ಶಿಗ್ಗಾಂವಿ ತಾಲೂಕಿನ ಮಡ್ಲಿ ಕ್ರಾಸ್‌ನಲ್ಲಿರುವ (ರಾಷ್ಟ್ರೀಯ ಹೆದ್ದಾರಿ-೪ )ಅಂಬೂಜಾ ಎಕ್ಸಪೋರ್ಟಗೆ ಗೋವಿನಜೋಳ ಹೇರಿದ ಲಾರಿಗಳ ಚಾಲಕರಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಧೂಳು ತುಂಬಿದ ವಾತಾವರಣದಲ್ಲಿ ಇರಬೇಕು ಎಂದು ಅಂಬೂಜಾಗೆ ಹೋಗುವ ರಸ್ತೆಗೆ ಅಡ್ಡಗಟ್ಟಿ ಚಾಲಕರು ಪ್ರತಿಭಟನೆಯನ್ನು ಮಾಡಿದ ಘಟನೆ ಮಂಗಳವಾರ ಜರುಗಿದೆ.
ಶಿಗ್ಗಾಂವಿ:ತಾಲೂಕಿನ ಮಡ್ಲಿ ಕ್ರಾಸ್‌ನಲ್ಲಿರುವ (ರಾಷ್ಟ್ರೀಯ ಹೆದ್ದಾರಿ-೪ )ಅಂಬೂಜಾ ಎಕ್ಸಪೋರ್ಟಗೆ ಗೋವಿನಜೋಳ ಹೇರಿದ ಲಾರಿಗಳ ಚಾಲಕರಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಧೂಳು ತುಂಬಿದ ವಾತಾವರಣದಲ್ಲಿ ಇರಬೇಕು ಎಂದು ಅಂಬೂಜಾಗೆ ಹೋಗುವ ರಸ್ತೆಗೆ ಅಡ್ಡಗಟ್ಟಿ ಚಾಲಕರು ಪ್ರತಿಭಟನೆಯನ್ನು ಮಾಡಿದ ಘಟನೆ ಮಂಗಳವಾರ ಜರುಗಿದೆ.ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದಾರೆ ಆದರೆ ಸಾಕಷ್ಟು ಪ್ರಮಾಣದಲ್ಲಿ ತಗ್ಗು ಗುಂಡಿಯು ಬಿದ್ದಿವೆ. ಎಲ್ಲೆಂದರಲ್ಲಿ ಲಾರಿಗಳನ್ನು ನಿಲ್ಲಿಸಬೇಕಾಗಿದೆ. ಎಷ್ಟೋ ಲಾರಿಗಳು ತಗ್ಗಿಗೆ ಬಿದ್ದು ಟೈರ್‌ಗಳು ಒಡೆದು ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿವೆ, ಚಾಲಕರು ಸುಮಾರು ೨-೩ ದಿನಗಳ ಕಾಲ ಲಾರಿಗಳಲ್ಲಿಯೇ ಕಾಲ ಕಳೆಯಬೇಕು ಸಾಕಷ್ಟು ಪ್ರಮಾಣದಲ್ಲಿ ಧೂಳಿನಿಂದ ಕೂಡಿದ್ದು ಇದರಿಂದ ಆರೋಗ್ಯವು ಹದಗೆಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇಲ್ಲಿ ಎಲ್ಲಿಯೂ ಕುಡಿಯುವ ನೀರಿನ ವ್ಯವಸ್ಥೆಯಾಗಲಿ, ಸಿಸಿ ಕ್ಯಾಮೆರಾ, ಬೆಳಕಿನ ವ್ಯವಸ್ಥೆಯಾಗಲಿ, ಕಾವಲುಗಾರರು ಇಲ್ಲ. ಸ್ನಾನ ಗೃಹ, ಶೌಚಾಲಯ ವ್ಯವಸ್ಥೆ ಇಲ್ಲ. ಸಾಕಷ್ಟು ದಿನಗಳಿಂದ ಅಂಬೂಜಾ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ಯಾರೆ ಅನ್ನುತ್ತಿಲ್ಲ. ಆದ್ದರಿಂದ ತಕ್ಷಣ ಮೂಲ ಸೌಲಭ್ಯ ಒದಗಿಸಬೇಕು ಆಗ್ರಹಿಸಿ ಪ್ರತಿಭಟನೆಯನ್ನು ಮಾಡುತ್ತಿರುವುದಾಗಿ ಲಾರಿ ಚಾಲಕರ ಮುಖಂಡ ಭರತರಾಜ ಅಕ್ಕಿ ಹೇಳಿದರು.ಈ ಸಂದರ್ಭದಲ್ಲಿ ಲಾರಿಗಳ ಚಾಲಕರ ಮುಖಂಡ ಭರತರಾಜ, ನವಾಬಸಾಬ, ಮಂಜುನಾಥ, ಮಾರುತಿ, ಪ್ರವೀಣ, ಅನೀಲ ಸೇರಿದಂತೆ ಹಲವರು ಇದ್ದರು.ತಕ್ಷಣವಾಗಿ ಅಂಬೂಜಾ ಎಕ್ಸಪೋರ್ಟನ ವಿ. ರಾಜೇಂದ್ರ ಹೊಸಮಠ ಲಾರಿ ಚಾಲಕರೋಂದಿಗೆ ಮಾತನಾಡಿ, ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ನನ್ನ ವ್ಯಾಪ್ತಿಗೆ ಬರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಮಾಡುವುದಾಗಿ ಅಲ್ಲದೆ ಹೆಚ್ಚಿನ ಬೋರ್ಡಗೆ ತಿಳಿಸಿ ಹೆಚ್ಚಿನ ವ್ಯವಸ್ಥೆಯನ್ನು ಕಲ್ಪಿಸುವ ಭರವಸೆಯನ್ನು ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆದು ರಸ್ತೆಯ ಮೇಲಿರುವ ಲಾರಿಯನ್ನು ತೆರವುಗೊಳಿಸಿ ಸುಗಮಗೊಳಿಸಿದರು. ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.