ಸಾರಾಂಶ
ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ಬಾಂಗ್ಲಾದೇಶದಲ್ಲಿ ಹಿಂದುಗಳ ಹತ್ಯೆ, ಹಲ್ಲೆ ಹಾಗೂ ದೌರ್ಜನ್ಯ ಖಂಡಿಸಿ ಪಟ್ಟಣದ ಹೆದ್ದಾರಿಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.ಪಟ್ಟಣದ ಕುವೆಂಪು ವೃತ್ತದಲ್ಲಿ ಬಿಜೆಪಿ, ಹಿಂದು ಜಾಗರಣಾ ವೇದಿಕೆ ಸೇರಿದಂತೆ ಇತರ ಸಂಘ ಸಂಸ್ಥೆಗಳ ಮುಖಂಡರು ಸೇರಿ ಮೈಸೂರು - ಬೆಂಗಳೂರು ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿದರು. ನಂತರ ಮುಸ್ಲಿಮರ ವಿರುದ್ಧ ಘೋಷಣೆಗಳ ಕೂಗಿದರು.
ನೂರಾರು ವರ್ಷಗಳಿಂದಲೂ ವಾಸಿಸುವ ಹಿಂದು ಜನರಿಗೆ ಹಲವು ದಿನಗಳಿಂದ ಬಾಂಗ್ಲಾದಲ್ಲಿ ಕಾರಣಾಂತರಗಳಿಂದ ಹಿಂದುಗಳ ಮೇಲೆ ಹಲ್ಲೆ, ಹತ್ಯೆಗಳಂತ ಪ್ರಕರಣಗಳು ನಡೆಯುತ್ತಿವೆ. ದೇಶ ಅಜಾಗರುಕತೆಯಿಂದ ಕೂಡಿದ್ದು, ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಾಂಗ್ಲಾದಲ್ಲಿ ಹಿಂದುಗಳ ಮನೆ, ಮಠಗಳ ಮೇಲೆ ದರೋಡೆ, ಕೊಲೆ, ಅತ್ಯಾಚಾರಗಳನ್ನು ನಡೆಸಲಾಗುತ್ತಿದ್ದರೂ ವಿಶ್ವಸಂಸ್ಥೆ ಕಣ್ಮುಚ್ಚಿ ಕುಳಿತಿದೆಯ ಇಂತಹ ಪರಿಸ್ಥಿತಿಯಲ್ಲಿ ಬಾಂಗ್ಲಾದಲ್ಲಿ ಅಲ್ಪ ಸಂಖ್ಯಾತರಾಗಿರುವ ಹಿಂದುಗಳ ಪರ ವಿಶ್ವಸಂಸ್ಥೆ ನಿಲ್ಲಬೇಕಿದೆ ಎಂದರು.
ಹಿಂದುಗಳ ರಕ್ಷಣೆ ಇಲ್ಲದೆ ಅವರ ಬದುಕು ಸರ್ವನಾಶದತ್ತಾ ಹೋಗುತ್ತಿದೆ. ಬಾಂಗ್ಲಾ ಮುಖಂಡರೊಂದಿಗೆ ಚರ್ಚೆ ನಡೆಸಿ ಶಾಂತಿ ಸಂಧಾನದ ಮೂಲಕ ವಿಶ್ವಸಂಸ್ಥೆ ಮುಂದೆ ನಿಂತು ಹಿಂದುಗಳಿಗೆ ಹೆಚ್ಚಿನ ರಕ್ಷಣೆ ಮಾಡಬೇಕಿದೆಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಹಿಂದು ಜಾಗರಣಾ ವೇದಿಕೆಯ ಚಂದನ್, ಬಿಜೆಪಿ ಅಧ್ಯಕ್ಷ ಪೀಹಳ್ಳಿ ರಮೇಶ್, ಮುಖಂಡರಾದ ಸಚ್ಚಿದಾನಂದ, ಕೆ.ಎಸ್. ನಂಜುಂಡೇಗೌಡ, ಟಿ.ಶ್ರೀಧರ್, ಉಮೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣೇಗೌಡ, ಪುರಸಭೆ ಸದಸ್ಯ ಎಸ್. ಪ್ರಕಾಶ್, ಒಕ್ಕಲಿಗ ಸಂಘದ ದೇವರಾಜು, ವಕೀಲ ಬಾಲು, ರವೀಶ್, ಜಯಕುಮಾರ್, ಜಯಲಕ್ಷ್ಮಮ್ಮ, ನಳಿನಾ, ಸರಸ್ವತಿ ಪಶ್ಚಿಮವಾಹಿನಿ, ಮಂಜುಳಾ, ಚಂದಗಾಲು ಶಂಕರ್, ಹೇಮಂತ್‌ಕುಮಾರ್, ಸುಧಾಕರ್, ಪುಟ್ಟರಾಮು, ಗುಪ್ತಾ, ಚೇತು, ಕುಮಾರ್ ಸೇರಿದಂತೆ ಇತರ ಮುಖಂಡರು ಭಾಗವಹಿಸಿದ್ದರು.