ಸಾರಾಂಶ
ರೈತರ ಜಮೀನು ಹಾಗೂ ಮಠ-ಮಂದಿರ ಜಾಗ ಕಬಳಿಸಲು ಯತ್ನಿಸಿದ ವಕ್ಫ್ ಬೋರ್ಡ್, ಸಚಿವ ಜಮ್ಮೀರ್ ಅಹ್ಮದ್ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರು ಕೂಗಿದರು.
ಧಾರವಾಡ:
ರೈತರ, ಮಠ-ಮಂದಿರಗಳ ಹಾಗೂ ಸಾರ್ವಜನಿಕರ ಜಮೀನು ಕಬಳಿಸಲು ಹುನ್ನಾರ್ ನಡೆಸಿದ ವಕ್ಫ್ ಬೋರ್ಡ್ ರದ್ಧತಿಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ನೇತೃತ್ವದಲ್ಲಿ ನಗರದ ಆಲೂರು ವೆಂಕಟರಾವ್ ವೃತ್ತದಲ್ಲಿ ಮಂಗಳವಾರ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಯಿತು.ರಾಮಕೃಷ್ಣ ವಿವೇಕಾನಂದ ಆಶ್ರಮಯದ ವಿಜಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಗರದ ಕಡಪಾ ಮೈದಾನದಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ಕೈಗೊಂಡ ಕಾರ್ಯಕರ್ತರು, ಜ್ಯುಬ್ಲಿ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ರೈತರ ಜಮೀನು ಹಾಗೂ ಮಠ-ಮಂದಿರ ಜಾಗ ಕಬಳಿಸಲು ಯತ್ನಿಸಿದ ವಕ್ಫ್ ಬೋರ್ಡ್, ಸಚಿವ ಜಮ್ಮೀರ್ ಅಹ್ಮದ್ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಸೇರಿದಂತೆ ವಿವಿಧ ಘೋಷಣೆಗಳು ಕೂಗಿ, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಡಾ. ಎಸ್.ಆರ್. ರಾಮನಗೌಡರ, ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಮಕ್ಕಳಗೇರಿ, ಶಿವಾನಂದ ಸತ್ತಿಗೇರಿ ಹಾಗೂ ಬಜರಂಗದಳದ ಸದಸ್ಯರಿದ್ದರು.