ಸಾಮೂಹಿಕ ನಾಯಕತ್ವದಡಿ ಮೆರವಣಿಗೆ, ಅಹೋರಾತ್ರಿ ಧರಣಿ

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಸಫಾರಿ ಬಂದ್‌ ಆಗಬೇಕು, ಕೇರಳಕ್ಕೆ ಕಲ್ಲು, ಎಂ.ಸ್ಯಾಂಡ್‌ ಹೋಗಬಾರದು ಎಂದು ಆಗ್ರಹಿಸಿ ಸಾಮೂಹಿಕ ನಾಯಕತ್ವದ ರೈತಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಅಹೋರಾತ್ರಿ ಧರಣಿ ಆರಂಭಿಸಿದರು.

ಸಾಮೂಹಿಕ ನಾಯಕತ್ವದ ರೈತಸಂಘದ ನಾಯಕ ಹೊನ್ನೂರು ಪ್ರಕಾಶ್‌ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಜಿಲ್ಲಾಡಳಿತ, ತಾಲೂಕು ಅಡಳಿತ, ರಾಜ್ಯ ಸರ್ಕಾರ ಹಾಗೂ ಶಾಸಕರ ವಿರುದ್ಧ ಧಿಕ್ಕಾರ ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು.


ಧರಣಿ ಸ್ಥಳಕ್ಕೆ ತಹಸೀಲ್ದಾರ್‌ ಎಂ.ಎಸ್. ತನ್ಮಯ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂ ವಿಜ್ಞಾನಿ ಜನಾರ್ದನ, ತಾಪಂ ಸಹಾಯಕ ನಿರ್ದೇಶಕ ನಾಗಭೂಷಣ್‌ ಸೇರಿದಂತೆ ಇನ್ನಿತರ ಅಧಿಕಾರಿಗಳನ್ನು ರೈತಸಂಘದ ಮುಖಂಡರು ಕೇಳುವ ಪ್ರಶ್ನೆಗೆ ಕೆಲ ಅಧಿಕಾರಿಗಳು ಉತ್ತರಿಸಿ ತಡವರಿಸಿದರು.

ಹೊನ್ನೂರು ಪ್ರಕಾಶ್‌ ಮಾತನಾಡಿ, ಕೇರಳಕ್ಕೆ ಎಂ. ಸ್ಯಾಂಡ್‌, ಕಲ್ಲು ಸಾಗಾಣಿಕೆ ನಿಲ್ಲಬೇಕು. ಓವರ್‌ ಲೋಡ್‌ ಸಂಚಾರ ನಿಲ್ಲಬೇಕು. ಪರ್ಮಿಟ್‌ ವಂಚಿಸಿ ತಡೆಗಟ್ಟುವುದು ನಿಲ್ಲಬೇಕು ಎಂದು ಆಗ್ರಹಿಸಿದರು.

ಸಫಾರಿ ನಿಲ್ಲಿಸಿ:

ಕಾಡು ಪ್ರಾಣಿಗಳ ಹಾವಳಿ ತಾಲೂಕಿನಲ್ಲಿ ಹೆಚ್ಚಿದೆ. ಎಲ್ಲೆಂದರಲ್ಲಿ ಕಾಡಾನೆ, ಹುಲಿ, ಚಿರತೆ ಜೊತೆಗೆ ಕಾಡು ಹಂದಿ ಹಾವಳಿ ಮಿತಿ ಮೀರಿದೆ. ಸಫಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತಸಂಘದ ಪಾಪಣ್ಣ, ಬರಗಿ ಮಹೇಶ್‌, ಶಶಿಧರ್‌ ಹಾಗೂ ಮಹಿಳೆಯರು ಸೇರಿದಂತೆ ನೂರಾರು ಮಂದಿ ಇದ್ದರು.--೭ಜಿಪಿಟಿ೪

ಗುಂಡ್ಲುಪೇಟೆ ಪಟ್ಟಣದಲ್ಲಿ ಸಾಮೂಹಿಕ ನಾಯಕತ್ವದ ರೈತಸಂಘದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.