ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆ ಪರಿಷ್ಕರಿಸಿ ಪ್ರಕಟಿಸಿದ ಕನಿಷ್ಠ ವೇತನ ಜಾರಿಗೊಳಿಸಬೇಕು. ಕನಿಷ್ಠ ವೇತನ ಮರುಪರಿಶೀಲನೆಗಾಗಿ ರಚಿಸಿದ ಸಚಿವ ಸಂಪುಟ ಉಪಸಮಿತಿ ರದ್ದಗೊಳಿಸಬೇಕೆಂದು ಒತ್ತಾಯಿಸಿ ಹಾಸ್ಟೆಲ್ ಹೊರಗುತ್ತಿಗೆ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಧಾರವಾಡ:

ಕಳೆದ ಹತ್ತು ವರ್ಷಗಳಿಂದ ಕನಿಷ್ಠ ವೇತನ ಪರಿಷ್ಕರಣೆ ಆಗಿರಲಿಲ್ಲ, ಬೆಲೆ ಏರಿಕೆಗಳ ಈ ದಿನಮಾನದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾದ ಈ ಹೊರಗುತ್ತಗೆ ನೌಕರರಿಗೆ ಕನಿಷ್ಠ ವೇತನ ಹೆಚ್ಚಳದಿಂದ ಅಲ್ಪಸ್ವಲ್ಪ ಅನುಕೂಲವಾಗಿತ್ತು. ಆದರೆ ಈ ಕನಿಷ್ಠ ವೇತನ ಸರ್ಕಾರ ತಡೆ ಹಿಡಿದಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮರುಪರಶೀಲನೆಗಾಗಿ ಸಚಿವ ಸಂಪುಟ ಉಪಸಮಿತಿ ರಚಿಸುವುದರೊಂದಿಗೆ ಸರ್ಕಾರಿ ನೌಕರರಿಗೆ ಮಹಾದ್ರೋಹ ಬಗೆದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಕಳೆದ 15-20 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ಕಾಯಂ ಮಾಡಬೇಕು, ಕೆಲಸದ ಅವಧಿ ಹಾಗೂ ವಾರದ ರಜೆ ನಿಗದಿ ಮಾಡಬೇಕು, ಸೇವಾ ಭದ್ರತೆ ನೀಡಬೇಕು, ಹೊರಗುತ್ತಿಗೆ ನೌಕರರ ಶೋಷಣೆ ತಡೆಗಟ್ಟಬೇಕೆಂಬ ಮುಂತಾದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ಜಿಲ್ಲಾಧ್ಯಕ್ಷ ಬಿ.ಐ. ಈಳಿಗೇರ, ಮುಖಂಡರಾದ ಹನಮಂತ ಮ್ಯಾಗೇರಿ, ಪ್ರದೀಪ ದಳವಾಯಿ, ಬಸಮ್ಮ ಕಿಳ್ಳಿಕೇತರ, ರೂಪಾ ಗೊಂದಳೆ, ಬಸವರಾಜ ಚವ್ಹಾಣ, ಅಶೋಕ ಹಾವೇರಿ, ಶಿವನಗೌಡ, ನೀಲಪ್ಪ ಇದ್ದರು.