ಸಾರಾಂಶ
ವಕೀಲರ ಮೇಲೆ ದೂರು ದಾಖಲು ಮಾಡುವ ಸಂದರ್ಭದಲ್ಲಿ ಪೊಲೀಸರು ಸರಿಯಾಗಿ ತನಿಖೆ ಮಾಡದೇ ಪ್ರಕರಣ ದಾಖಲು ಮಾಡಿರುವುದು ನ್ಯಾಯಕ್ಕೆ ಅಪಮಾನ ಮಾಡಿದಂತಗಿದೆ.
ಕನ್ನಡಪ್ರಭ ವಾರ್ತೆ ಶಹಾಪುರ
ರಾಮನಗರದಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಘಟನೆ ಹಿನ್ನೆಲೆಯಲ್ಲಿ ಐಜೂರ ಪೊಲೀಸ್ ಠಾಣೆಯ ಪಿಎಸ್ ಐ ಸಯ್ಯದ್ ತನ್ವೀರ್ ಅವರು ವಕೀಲರ ಸಂಘದ 40 ವಕೀಲರ ವಿರುದ್ಧ ಎಫ್ ಐಆರ್ ದಾಖಲಿಸಿರುವುದನ್ನು ಖಂಡಿಸಿ ಹಾಗೂ ತಕ್ಷಣ ಪಿಎಸ್ ಐ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಶಹಾಪುರ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.ವಕೀಲರ ಮೇಲೆ ದೂರು ದಾಖಲು ಮಾಡುವ ಸಂದರ್ಭದಲ್ಲಿ ಪೊಲೀಸರು ಸರಿಯಾಗಿ ತನಿಖೆ ಮಾಡದೇ ಪ್ರಕರಣ ದಾಖಲು ಮಾಡಿರುವುದು ನ್ಯಾಯಕ್ಕೆ ಅಪಮಾನ ಮಾಡಿದಂತಗಿದೆ. ಕೊಡಲೇ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ತನಿಖೆ ಮಾಡಿಸಿ ಪ್ರಕರಣಕ್ಕೆ ಕಾರಣರಾದ ಪೊಲೀಸರ ಮೇಲೆ ಸಿಸ್ತು ಕ್ರಮ ಜರುಗಿಸಿ ಹಾಗೂ ವಕೀಲರ ಮೇಲೆ ದಾಖಲಿಸಿರು ಪ್ರಕರಣವನ್ನ ಕೊಡಲೆ ಹಿಂಪಡೆಯ ಬೇಕು ಎಂದು ವಕೀಲರು ಆಗ್ರಹಿಸಿದರು.
ಸಾರ್ವಜನಿಕ ಜೀವನದಲ್ಲಿ ಕೆಲಸ ನಿರ್ವಹಿಸುತ್ತಿರುವ ವಕೀಲರ ಮೇಲೆ ಅನವಶ್ಯಕವಾಗಿ ದೂರು ದಾಖಲಿಸಿ ಮಾನಸಿಕ ಹಿಂಸೆ ನೀಡುವುದು. ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಕೆಲಸ ನಿರ್ವಹಿಸುವ ವಕೀಲರ ಮೇಲೆ ಕೆಲ ದುಷ್ಟಶಕ್ತಿಗಳು ಬೆದರಿಕೆ ಹಾಕುವುದು ಅಲ್ಲದೆ ಹಲ್ಲೆ ನಡೆಸಲು ಮುಂದಾಗುತ್ತಿರುವುದು ನೋವುಂಟು ಮಾಡಿದೆ. ಸರ್ಕಾರ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ನಿರಂತರವಾಗಿ ವಕೀಲರ ಸಮೂಹ ಹೋರಾಟ ನಡೆಸುತ್ತಿದ್ದರು ಸಹ ಕಾಯ್ದೆ ಜಾರಿಗೆ ಮೀನವೇಶ ಎಣಿಸುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ವಕೀಲರು ಆಕ್ರೋಶ ವ್ಯಕ್ತಪಡಿಸಿದರು.ಗ್ಯಾನವಾಪಿ ಮಸೀದಿಯಲ್ಲಿ ಪೂಜೆಗೆ ನ್ಯಾಯಾಲಯ ಅವಕಾಶ ಕಲ್ಪಿಸಿದ್ದರ ಕುರಿತು ಫೇಸ್ ಬುಕ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ರಾಮನಗರದ ವಕೀಲ ಚಾಂದ ಪಾಷಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಪಿಎಸ್ ಐ ಸಯ್ಯದ್ ತನ್ವೀರ್ ಅವರು ವಕೀಲರ ಸಂಘದ 40 ಜನ ವಕೀಲರ ವಿರುದ್ಧ ದೂರು ದಾಖಲಿಸಿರುವುದು ಸರಿಯಲ್ಲ. ಇದು ರಾಜಕೀಯ ಪ್ರೇರಿತವಾದ ಕ್ರಮವಾಗಿದೆ ಎಂದು ವಕೀಲರು ಆರೋಪಿಸಿದರು.
ವಕೀಲರ ಸಂಘದ ಅಧ್ಯಕ್ಷ ಸಂತೋಷ ದೇಶಮುಖ, ಹಿರಿಯ ವಕೀಲರಾದ ಶ್ರೀನಿವಾಸರಾವ್ ಕುಲಕರ್ಣಿ, ಆರ್.ಎಂ. ಹೊನ್ನಾರಡ್ಡಿ, ಎಸ್. ಶೇಖರ, ಸಿ.ಟಿ. ದೇಸಾಯಿ, ಭೀಮರಾಜ, ಟಿ. ನಾಗೇಂದ್ರ, ಅಮರೇಶ ದೇಸಾಯಿ, ಮಲ್ಕಪ್ಪ ಪಾಟೀಲ್, ರಮೇಶ ಸೇಡಂಕರ್, ಮಲ್ಲಪ್ಪ ಪೂಜಾರಿ, ಚಂದ್ರು ಜಾದವ, ಗುರುರಾಜ ಪಡಶೆಟ್ಟಿ, ಮಲ್ಲಿಕಾರ್ಜುನ ಬುಕ್ಕಲ್, ಗುರುರಾಜ ದೇಶಪಾಂಡೆ, ಚಿದಾನಂದ ಹಿರೇಮಠ, ಲಕ್ಷ್ಮಿನಾರಾಯಣ, ಹೇಮರಡ್ಡಿ ಕೊಂಗಂಡಿ, ವಾಸುದೇವ ಕಟ್ಟಿಮನಿ, ವಿನೋದ ದೊರೆ, ಭೀಮರಾಯ ಮಡಿವಾಳಕರ್ ಇತರರಿದ್ದರು.