ನಾರಾಯಣಗೌಡ ಬಂಧನ ಖಂಡಿಸಿ ಕರವೇ ಪ್ರತಿಭಟನೆ

| Published : Dec 29 2023, 01:32 AM IST

ಸಾರಾಂಶ

ಕನ್ನಡಭಾಷೆಯ ಉಳುವಿಗಾಗಿ ಹಗಲಿರಳು ಶ್ರಮಿಸುತ್ತಿರುವ ರಾಜ್ಯ ಕರವೇ ಅಧ್ಯಕ್ಷ ಟಿ. ನಾರಾಯಣಗೌಡರನ್ನು ತಕ್ಷಣ ಬಿಡುಗಡೆಗೊಳಿಸಬೇಕು.

ಕುಂದಗೋಳ: ಕನ್ನಡ ಬಳಸಿ ಇಲ್ಲವೇ ಕರ್ನಾಟಕ ಬಿಟ್ಟು ತೊಲಗಿ ಎಂಬ ಜನಜಾಗೃತಿ ಪ್ರತಿಭಟನೆ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ. ನಾರಾಯಣಗೌಡ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಕರವೇ ತಾಲೂಕು ಘಟಕ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು.

ಈ ವೇಳೆ ಮಾತನಾಡಿದ ಕರವೇ ಅಧ್ಯಕ್ಷ ಕಲ್ಲಪ್ಪ ಹರಕುಣಿ, ಕನ್ನಡ ನಾಡು, ನುಡಿ, ನೆಲ, ಜಲ, ರಕ್ಷಣೆಗಾಗಿ ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಕನ್ನಡಭಾಷೆಯ ಉಳುವಿಗಾಗಿ ಹಗಲಿರಳು ಶ್ರಮಿಸುತ್ತಿರುವ ರಾಜ್ಯ ಕರವೇ ಅಧ್ಯಕ್ಷ ಟಿ. ನಾರಾಯಣಗೌಡರನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ತಹಸೀಲ್ದಾರ್‌ ಅಶೋಕ ಶಿಗ್ಗಾವಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕರವೇ ಕಾರ್ಯಕರ್ತರಾದ ಅಶೋಕ ಘೋರ್ಪಡೆ, ಅಡಿವೆಪ್ಪ ಹೆಬಸೂರ, ಮಂಜುನಾಥ ಹಾದಿಮನಿ, ರವಿ ಶಿರಸಂಗಿ, ಲಿಂಗರಾಜ ಕುಬಿಹಾಳ, ಮಂಜು ಪೂಜಾರ, ಸಂದೀಪ ಅಣ್ಣಿಗೇರಿ, ಜಗದೀಶ ಅಣ್ಣಿಗೇರಿ, ದಾದಾಕಲಂದರ ಹಂಚಿನಾಳ, ಮುರಡೇಶ ಬ್ಯಾಹಟ್ಟಿ, ಸಂಜು ಧಾರವಾಡ, ಸಾದೀಕ ಹಂಚಿನಾಳ, ಮಂಜುನಾಥ ಮೇಲ್ಮಾಳಗಿ, ಸಮೀರ ಹಂಚಿನಾಳ, ಬಸವರಾಜ ಮಾಯಣ್ಣವರ, ಮನೋಜ ಉಪ್ಪಾರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.