ಸಾರಾಂಶ
ಸಾವಿರಾರು ಲೀಟರ್ ಹಾಲು ಹಾಕುತ್ತಿರುವ ರೈತರಿಗೆ ಷೇರು ನೀಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಸಂಘದ ಕಾರ್ಯದರ್ಶಿ ಮನೆ ಮುಂದೆ ರೈತರು ಮೈಮೇಲೆ ಹಾಲು ಸುರಿದುಕೊಂಡು ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಗುಬ್ಬಿ
ಸಾವಿರಾರು ಲೀಟರ್ ಹಾಲು ಹಾಕುತ್ತಿರುವ ರೈತರಿಗೆ ಷೇರು ನೀಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಸಂಘದ ಕಾರ್ಯದರ್ಶಿ ಮನೆ ಮುಂದೆ ರೈತರು ಮೈಮೇಲೆ ಹಾಲು ಸುರಿದುಕೊಂಡು ಪ್ರತಿಭಟನೆ ಮಾಡಿದ್ದಾರೆ. ತಾಲೂಕಿನ ಸಿಎಸ್ ಪುರ ಹೋಬಳಿಯ ನಾರನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಹಾಕುತ್ತಿರುವವರಿಗೆ ಷೇರು ನೀಡುತ್ತಿಲ್ಲ ಎನ್ನಲಾಗಿದೆ. ಷೇರು ಕೊಡಿ ಎಂದು ಕೇಳಿದಾಗಲೆಲ್ಲ ಸಬೂಬು ಹೇಳಲಾಗುತ್ತಿದ್ದು, ಡೈರಿ ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ಇದರಿಂದ ಬೇಸತ್ತ ಹಾಲು ಉತ್ಪಾದಕರು ಕಾರ್ಯದರ್ಶಿ ಧನಂಜಯ, ಅಧ್ಯಕ್ಷ ಪುಟ್ಟವೆಂಕಟಯ್ಯ ಹಾಗೂ ಆಡಳಿತ ಮಂಡಳಿ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿ ಅವರ ಮನೆಗಳ ಬಾಗಿಲಿಗೆ ಹಾಲು ಸುರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.;Resize=(128,128))