಕಂಗಾಲಾಗಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಎಂದು ತಹಸೀಲ್ದಾರ್‌ ಮಮ್ಮದ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಚಂದ್ರಕಾಂತ ಬಿರಾದಾರ್, ವೀರೇಶ ಬೀಮಳ್ಳಿ ಸಂತೋಷ್ ಪಾಟೀಲ, ವಿಶ್ವನಾಥ ಬಿರಾದರ್, ವಿರುಪಾಕ್ಷಿ, ಆರ್ ಮಾದವ ರೆಡ್ಡಿ ಮತ್ತಿತರು ಇದ್ದರು.