ಅಂಬೇಡ್ಕರ್ ಪ್ರತಿಮೆಗೆ ಅಪಮಾನ, ದುಷ್ಕರ್ಮಿಗಳ ವಿಕೃತಿ ಖಂಡಿಸಿ ಗದಗದಲ್ಲಿ ಪ್ರತಿಭಟನೆ

| Published : Jan 30 2024, 02:02 AM IST

ಅಂಬೇಡ್ಕರ್ ಪ್ರತಿಮೆಗೆ ಅಪಮಾನ, ದುಷ್ಕರ್ಮಿಗಳ ವಿಕೃತಿ ಖಂಡಿಸಿ ಗದಗದಲ್ಲಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರ್ಗಿ ಜಿಲ್ಲೆಯ ಕೋಟನೂರ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿರುವುದನ್ನು ಖಂಡಿಸಿ ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಸಮತಾ ಸೇನಾ ಜಿಲ್ಲೆ ಸಂಘಟನೆಯ ನೇತೃತ್ವದಲ್ಲಿ ದಲಿತ ಪರ ವಿವಿಧ ಸಂಘಟನೆಗಳೊಂದಿಗೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು.

ಗದಗ: ಕಲಬುರ್ಗಿ ಜಿಲ್ಲೆಯ ಕೋಟನೂರ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿರುವುದನ್ನು ಖಂಡಿಸಿ ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಸಮತಾ ಸೇನಾ ಜಿಲ್ಲೆ ಸಂಘಟನೆಯ ನೇತೃತ್ವದಲ್ಲಿ ದಲಿತ ಪರ ವಿವಿಧ ಸಂಘಟನೆಗಳೊಂದಿಗೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು.

ಈ ವೇಳೆ ಸಮತಾ ಸೇನಾ ಜಿಲ್ಲಾಧ್ಯಕ್ಷ ಕಿರಣ ಗಾಮನಗಟ್ಟಿ ಮಾತನಾಡಿ, ಕಲಬುರ್ಗಿ ಜಿಲ್ಲೆಯ ಕೋಟನೂರನಲ್ಲಿರುವ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಕೆಲ ಕಿಡಿಗೇಡಿಗಳು ಅವಮಾನ ಮಾಡಿ ಪಟಾಕಿ ಸಿಡಿಸಿ, ತಮ್ಮ ವಿಕೃತ ಬುದ್ಧಿ ಪ್ರದರ್ಶಿಸಿದ್ದು, ಇಂತಹ ವಿಕೃತ ಮನಸ್ಥಿತಿಯಲ್ಲಿ ಇನ್ನೂ ಬದುಕಿದ್ದಾರೆ. ಕಲಬುರ್ಗಿ ಜಿಲ್ಲಾಡಳಿತವು ಡಾ. ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಐದು ಜನ ಆರೋಪಿಗಳ ಬಂಧನ ಮಾಡಿದ್ದು ಇವರುಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿ ಐದು ಜನ ಆರೋಪಿಗಳ ಮೇಲೆ ಉಗ್ರವಾದ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೇ ಎಲ್ಲ ಹೋರಾಟಗಾರರ ಪ್ರತಿಮೆಗಳಿಗೆ ಭದ್ರತೆ ನೀಡಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ದಲಿತ ಮುಖಂಡರಾದ ಎಸ್.ಎನ್. ಬಳ್ಳಾರಿ, ಪರಶುರಾಮ ಪೂಜಾರ, ರೇವಣಸಿದ್ದಪ್ಪ ಮೇಳನ್ನವರ, ಬಾಲರಾಜ ಅರಬರ, ಪ್ರಕಾಶ ಕಮಡೊಳ್ಳಿ, ಹೊನ್ನಪ್ಪ ಸಾಕಿ, ಬಸಯ್ಯ ನಂದಿಕೋಲಮಠ, ಮಂಜುನಾಥ ಕೊರವರ, ವಿಜಯ ಗಾಮನಗಟ್ಟಿ, ರಾಜು ಸಾಬೋಜಿ, ವಿಕಾಸ ದೊಡ್ಡಮನಿ, ಕೆಂಚಪ್ಪ ಮ್ಯಾಗೇರಿ, ಸಂತೋಷ ಬಣಕಾರ, ಸೇರಿದಂತೆ ದಲಿತ ಕಾರ್ಯಕರ್ತರು, ಯುವಕರು ಉಪಸ್ಥಿತರಿದ್ದರು.