ರಾಜ್ಯ ಸರ್ಕಾರ ಬರಪೀಡಿತ ಗ್ರಾಮಗಳಲ್ಲಿ ಜನಸಾಮಾನ್ಯರಿಗೆ ಕನಿಷ್ಠ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸಬೇಕು.

ಹರಪನಹಳ್ಳಿ: ಹಾಲು, ಮೊಸರು ಹಾಗೂ ಬಸ್ ದರ ಏರಿಸಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ತಾಲೂಕು ಜೆಡಿಎಸ್‌ ಕಾರ್ಯಕರ್ತರು ಬುಧವಾರ ನಗರದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಜೆಡಿಎಸ್ ತಾಲೂಕಾಧ್ಯಕ್ಷ ಮಲಕಪ್ಪ ವಿ. ತಾವರಗುಂದಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಹಾಗೂ ಜನರ ಸಂಕಷ್ಟಕ್ಕೆ ಸ್ಪಂದಿಸುವ ಪ್ರಯತ್ನ ಮಾಡದೆ ಜನರಿಗೆ ಹೊರೆಯಾಗುವ ದಿನಬಳಕೆ ಪದಾರ್ಥಗಳ ಬೆಲೆ ಹೆಚ್ಚಿಸುತ್ತಾ ಬಂದಿದೆ ಎಂದು ದೂರಿದರು.

ಜೆಡಿಎಸ್ ತಾಲೂಕು ಗೌರವಾಧ್ಯಕ್ಷ ಹಂಚಿನಮನೆ ಕೆಂಚಪ್ಪ ಮಾತನಾಡಿ, ರಾಜ್ಯ ಸರ್ಕಾರ ಬರಪೀಡಿತ ಗ್ರಾಮಗಳಲ್ಲಿ ಜನಸಾಮಾನ್ಯರಿಗೆ ಕನಿಷ್ಠ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸಬೇಕು. ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿದ್ದನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು, ಕೇಂದ್ರ ಸಚಿವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಹಳ್ಳಿಗುಗ್ಗು ಎಂದು ಅವಹೇಳನ ಮಾಡಿರುವುದು, ಹಳ್ಳಿ ಜನರಿಗೆ ಮಾಡಿರುವ ಅವಮಾನ ಮುಂದಿನ ಚುನಾವಣೆಗಳಲ್ಲಿ ಅವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಬೇವಿನಹಳ್ಳಿ ಬಸವರಾಜ, ಉಪಾಧ್ಯಕ್ಷ ಅಲಮರಸಿಕೆರೆ ಸಣ್ಣವೀರಪ್ಪ, ಖಜಾಂಚಿ ಹುಲಿಕಟ್ಟೆ ಮಲ್ಲಪ್ಪ, ತಾಲೂಕು ಕಾರ್ಯದರ್ಶಿ ಮತ್ತೂರು ಬಸವರಾಜ, ರೈತ ಘಟಕದ ಅಧ್ಯಕ್ಷ ಕಡಬಿಗೆರೆ ಅಜ್ಜಯ್ಯ, ಎಸ್ಟಿ ಘಟಕದ ಅಧ್ಯಕ್ಷ ನೀಲಗುಂದ ಗೋಣೆಪ್ಪ, ರೈತ ಘಟಕದ ಗೌರವಾಧ್ಯಕ್ಷ ಕಡುಬಿಗೇರಿ ಗೋವಿಂದರಾಜ, ಎಸ್ಸಿ ಘಟಕದ ಉಪಾಧ್ಯಕ್ಷ ಕಡಬಿಗೆರೆ ಮದ್ದಾನಪ್ಪ, ನೀಲಗುಂದ ಜಗದೀಶ್, ಕಸವನಹಳ್ಳಿ ಕೊಟ್ರೇಶ್, ಕುಂಚೂರು ಮಹಮ್ಮದ್ ರಫಿ, ರಿಜ್ವಾನ್ ಸಾಬ್, ಸುಭಾನ್ ಸಾಬ್, ಹುಲಿಕಟ್ಟಿ ಹನುಮಂತಪ್ಪ, ಪಲಾಣಿ ಸ್ವಾಮಿ, ವ್ಯಾಸಂತಾಂಡದ ಆದೇಶ ನಾಯ್ಕ, ತಾವರಗುಂದಿ ಲೋಹಿತ್, ಪುಣಬಘಟ್ಟ ಸೋಮನಗೌಡ, ತಾವರಗಂದಿ ಗೌಡಪ್ಪ, ಸಾರಥಿ ಕೊಟ್ರೇಶ್, ತಾವರಗೊಂದಿ ಕರಿಬಸಪ್ಪ, ಕುಂಚೂರು ಗುಡ್ಡಪ್ಪ, ಬಣಕಾರ್ ಕೊಟ್ರೇಶ್, ರಹಮತ್ತುಲ್ಲಾ, ರಶೀದ್ ಸಾಬ್ ಸೇರಿದಂತೆ ಇತರರು ಇದ್ದರು.