ಬಿತ್ತನೆ ಬೀಜ ಬೆಲೆ ಏರಿಕೆ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

| Published : Jun 01 2024, 12:45 AM IST

ಬಿತ್ತನೆ ಬೀಜ ಬೆಲೆ ಏರಿಕೆ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಳಗಿಯಲ್ಲಿ ರೈತರು ಬೃಹತ್‌ ಹೋರಾಟ ನಡೆಸಿ ತಹಸೀಲ್ದಾರ್‌ ಘಮಾವತಿ ರಾಠೋಡಗೆ ಮನವಿ ಪತ್ರ ಸಲ್ಲಿಸಿದರು. ಬಿತ್ತನೆ ಬೀಜ ಬೆಲೆ ಶೇ.60ರಷ್ಟು ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಳಗಿ: ರಾಜ್ಯ ಸರ್ಕಾರ ರೈತರ ಬಿತ್ತನೆ ಬೀಜದ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಕಾರ್ಯಕರ್ತರು ಹಾಗೂ ರೈತರು ಬೃಹತ್ ಪ್ರತಿಭಟನೆ ಮಾಡಿದರು. ತಹಸೀಲ್ದಾರ್‌ ಘಮಾವತಿ ರಾಠೋಡಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆ ಉದ್ದೇಶಿಸಿ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ ಕಾಳಗಿ ಮಾತನಾಡಿ, ಕಳೆದ ವರ್ಷ ಭೀಕರ ಬರಗಾಲದಿಂದ ಬೆಳೆಗಳಿಲ್ಲದೆ ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದ ರೈತರಿಗೆ ಹವಾಮಾನ ಇಲಾಖೆಯ ಉತ್ತಮ ಮುಂಗಾರು ಮಳೆ ಎಂಬ ವರದಿಯಿಂದ ಉತ್ಸಾಹದಿಂದ ಮುಂಗಾರು ಬಿತ್ತನೆಗೆ ರೈತರು ಸಜ್ಜಾಗುತ್ತಿದ್ದರು. ಆದರೆ ಬಿತ್ತನೆ ಬೀಜ ಬೆಲೆ ಶೇ.60ರಷ್ಟು ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ರೈತರ‌ ಬಿತ್ತನೆ ಬೀಜ, ಸ್ಪ್ರಿಂಕ್ಲರ್‌ ಪೈಪ್‌, ರಸಗೊಬ್ಬರಗಳ ಬೆಲೆ ಏರಿಕೆ ಮಾಡುವ ಮೂಲಕ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಕೂಡಲೇ ಸರ್ಕಾರ ಬಿತ್ತನೆಯ‌ ಬೀಜಗಳ ಬೆಲೆ ಏರಿಕೆ ಮಾಡಿರುವುದನ್ನು ಕೈ ಬಿಟ್ಟು ರೈತರಿಗೆ ನೀಡುವ ಸಬ್ಸಿಡಿ ಹಣ ಶೇ.40 ಹೆಚ್ಚಳ ಮಾಡಿ ಅನುಕೂಲ ಮಾಡಿ ಕೊಡಬೇಕೆಂದು ಹೇಳಿದರು.

ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ತಾಲೂಕಾಧ್ಯಕ್ಷ ವೀರಣ್ಣ ಗಂಗಾಣಿ, ಬಿಜೆಪಿ ಮಂಡಲ ಉಪಾಧ್ಯಕ್ಷ ರಾಜಶೇಖರ ಗುಡದ, ಹಿಂದೂ ಜಾಗೃತಿ ಸೇನೆ ತಾಲೂಕಾಧ್ಯಕ್ಷ ಶಂಕರ ಚೌಕ, ಬಸವರಾಜ ತಳವಾರ, ಶರಣು ಸೀಗಿ, ಕಾಳಶೆಟ್ಟಿ ಪಡಶೆಟ್ಟಿ, ಬಲರಾಮ ವಲ್ಯಾಪುರೆ, ಸಾಗರ ಡಿ. ಸುಂದರ, ಗಣೇಶ ಚವ್ಹಾಣ, ವೀರೇಶ ಭೆಡಸೂರ, ವಿಜಯಕುಮಾರ್ ತುಪ್ಪದ, ನಾಗರಾಜ ಕೇಶ್ವರ, ಮೋಹನ ಚಿನ್ನಾ, ಜಗನ್ನಾಥ ತೇಲಿ, ಶರಣಪ್ಪ ಬೆಲೂರ ಹಾಗೂ ರೈತರು ಇದ್ದರು.