ಕೋಲ್ಕತ್ತಾದಲ್ಲಿ ವೈದ್ಯೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

| Published : Aug 15 2024, 01:47 AM IST

ಕೋಲ್ಕತ್ತಾದಲ್ಲಿ ವೈದ್ಯೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಲ್ಕತಾದ ಆರ್‌.ಜಿ.ಕರ್‌ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಮಂಗಳವಾರ ಚಾಮರಾಜನಗರದಲ್ಲಿ ಜೂನಿಯರ್ ಡಾಕ್ಟರ್ಸ್ ಅಸೋಸಿಯೇಷನ್ ವತಿಯಿಂದ ಮೊಂಬತ್ತಿ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕೊಲ್ಕತಾದ ಆರ್‌.ಜಿ.ಕರ್‌ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಮಂಗಳವಾರ ಚಾಮರಾಜನಗರದಲ್ಲಿ ಜೂನಿಯರ್ ಡಾಕ್ಟರ್ಸ್ ಅಸೋಸಿಯೇಷನ್ ವತಿಯಿಂದ ಮೊಂಬತ್ತಿ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಎದುರು ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನದ ವರೆಗೆ ಮೊಂಬತ್ತಿ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಡಾ.ಮಾರುತಿ ಮಾತನಾಡಿ, ಕೊಲ್ಕತಾದ ಆರ್‌.ಜಿ ಕರ್‌ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಮಾಡಿರುವುದು ಖಂಡನೀಯ. ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಎಲ್ಲಾ ವೈದ್ಯರು ಹಾಗೂ ವಿದ್ಯಾರ್ಥಿಗಳು ಈ ಘಟನೆಯನ್ನು ಖಂಡಿಸುತ್ತೇವೆ. ಇಂತಹ ಘಟನೆ ಯಾವ ವೈದ್ಯಕೀಯ ಕಾಲೇಜಿನಲ್ಲೂ ನಡೆಯಬಾರದು ಎಂದರು.

ನಾವು ಯಾವುದೇ ಭಯವಿಲ್ಲದೇ ಚಿಕಿತ್ಸೆ ನೀಡಬೇಕು ಅದಕ್ಕೆ ಡೀನ್, ಜಿಲ್ಲಾಡಳಿತ, ‌ ಜಿಲ್ಲಾ ಪೊಲೀಸ್ ಹಾಗೂ ರಾಜ್ಯ ಸರ್ಕಾರ ಎಲ್ಲಾ ರೀತಿಯ ಭದ್ರತೆ ಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಡೀನ್ ಮಂಜುನಾಥ್, ಪ್ರಾಂಶುಪಾಲ ಡಾ.ಗಿರೀಶ್.ವಿ ಪಾಟೀಲ್, ಡಾ.ಕೃಷ್ಣ ಪ್ರಸಾದ್ , ಡಾ.ಕಿರಣ್, ಡಾ.ಆರ್.ಮೂರ್ತಿ ಸಿ ವಿ, ಡಾ. ಪ್ರದೀಪ್.ಎಂ.ಆರ್, ಡಾ.ಮಹೇಶ್ವರ.ಎನ್, ಡಾ.ಶ್ರೀನಿವಾಸ.ಕೆ, ಡಾ.ಅಜಯ್.ಕೆ.ಟಿ, ಸತೀಶ್.ಜೆ. ವಿ, ಡಾ ಪುರುಷೋತ್ತಮ.ಕೆ, ಡಾ.ಶ್ರೀಧರ್ ಪ್ರಸಾದ್ ವೈ. ಪಿ, ಡಾ.ಪವನ್ ಸಿ, ಡಾ.ಸ್ನೇಹ ಶ್ರೀ, ಡಾ ಚೈತನ್ಯ ಆರ್, ಡಾ.ನಂದಕಿಶೋರ್ ಬಿ,ಆರ್, ಡಾ.ತರುಣ್ ಎಸ್ ಯರಬಾಳ್, ಡಾ.ದೀಪಾ ಮಿಶ್ರಾ, ಡಾ.ಗೌತಮಿ ಎಂ, ಡಾ.ಚೇತನ್ ಕುಮಾರ್, ಡಾ.ದಿವ್ಯಾ ಕಟಿಯಾರ್, ಡಾ.ಸಂಜು ಎ.ಎಸ್, ಡಾ.ಸಮೃದ್ಧಿ ರಾಣೆ, ಡಾ.ಹೃದಯ. ಪಿ,ಡಾ.ಅತುಲ್ ಪಾಂಡೆ, ಡಾ.ತೇಜಸ್ ಎ, ಡಾ.ನಿಹಾರ್ ಸಿ.ಕೆ, ಡಾ.ಅಭಿಷೇಕ್ ಕುಮಾರ್ ಎಂ, ಡಾ.ಅರ್ಚನಾ ಶ್ರೀಧರ್ ಶೇಟ್, ಡಾ.ಸೈಯದ್ ಜೀಶನ್ ಹುಸೇನ್, ಡಾ.ಎಸ್.ಜಾಫರ್ ಸಲ್ಮಾನ್ ಖಾನ್ ಮತ್ತಿತರರಿದ್ದರು.