ಸಾರಾಂಶ
ರಾಮನಗರ: ನಿಯಮಗಳ ನೆಪವೊಡ್ಡಿ ರಾಜ್ಯ ಸರ್ಕಾರ ಹಿಂದೂಗಳ ಭಾವನಾತ್ಮಕ ಹಬ್ಬ ಗಣೇಶೋತ್ಸವ ಸಂಭ್ರಮವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟಿಸಿದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕಾರ್ಯಕರ್ತರು , ಗಣೇಶೋತ್ಸವ ಶೋಭಾಯಾತ್ರೆಯ ಮೇಲೆ ಕಲ್ಲುತೂರಾಟ ಮಾಡುವವರ ಮೇಲೆ ಸಂಘಟಿತ ಅಪರಾಧ ಕಾಯ್ದೆ ಅನ್ವಯ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕಲ್ಲು ತೂರುವ ಸ್ಥಳಗಳ ಮೇಲೆ ಡ್ರೋನ್ ಕ್ಯಾಮರಾ ಅಳವಡಿಸಬೇಕು ಎಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಗಣಪತಿ ಹಬ್ಬಕ್ಕೆ ಆಧ್ಯಾತ್ಮಿಕ ಹಿನ್ನೆಲೆ ಇದೆ. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ದೇಶಭಕ್ತರನ್ನು ಸಂಘಟಿಸಲು ಬಾಲಗಂಗಾಧರ್ ತಿಲಕ್ ಅವರು ಗಣೇಶ ಹಬ್ಬವನ್ನು ಸಾರ್ವಜನಿಕ ಗಣೇಶ ಹಬ್ಬವನ್ನಾಗಿ ಪರಿರ್ತಿಸಿದರು. ಅಂದಿನಿಂದ ಇಂದಿನವರಗೂ ಗಣೇಶೋತ್ಸವು ಸಾರ್ವಜನಿಕ ಸ್ಥಳದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಆದರೆ ಈ ಬಾರಿ ಗಣೇಶ ಉತ್ಸವ ಸಂದರ್ಭದಲ್ಲಿ ವಿಘ್ನ ನಿವಾರಕನ ಉತ್ಸವಕ್ಕೆ ರಾಜ್ಯ ಸಕರ್ಾರವು ನಿಯಮಗಳ ಕಾರಣ ನೀಡಿ ಅನೇಕ ವಿಘ್ನಗಳನ್ನು ಮಾಡುತ್ತಿದೆ. ಹಬ್ಬದ ಸಂಭ್ರಮವನ್ನು ಹತ್ತಿಕುತ್ತುವ ಕೆಲಸ ಮಾಡುತ್ತಿದೆ ಎಂದು ದೂರಿದರು.ಧ್ವನಿ ವರ್ಧಕಗಳನ್ನು ಬಳಸಲು ನಿಷೇಧ ಹೇರಿದೆ. ಮದ್ದೂರು, ಸಾಗರ ಸೇರಿದಂತೆ ಅನೇಕ ಸ್ಥಳಗಳಲ್ಲಿ ಗಣೇಶ ಶೋಭ ಯಾತ್ರೆಯಲ್ಲಿ ಅಲ್ಪಸಂಖ್ಯಾತರೆಂಬ ಹಣೆಪಟ್ಟಿ ಹೊತ್ತಿರುವ ಕಿಡಿಗೇಡಿಗಳಿಂದ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ನಡೆಯುತ್ತಿದೆ. ಪೊಲೀಸರು ಯಾವುದೇ ಬಲವಾದ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ ಹಿಂದೂ ಆಚರಣೆಗಳ ಮೇಲೆಯೇ ದಬ್ಬಾಳಿಕ ಮಾಡಲಾಗುತ್ತಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಬಾಕ್ಸ್:ಗಣಪತಿ ಪ್ರತಿಷ್ಠಾಪನೆ: ಪೊಲೀಸ್ ನೊಟೀಸ್
ಅನುಮತಿ ಪಡೆಯದೆ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದೀರಿ ಎಂದು ಕಾರಣ ನೀಡಿ ರಾಮನಗರದ ಜೈ ಮಾರುತಿ ಗೆಳೆಯರ ಬಳಗಕ್ಕೆ ಪೊಲೀಸರು ನೊಟೀಸ್ ನೀಡಿದ್ದಾರೆ.ನಗರದ ಗೀತಾಮಂದಿರ ಬಡಾವಣೆಯಲ್ಲಿ ಜೈ ಮಾರುತಿ ಗೆಳೆಯವ ಬಳಗ ಕಳೆದ 17 ವರ್ಷದಿಂದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಇದೊಂದು ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಬಡಾವಣೆಯ ಬಾಬುರಾವ್ ಎಂಬುವವರ ಆರ್ ಸಿಸಿ ಮಳಿಗೆಯಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿದೆ.
ಈ ವರ್ಷ ಬಡಾವಣೆಯ ಪ್ರಮುಖರೊಬ್ಬರು ನಿಧನದ ಹಿನ್ನೆಲೆಯಲ್ಲಿ ಗಣೇಶೋತ್ಸವ ಸಮಿತಿ ಸದಸ್ಯರು ತಡವಾಗಿ ಅಂದರೆ ಸೆ.10 ರಂದು ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಸಂಜೆ 6 ಗಂಟೆಗೆ ಮೂರ್ತಿ ಕೂರಿಸಲಾಗಿದ್ದು, ರಾತ್ರಿ 8 ಗಂಟೆ ಐಜೂರು ಪೊಲೀಸರ ಗಣಪತಿ ಪ್ರತಿಷ್ಠಾಪನೆ ಸ್ಥಳಕ್ಕೆ ತೆರಳಿ ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಯುವಕರ ಬಳಗದ ಪ್ರಮುಖರಿಗೆ ನೊಟೀಸ್ ನೀಡಿದ್ದಾರೆ.ಗಣಪತಿ ಆಚರಣೆ ಮುಕ್ತಾಯ ಹಂತದಲ್ಲಿದೆ. ಶಾಂತಿ ಸುವ್ಯಸ್ಥೆ ಕಾಯವ ಸಭೆಗಳಿಗೆ ನೀವು ಗೈರು ಹಾಜರಾಗಿದ್ದೀರಿ. ಗಣಪತಿ ಪ್ರತಿಷ್ಠಾಪನೆಗೆ ಯಾವುದೇ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಧ್ವನಿವರ್ಧಕ ಬಳಕೆ, ವಿದ್ಯುತ್ ದೀಪಾಲಂಕಾರಕ್ಕೆ ಅನುಮತಿ ಪಡೆದಿರುವುದಿಲ್ಲ. ಸೆ.14 ರಂದು ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡುವ ಮಾಹಿತಿ ಇದೆ. ಮೆರವಣಿಗೆಗೂ ಸಹ ಯಾವುದೇ ಅನುಮತಿ ಪಡೆದಿರುವುದಿಲ್ಲ. ಯಾವ ಮಾರ್ಗದಲ್ಲಿ ಸಾಗುತ್ತದೆ ಎಂದು ಸ್ಥಳೀಯ ಠಾಣೆಗೆ ಮಾಹಿತಿ ನೀಡಿಲ್ಲ. ಅನುಮತಿ ಇಲ್ಲದೆ ಗಣಪತಿ ಕಾರ್ಯಕ್ರಮ ಆಯೋಜಿಸಿರುವುದು ಸಮಂಜಸವಲ್ಲ. ಈಗಾಗಲೇ ಹಲವು ಕಡೆ ಗಣಪತಿ ವಿರ್ಸಜನೆ ಮೆರವಣಿಗೆಗಳಲ್ಲಿ ಅಹಿತಕರ ಘಟನೆಗಳು ನಡೆದಿವೆ. ಯಾವುದೇ ಅನುಮತಿ ಇಲ್ಲದೆ ಮೆರವಣಿಗೆ ಆಯೋಜಿಸಿ ಶಾಂತಿ ಭಂಗ ಉಂಟಾದಲ್ಲಿ ನೀವೆ ಹೊಣೆ ಎಂದು ಐಜೂರು ಪೊಲೀಸರು ನೊಟೀಸ್ ನಲ್ಲಿ ತಿಳಿಸಿದ್ದಾರೆ.
11ಕೆಆರ್ ಎಂಎನ್ 6.ಜೆಪಿಜಿರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.