ಕುಡಿವ ನೀರಿಗಾಗಿ ಪಪಂ ಎದುರು ಪ್ರತಿಭಟನೆ

| Published : Mar 23 2024, 01:03 AM IST

ಕುಡಿವ ನೀರಿಗಾಗಿ ಪಪಂ ಎದುರು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನೀರಿನ ಸಮಸ್ಯೆ ಬಗೆಹರಿಸುವಂತೆ ಮುಖ್ಯಾಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಿಗೆ ಸಾಕಷ್ಟು ಬಾರಿ ತಿಳಿಸಲಾಗಿದೆ. ಅಲ್ಲದೆ ಸಮರ್ಪಕ ನೀರು ವಿತರಣೆಗೆ ಬೇರೆ ಪೈಪಲೈನ್‌ ಅಳವಡಿಸಲು ಮನವರಿಕೆ ಮಾಡಿದರೂ ಜನರ ಸಮಸ್ಯೆ ಕುರಿತು ಯಾರೊಬ್ಬರು ಕೆಲಸ ಮಾಡುತ್ತಿಲ್ಲ

ಮುಳಗುಂದ: ಕಳೆದ ಐದಾರು ತಿಂಗಳಿಂದ ನಮ್ಮ ಮನೆಗೆ ನೀರು ಬಂದಿಲ್ಲ, ಈ ಕುರಿತು ಮುಖ್ಯಾಧಿಕಾರಿಗಳಿಗೆ ಹಲವಾರು ಬಾರಿ ಮೌಖಿಕವಾಗಿ ತಿಳಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಚಿಂದಿಪೇಟ ಓಣಿಯ ಮಹಿಳೆಯರು ಪಪಂ ಕಾರ್ಯಾಲಯದ ಎದುರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಸ್ಥಳೀಯ ಚಿಂದಿಪೇಟಿ ಓಣಿಯ ನಿವಾಸಿಗಳು ಕಳೆದ ಐದಾರು ತಿಂಗಳಿನಿಂದ ನಿತ್ಯ ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ವಾರ್ಡ ಸದಸ್ಯ, ಅಧಿಕಾರಿಗಳು ಸೇರಿದಂತೆ ಇನ್ನಿತರರು ನಮ್ಮ ಸಮಸ್ಯೆ ಕೇಳುತ್ತಿಲ್ಲ.ನಾವು ನೀರು ಬರುವರೆಗೆ ಪಪಂ ಕಾರ್ಯಾಲಯ ಬಿಟ್ಟು ತೆರಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀರಿನ ಸಮಸ್ಯೆ ಬಗೆಹರಿಸುವಂತೆ ಮುಖ್ಯಾಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಿಗೆ ಸಾಕಷ್ಟು ಬಾರಿ ತಿಳಿಸಲಾಗಿದೆ. ಅಲ್ಲದೆ ಸಮರ್ಪಕ ನೀರು ವಿತರಣೆಗೆ ಬೇರೆ ಪೈಪಲೈನ್‌ ಅಳವಡಿಸಲು ಮನವರಿಕೆ ಮಾಡಿದರೂ ಜನರ ಸಮಸ್ಯೆ ಕುರಿತು ಯಾರೊಬ್ಬರು ಕೆಲಸ ಮಾಡುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ನಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಹಾಂತೇಶ ಕಣವಿ, ಸುಶೀಲಾ ಕಳ್ಳಿಮನಿ, ಪಾರವ್ವ ಕಳ್ಳಿಮನಿ, ಪುಷ್ಪಾ ಅಳ್ಳಣ್ಣವರ, ಲಲಿತಾ ಕಳ್ಳಿಮನಿ, ಯಲ್ಲಪ್ಪ ಕಳ್ಳಿಮನಿ, ನಿಂಗಪ್ಪ ಕಳ್ಳಿಮನಿ, ಮಲ್ಲಿಕಾರ್ಜುನ ಅಳ್ಳಣ್ಣವರ, ಖಾದರಸಾಬ ಕಲ್ಲಕುಟ್ರ, ರಮೇಶ ಕಳ್ಳಿಮನಿ, ಪ್ರವೀಣ ಕಮಡೊಳ್ಳಿ ಸೇರಿದಂತೆ ಮತ್ತಿತರರು ಇದ್ದರು.