ಡಿಸಿಸಿ ಬ್ಯಾಂಕ್‌ ನೋಟಿಸ್‌ ಹರಿದು ಪ್ರತಿಭಟನೆ

| Published : Jan 25 2025, 01:03 AM IST

ಸಾರಾಂಶ

ರೈತರ ಕೈಗೆ ಚಾಟಿ ಮಹಿಳೆಯರ ಕೈಗೆ ಮೊಂಡು ಪೊರಕೆ ಬರುವ ಮೊದಲು ಬ್ಯಾಂಕ್ ಅಧಿಕಾರಿಗಳು ನೀಡಿರುವ ನೋಟಿಸ್ ವಾಪಸ್ ಪಡೆದು ಬಲವಂತದ ಸಾಲ ವಸೂಲಾತಿ ನಿಲ್ಲಿಸದೆ ಹೋದರೆ ಹಳ್ಳಿ ಹಳ್ಳಿಯಲ್ಲೂ ಮಹಿಳೇಯರೇ ಕಾನೂನು ಕೈಗೆತ್ತಿಕೊಂಡು ಅಧಿಕಾರಿಗಳನ್ನು ಕಂಬಗಳಿಗೆ ಕಟ್ಟಿ ಹಾಕುವ ಕಾಲ ದೂರವಿಲ್ಲ.

ಕನ್ನಡಪ್ರಭ ವಾರ್ತೆ ಕೋಲಾರಡಿ.ಸಿ.ಸಿ ಬ್ಯಾಂಕ್‌ನಿಂದ ರೈತರು ಮತ್ತು ಸ್ತ್ರೀ ಶಕ್ತಿ ಸಂಘಗಳ ಸಾಲ ವಸೂಲಾತಿಗಾಗಿ ನೀಡುತ್ತಿರುವ ನೋಟಿಸ್ ಆದೇಶ ವಾಪಸ್ ಪಡೆದು ಸಾಲ ಮರು ಪಾವತಿ ಮಾಡಲು ಸಮಯವಕಾಶ ನೀಡಿ ಬಡವರ ಸ್ವಾಭಿಮಾನ ಉಳಿಸುವಂತೆ ರೈತ ಸಂಘದಿಂದ ಬ್ಯಾಂಕ್ ಮುಂದೆ ಹರಿದು ಬಿಸಾಡುವ ಮುಖಾಂತರ ಹೋರಾಟ ಮಾಡಿ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿಸಲ್ಲಿಸಿದರು.ರೈತರ ಕೈಗೆ ಚಾಟಿ ಮಹಿಳೆಯರ ಕೈಗೆ ಮೊಂಡು ಪೊರಕೆ ಬರುವ ಮೊದಲು ಬ್ಯಾಂಕ್ ಅಧಿಕಾರಿಗಳು ನೀಡಿರುವ ನೋಟಿಸ್ ವಾಪಸ್ ಪಡೆದು ಬಲವಂತದ ಸಾಲ ವಸೂಲಾತಿ ನಿಲ್ಲಿಸದೆ ಹೋದರೆ ಹಳ್ಳಿ ಹಳ್ಳಿಯಲ್ಲೂ ಮಹಿಳೇಯರೇ ಕಾನೂನು ಕೈಗೆತ್ತಿಕೊಂಡು ಅಧಿಕಾರಿಗಳನ್ನು ಕಂಬಗಳಿಗೆ ಕಟ್ಟಿ ಹಾಕುವ ಕಾಲ ದೂರವಿಲ್ಲ ಎಂದು ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಎಚ್ಚರಿಸಿದರು. ಬಡವರಿಗೆ ಅವಮಾನ

ಡಿ.ಸಿ.ಸಿ ಬ್ಯಾಂಕ್‌ನಿಂದ ಪಡೆದಿರುವ ಸಾಲವನ್ನು ನಿಯತ್ತಾಗಿ ಮರುಪಾವತಿ ಮಾಡುತ್ತೇವೆ. ಆದರೆ ಸಮಯವಕಾಶ ಬೇಕು ಬೆಳೆ ಇಲ್ಲ, ದುಡಿಯುವ ಕೈಗೆ ಕೆಲಸವಿಲ್ಲದ ಹೈನೋದ್ಯಮದಲ್ಲಿ ಲಾಭವಿಲ್ಲದೆ ನಷ್ಟದಲ್ಲಿದ್ದಾರೆ. ಡಿ.ಸಿ.ಸಿ ಬ್ಯಾಂಕ್ ಆಡಳಿತ ಮಂಡಳಿ ನೋಟಿಸ್ ನೀಡುವ ಮುಖಾಂತರ ಅಸಲಿಗೆ ಬಡ್ಡಿ, ಬಡ್ಡಿಗೆ ಚಕ್ರಬಡ್ಡಿ ಹಾಕಿ ಬಡವರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ವಾರದೊಳಗೆ ಹಣ ನೀಡದೆ ಇದ್ದರೆ ನಿಮ್ಮ ಆಸ್ತಿ ಹರಾಜು ಆಗುತ್ತದೆ ಎಂದು ಹೇಳುವ ಮೂಲಕ ಅಧಿಕಾರಿಗಳೇ ನೇರವಾಗಿ ಬಡವರ ಎದೆ ಮೇಲೆ ಕಾಲಿಟ್ಟಿದ್ದಾರೆ ಎಂದು ಆಕ್ರೇಶ ವ್ಯಕ್ತಪಡಿಸಿದರು.

ನೊಂದ ರೈತ ಮಹಿಳೆ ಶೈಲಜ ಮಾತನಾಡಿ ಕೋಟಿ ಕೋಟಿ ಸಾಲ ಪಡೆದಿರುವ ಜನಪ್ರತಿನಿಧಿಗಳಿಗೆ ನೋಟಿಸ್ ನೀಡಲು ತಾಕತ್ತು ಇಲ್ಲದ ಅಧಿಕಾರಿಗಳೇ ಬಡವರು ಕೂಲಿ ಮಾಡುವವರ ಮೇಲೆ ತಮ್ಮ ಪ್ರತಾಪ ಏಕೆ ಎಂದು ಪ್ರಶ್ನೆ ಮಾಡಿದರು.

ಹೋರಾಟದಲ್ಲಿ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಈಕಂಬಳ್ಳಿ ಮಂಜುನಾಥ್, ಶಿವಾರೆಡ್ಡಿ, ತಿಮ್ಮಣ್ಣ, ಸುಪ್ರೀಂ ಚಲ, ಹೆಬ್ಬಣಿ ಆನಂದ್‌ರೆಡ್ಡಿ, ಮರಗಲ್ ಶ್ರೀನಿವಾಸ್, ಬಂಗವಾದಿ ನಾಗರಾಜ್‌ಗೌಡ, ತರ್‍ನಹಳ್ಳಿ ಆಂಜಿನಪ್ಪ, ಯಲ್ಲಪ್ಪ, ಹರೀಶ್, ಅಪ್ಪೋಜಿರಾವ್, ಲಕ್ಷಣ್, ರತ್ನಮ್ಮ, ಶಶಿಕಲಾ, ರಾಧ, ಸುಗುಣ, ಗೌರಮ್ಮ, ಮುನಿಯಮ್ಮ, ಚೌಡಮ್ಮ ಇದ್ದರು.