ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ

| Published : Dec 23 2023, 01:46 AM IST

ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮನೆ ಹಕ್ಕುಪತ್ರಕ್ಕಾಗಿ ಕಳೆದ 18 ದಿನಗಳಿಂದ ಅಹೋ ರಾತ್ರಿ ಧರಣಿ ನಡೆಸುತ್ತಿದ್ದರೂ ಕ್ಯಾರೇ ಎನ್ನದ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನಾ ನಿರತರು ಒಂದು ವಾರದೊಳಗೆ ನ್ಯಾಯ ಸಿಗದಿದ್ದರೇ ಅಮರಣ ಉಪವಾಸ ಕೈಕೊಳ್ಳುವ ಎಚ್ಚರಿಕೆಯ ಮನವಿಯನ್ನು ಎಸಿ ಮೂಲಕ ಡಿಸಿ ಅವರಿಗೆ ಗುರುವಾರ ನೀಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

40 ವರ್ಷಗಳಿಂದ ಪುರಸಭೆಯ ಜಾಗದಲ್ಲಿ ಮನೆ ಕರ ತುಂಬುತ್ತ ವಾಸಿಸುತ್ತಿದ್ದೇವೆ. ನಮ್ಮ ಕಾಲೋನಿ ಸ್ಲಂ ಬೋರ್ಡ್‌ ವ್ಯಾಪ್ತಿಯಲ್ಲಿ ಪಡೆಯಲು ಪುರಸಭೆ ಠರಾವಿಸಿ ಸ್ಲಂ ಬೋರ್ಡ್‌ಗೆ ಕಳಿಸಿದೆ. ಆದರೂ ಸ್ಲಂ ಬೋರ್ಡ್‌ನವರು ನಮಗೆ ಹಕ್ಕುಪತ್ರ ವಿತರಿಸುತ್ತಿಲ್ಲ ಎಂದು ದೂರಿದರು.

ಹಲವಾರು ಬಾರಿ ನಮ್ಮ ಪ್ರತಿಭಟಣೆಗೆ ಭರವಸೆ ನೀಡಿ ಪ್ರತಿಭಟಣೆ ಹತ್ತಿಕ್ಕಲಾಗುತ್ತಿದೆ. ಇಲ್ಲಿಯವರೆಗೆ ಸ್ಥಳೀಯ ಶಾಸಕರು ನಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟಣೆಯಲ್ಲಿ ವೃದ್ಧರು, ಮಹಿಳೆಯರು ಪಾಲ್ಗೊಂಡಿದ್ದು, ಯಾರಿಗಾದರೂ ಆರೋಗ್ಯದಲ್ಲಿ ಹೇರುಪೇರಾದರೇ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.