ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ ಸೇವೆ ಕಾಯಮಾತಿಗೆ ಆಗ್ರಹಿಸಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು ಪೌರಕಾರ್ಮಿಕರ ದಿನಾಚಾರಣೆ ಬಹಿಷ್ಕರಿಸಿ ಸೋಮವಾರ ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಸೇವೆ ಕಾಯಮಾತಿಗೆ ಆಗ್ರಹಿಸಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು ಪೌರಕಾರ್ಮಿಕರ ದಿನಾಚಾರಣೆ ಬಹಿಷ್ಕರಿಸಿ ಸೋಮವಾರ ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ಸರ್ಕಾರ ಕಾಯಂ ಮಾಡಬೇಕೆಂದು ಕಳೆದ ಒಂದುವರೆ ವರ್ಷಗಳ ಹಿಂದೆಯೇ ಆದೇಶ ಮಾಡಿದರೂ ಈವರೆಗೆ ಪಾಲಿಕೆಯಲ್ಲಿ ಕಾಯಂ ಮಾಡಿಲ್ಲ ಎಂದುಪ್ರತಿಭಟನಾಕಾರರು ಆರೋಪಿಸಿದರು.
ಕಳೆದ ಒಂದುವರೆ ವರ್ಷದಿಂದ ಕಾಯಂ ನೇಮಕಾತಿ ಮಾಡದಿರುವ ನೂರು ಜನ ಪೌರಕಾರ್ಮಿಕರಿಗೆ ಬೆಳಗಾವಿ ಪಾಲಿಕೆ ಕಾಯಂ ನೇಮಕಾತಿ ಆದೇಶ ಪ್ರತಿ ನೀಡಿಲ್ಲ ಹಾಗೂ ಆನಂದವಾಡಿಯ ರಮಾಬಾಯಿ ಅಂಬೇಡ್ಕರ್ ಹಾಲ್ ನಲ್ಲಿ ಅತ್ಯಾಧುನಿಕ ಜಿಮ್ ಮತ್ತು ಗ್ರಂಥಾಲಯಕ್ಕೆ 2023-24ನೇ ವರ್ಷದ ಕ್ರಿಯಾಯೋಜನೆಯಲ್ಲಿ ಅನುಮೋದನೆಗೊಂಡ ₹38 ಲಕ್ಷ ಮೀಸಲಿಟ್ಟ ಕಾಮಗಾರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.154 ಜನ ಖಾಯಂ ಪೌರಕಾರ್ಮಿಕರಿಗೆ ಕಳೆದ 7 ತಿಂಗಳಿನಿಂದ ಹಿಡಿದಿಟ್ಟುಕೊಂಡಿರುವ ಸಂಬಳ ತಕ್ಷಣ ನೀಡಬೇಕು. ಪೌರ ಕಾರ್ಮಿಕರ ಬೇಡಿಕೆ ಈಡೇರಿಸದಿದ್ದರೇ ಮುಂದೆ ಆಗುವ ಅನಾಹುತಕ್ಕೆ ಮಹಾನಗರ ಪಾಲಿಕೆಯೇ ಜವಾಬ್ದಾರಿಯಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ವಿಜಯ ನೀರಗಟ್ಟಿ, ಮುನಿಸ್ವಾಮಿ ಭಂಡಾರಿ, ದೀಪಕ ವಾಘೇಲಾ, ಮಂಜುಳಾ ಹಾದಿಮನಿ, ಯಲ್ಲವ್ವ ತಳವಾರ ಮತ್ತಿತರರು ಪಾಲ್ಗೊಂಡಿದ್ದರು.