ಸಾರಾಂಶ
ಕರ್ನಾಟಕ ರಾಜ್ಯ ಶಾಲೆ-ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳಲ್ಲಿ ಕೆಲವೊಂದಿಷ್ಟು ಕಾರಣಕ್ಕೆ ಸರ್ಕಾರವು ಗೊಂದಲವನ್ನು ಸೃಷ್ಟಿ ಮಾಡುತ್ತಿದೆ ಎಂದು ಎಬಿವಿಪಿ ಸದಸ್ಯರು ಪ್ರತಿಭಟಿಸಿದರು.
ಬೀದರ್:
ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂಬ ಕುವೆಂಪು ಅವರ ವಾಕ್ಯ ಬದಲಾಯಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಎಬಿವಿಪಿ ಬೀದರ್ ಕಾರ್ಯಕರ್ತರು ಪ್ರತಿಭಟಿಸಿ ಮುಖ್ಯಮಂತ್ರಿಗೆ ಬರೆದ ಮನವಿ ಜಿಲ್ಲಾಡಳಿತಕ್ಕೆ ಸಲ್ಲಿಸಿದರು.ಕರ್ನಾಟಕ ರಾಜ್ಯ ಶಾಲೆ-ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳಲ್ಲಿ ಕೆಲವೊಂದಿಷ್ಟು ಕಾರಣಕ್ಕೆ ಸರ್ಕಾರವು ಗೊಂದಲವನ್ನು ಸೃಷ್ಟಿ ಮಾಡುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಶಾಲೆಗಳಲ್ಲಿ ಸರಸ್ವತಿ, ಗಣಪತಿ ಮತ್ತಿತರ ಧಾರ್ಮಿಕ ಪೂಜೆ ಮಾಡುವುದನ್ನು ನಿಷೇಧ ಮಾಡಿ ಗೊಂದಲ ಸೃಷ್ಟಿ ಮಾಡಿತ್ತು,
ಈಗ ಮತ್ತೆ ವಸತಿ ಶಾಲೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರ ವಾಕ್ಯವನ್ನೇ ಬದಲಾವಣೆ ಮಾಡಿ ''''''''ಜ್ಞಾನ ದೇಗುಲವಿದು ಧೈರ್ಯೆವಾಗಿ ಪ್ರಶ್ನಿಸಿ'''''''' ಎಂದು ಬರೆಯಲಾಗಿದೆ. ಈ ನಡೆ ಖಂಡನೀಯ ಹಾಗೂ ಕರ್ನಾಟಕ ರಾಜ್ಯದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರ ವಾಕ್ಯಗಳನ್ನು ತಿರುಚಿ ಸರ್ಕಾರ ವಿದ್ಯಾರ್ಥಿ ಸಮುದಾಯಕ್ಕೆ ಯಾವ ಸಂದೇಶ ಕೊಡಲು ಹೊರಟಿದೆ ಎಂಬುದು ರಾಜ್ಯದ ವಿದ್ಯಾರ್ಥಿ ಸಮುದಾಯದ ಪ್ರಶ್ನೆಯಾಗಿದೆ.ಈ ರೀತಿಯ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸಿದ್ದಾಂತದ ರಾಜಕಾರಣವನ್ನು ಸೇರ್ಪಡೆ ಮಾಡಲು ಹೊರಟಿರುವ ಸರ್ಕಾರದ ನಡೆ ಖಂಡನೀಯವಾಗಿದೆ ಎಂದರು. ಈ ವೇಳೆ ತಾಲೂಕು ಸಂಚಾಲಕ ಅಂಬ್ರೇಶ ಬಿರಾದಾರ್, ಅಮರ್ ಸ್ವಾಮಿ. ಪವನ್ ಕುಂಬಾರ. ನಾಗರಾಜ್.ಮಂಜುನಾಥ್, ಅಭಿಷೇಕ್.ಶಂಭು. ಮಹೇಶ್.ಅಂಕುಶ. ಸಚಿನ. ಪವನ್. ದಿನೇಶ್ ಪವನ್ ಪ್ರಸಾದ್. ರವಿ. ಮತ್ತಿತರರು ಇದ್ದರು.