ಗದಗ- ರೋಣ ರಾಜ್ಯ ಹೆದ್ದಾರಿಯನ್ನು 2 ಗಂಟೆಗಳ ಹೆಚ್ಚು ಕಾಲ ರಸ್ತೆ ತಡೆದಿದ್ದರಿಂದ ರಸ್ತೆಯಲ್ಲಿ ನೂರಾರು ವಾಹನಗಳು ನಿಂತು ಸಂಚಾರ ಅಸ್ತವ್ಯಸ್ತಗೊಂಡಿತು.

ಗದಗ: ತಾಲೂಕಿನ ನೀರಲಗಿ ಗ್ರಾಪಂ ವ್ಯಾಪ್ತಿಯ ನಾಗಸಮುದ್ರ ಗ್ರಾಮದ ಸರಹದ್ದಿನ ಗದಗ- ರೋಣ ರಸ್ತೆಗೆ ಹೊಂದಿಕೊಂಡಿರುವ ಉಳವಿ ಚೆನ್ನಬಸವೇಶ್ವರ(ಕುತ್ತಿಗೊಳ್ಳ ಬಸವಣ್ಣ) ದೇವಸ್ಥಾನದ ಉಗ್ರಾಣದ ಕಟ್ಟಡವನ್ನು ತೆರವುಗೊಳಿಸಿದ್ದನ್ನು ಖಂಡಿಸಿ ಗ್ರಾಮಸ್ಥರು ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಗದಗ- ರೋಣ ರಾಜ್ಯ ಹೆದ್ದಾರಿಯನ್ನು 2 ಗಂಟೆಗಳ ಹೆಚ್ಚು ಕಾಲ ರಸ್ತೆ ತಡೆದಿದ್ದರಿಂದ ರಸ್ತೆಯಲ್ಲಿ ನೂರಾರು ವಾಹನಗಳು ನಿಂತು ಸಂಚಾರ ಅಸ್ತವ್ಯಸ್ತಗೊಂಡಿತು. ನಂತರ ಗದಗ- ಬೆಟಗೇರಿ ಬಡಾವಣೆಯ ಪೊಲೀಸ್ ಅಧಿಕಾರಿಗಳು ತ್‌ಕ್ಷಣ ಸ್ಥಳಕ್ಕೆ ಆಗಮಿಸಿ ತ್‌ಕ್ಷಣ ತಪ್ಪಿಸ್ಥನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ವಾಗ್ದಾನ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.ಈ ವೇಳೆ ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಪರ್ವತಗೌಡರ, ನಾಗನಗೌಡ ಹನುಮಂತಗೌಡ, ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಹೊಸಮನಿ, ಸದಸ್ಯರಾದ ಬಸನಗೌಡ ಪಾಟೀಲ, ನೀಲವ್ವ ಮಣ್ಣೂರ, ಮೈಲಾರಪ್ಪ ದೊಡ್ಡಮನಿ, ಅಶೋಕ ವಡವಿ, ಮಲ್ಲನಗೌಡ ಪರ್ವತಗೌಡ್ರ, ಫಕ್ಕೀರಸಾಬ ನದಾಫ, ಮಲ್ಲನಗೌಡ ಭರಮಗೌಡ್ರ, ತಿಪ್ಪನಗೌಡ ಹನುಮಂತಗೌಡ್ರ, ಸಂಗಪ್ಪ ಮಣ್ಣೂರ, ಪರ್ವತಗೌಡ, ಶಂಕರಗೌಡ ಪರ್ವತಗೌಡ್ರ, ನಿಂಗಪ್ಪ ಮಣ್ಣೂರ, ಮೌಲಾಸಾಬ ನದಾಫ, ಹುಚ್ಚೀರಪ್ಪ ಗಾಣಿಗೇರ, ಬಸಪ್ಪ ಬಾವಿ, ಗೋವಿಂದಗೌಡ್ರ ಹನುಮಂತಗೌಡ್ರ, ಬಸಪ್ಪ ಮುಳಗುಂದ, ಮಂಜುನಾಥ ಬಿಳೆಯಲಿ, ಸಂತೋಷ ಕುರವತ್ತಿ, ಹನುಮಂತಗೌಡ ಹನುಮಂತಗೌಡ್ರ, ಬಸನಗೌಡ ಹನುಮಂತಗೌಡ್ರ, ರಮೇಶ ಕೊಳ್ಳಿ, ಶಂಕರಗೌಡ ಪಾಟೀಲ, ಯಲ್ಲಪ್ಪ ಕಣವಿ, ಚಾಂದಸಾಬ ನದಾಫ, ಮೈಲಾರಪ್ಪ ಮಣ್ಣೂರ, ಶೇಖರ ಮುಳಗುಂದ, ಸುರೇಶ ಮುಳಗುಂದ, ಬಸವರಾಜ ಮುಳ್ಳಾಳ ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.ಇಂದು ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ

ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದ ಲಕ್ಷ್ಮೀ ನಾರಾಯಣ ಪತ್ತಿನ ಸೌಹಾರ್ದ ಸಹಕಾರಿ ಸಂಘದ ನೂತನ 2026ನೇ ವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ ಜ. 1ರಂದು ಬೆಳಗ್ಗೆ 10 ಕ್ಕೆ ಸಂಘದ ಕಾರ್ಯಾಲಯದಲ್ಲಿ ಜರುಗಲಿದೆ.ಸಾನ್ನಿಧ್ಯ ವಹಿಸಿ ಹರ್ಲಾಪುರದ ಡಾ. ಕೊಟ್ಟೂರೇಶ್ವರ ಸ್ವಾಮಿಗಳು ದಿನದರ್ಶಿಕೆ ಬಿಡುಗಡೆ ಮಾಡುವರು. ಸಂಘದ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮುಳ್ಳಾಳ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷ ಮೃತ್ಯುಂಜಯ ನಡುವಿನಮಠ, ನಿರ್ದೇಶಕರಾದ ಸಾವಿತ್ರಿ ಅರಹುಣಶಿ, ಬಸವರಾಜ ಕವಲೂರ, ವಿನಾಯಕ ಡಿಗ್ಗಾವಿ, ರಾಗಿಣಿ ಕಲಾಲ, ಸುವರ್ಣ ಕವಲೂರು, ಲಲಿತಾ ಮುಳ್ಳಾಳ, ಮಹಾದೇವ ಈಟಿ, ದ್ರಾಕ್ಷಾಯಿಣಿ ನಡುವಿನಮಠ ಇತರರು ಭಾಗವಹಿಸುವರು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಮೂಡಲತೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.