ಸಹಬಾಳ್ವೆ ಸಂಘ ಮತ್ತು ರಾಷ್ಟ್ರೀಯ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ, ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕೇಂದ್ರದ ಜನವಿರೋಧಿ ಟ್ರಾನ್ಸ್ ಜೆಂಡರ್‌ ತಿದ್ದುಪಡಿ ಮಸೂದೆ ಪ್ರತಿ ಸುಟ್ಟು ಲಿಂಗತ್ವ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕಿನ ರಕ್ಷಣೆಗಾಗಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಲಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರುಸಹಬಾಳ್ವೆ ಸಂಘ ಮತ್ತು ರಾಷ್ಟ್ರೀಯ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ, ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕೇಂದ್ರದ ಜನವಿರೋಧಿ ಟ್ರಾನ್ಸ್ ಜೆಂಡರ್‌ ತಿದ್ದುಪಡಿ ಮಸೂದೆ ಪ್ರತಿ ಸುಟ್ಟು ಲಿಂಗತ್ವ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕಿನ ರಕ್ಷಣೆಗಾಗಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಲಾಯಿತು.ಪ್ರತಿಭಟನೆ ನೇತೃತ್ವ ವಹಿಸಿದ್ದ ಟ್ರಾನ್ಸ್ ಜೆಂಡರ್ ಸಮುದಾಯದ ಮುಖಂಡರಾದ ದೀಪಿಕಾ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಟ್ರಾನ್ಸ್ ಜೆಂಡರ್‌ ತಿದ್ದುಪಡಿ ಕಾಯ್ದೆ 2026 ನ್ನು ಜಾರಿಗೆ ತಂದು ಟ್ರಾನ್ಸ್ ಜೆಂಡರ್ ಸಮುದಾಯದ ಸಾಂವಿಧಾನಿಕ ಹಕ್ಕಿನ ಮೇಲೆ ದಮನಕಾರಿ ನೀತಿಯನ್ನು ಹೇರುತ್ತಿರುವುದು ಜನ ವಿರೋಧಿ ನಡೆಯಾಗಿದೆ ಎಂದರು.ಈ ತಿದ್ದುಪಡಿ ಗೌಪ್ಯತೆ , ದೇಹದ ಸ್ವಾಯತ್ತತೆ ಮತ್ತು ಸ್ವ-ಗುರುತಿನ ಮೂಲಭೂತ ಹಕ್ಕಿಗೆ ಬೆದರಿಕೆ ಉಂಟು ಮಾಡುತ್ತದೆ. ಈಗಾಗಲೇ ಅಳಿವಿನಂಚಿಲ್ಲಿರುವ ಸಮುದಾಯಗಳ ಮೇಲೆ ನಿಗಾವಳಿ ಮತ್ತು ನಿಯಂತ್ರಣ ಹೆಚ್ಚಿಸಿ, ಆನೇಕ ಜನರನ್ನು ಅಜ್ಞಾತತೆ ಮತ್ತು ಹೊರತಳ್ಳುವಿಕೆಯ ಅಪಾಯವಿದೆ. ಇದು ಸಮುದಾಯದ ಜನರ ಜೀವನದ ಮೇಲೆ ಪರಿಣಾಮ ಬೀರಲಿದ್ದು ಇದು ನಮ್ಮ ಹಕ್ಕುಗಳ ಮೇಲೆ ನಿಯಂತ್ರಣದ ಕಡೆಗೆ, ಸ್ವಗುರುತಿನಿಂದ ರಾಜ್ಯ ಪ್ರಮಾಣೀಕರಣದ ಕಡೆಗೆ ಸಾಗುವ ಆಪಾಯಕಾರಿ ಬದಲಾವಣೆಯನ್ನು ಸೂಚಿಸುತ್ತದೆ ಎಂದರು.ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟದ ಪ್ರತಿನಿಧಿ ವೈಶಾಲಿ ಮಾತನಾಡಿ, ಕೇಂದ್ರದ ಮನುವಾದಿ ಸರ್ಕಾರವು ಮಾರ್ಚ್ 13, 2026 ರಂದು ಪಾರ್ಲಿಮೆಂಟಿನಲ್ಲಿ ಕೇಂದ್ರ ಸಚಿವ ವಿರೇಂದ್ರಕುಮಾರ್‌ ರವರು ಟ್ರಾನ್ಸ್ ಜೆಂಡರ್‌ ಮಸೂದೆಯನ್ನು ಜಾರಿಗೆ ತಂದು ಕಾಯಿದೆಯ ಬಗ್ಗೆ ಜನಾಭಿಪ್ರಾಯವಾಗಿದೆ. ಸಮುದಾಯದ ಜನರಲ್ಲಿ ಜಾಗೃತಿ ನೀಡದೇ ರಾಷ್ಟ್ರಪತಿ ದ್ರೌಪದಿ ಮುರ್ಮುರವರಿಂದ ಮಸೂದೆಯನ್ನು ಕಾನೂನು ಜಾರಿಗೆ ತಂದಿದ್ದಾರೆ ಎಂದರು.ಪ್ರತಿಭಟನೆಯನ್ನು ಬೆಂಬಲಿಸಿ ಸ್ಲಂಜನಾಂದೋಲನ ಕರ್ನಾಟಕ ಸಂಘಟನೆಯ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸೈಯದ್ ಮುಜೀಬ್ ಮಾತನಾಡಿದರು. ಮಂಗಳಮುಖಿ ಸಮುದಾಯದ ಮುಖಂಡರಾದ ದೀಪಿಕಾ, ಲಿಲ್ಲಿ, ದಿವ್ಯ, ಸುಮಾ, ಮಾನ್ಯ, ಡಯಾನ, ಗಗನ, ಹಾಗೂ ಸಾವಿತ್ರಿಬಾಪುಲೆ ಮಹಿಳಾ ಸಂಘಟನೆಯಅನುಪಮಾ, ಶಾರದಮ್ಮ, ಪೂರ್ಣಿಮಾ, ಶಂಕ್ರಯ್ಯ, ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್.ತಿರುಮಲಯ್ಯ, ರಂಗನಾಥ್, ಸಂಧ್ಯಾ, ವಸಂತಮ್ಮ, ಮಂಗಳಮ್ಮ ಮುಂತಾದವರು ಪಾಲ್ಗೊಂಡಿದ್ದರು.