ನೇಹಾ ಕೊಲೆ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

| Published : Apr 21 2024, 02:20 AM IST

ನೇಹಾ ಕೊಲೆ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರತಿಬಾವಂತೆ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಕಾಲೇಜಿನ ಕ್ಯಾಂಪಸ್‌ನಲ್ಲಿಯೇ ಅತ್ಯಂತ ಭೀಕರವಾಗಿ ಅಮಾನುಷವಾಗಿ ಕೊಲೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ.

ಕನ್ನಡಪ್ರಭ ವಾರ್ತೆ ಚಿಂಚೋಳಿಹುಬ್ಬಳ್ಳಿ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಹತ್ಯೆಯನ್ನು ಖಂಡಿಸಿ ಪಟ್ಟಣದ ತಹಸೀಲ್ದಾರ್‌ ಕಚೇರಿ ಮುಂದೆ ವಿವಿಧ ಸಂಘಟನೆಗಳ ಭಾರಿ ಪ್ರತಿಭಟನೆ ಕೊಲೆ ಮಾಡಿದ ಆರೋಪಿಯನ್ನು ಎನ್ಕೌಂಟರ್‌ ಇಲ್ಲವೇ ಗಲ್ಲುಶಿಕ್ಷೆಗೆ ಗುರಿಪಡಿಸಿ ಮೃತಳ ಆತ್ಮಕ್ಕೆ ಶಾಂತಿ ಮತ್ತು ನ್ಯಾಯಕೊಡಿಸಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸಿದರು.

ಹುಬ್ಬಳ್ಳಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರತಿಬಾವಂತೆ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಕಾಲೇಜಿನ ಕ್ಯಾಂಪಸ್‌ನಲ್ಲಿಯೇ ಅತ್ಯಂತ ಭೀಕರವಾಗಿ ಅಮಾನುಷವಾಗಿ ಕೊಲೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಬಡವರ ಮಕ್ಕಳು ಕಾಲೇಜಿಗೆ ವಿದ್ಯಾಭ್ಯಾಸ ಮಾಡುವುದಕ್ಕಾಗಿ ನಗರ ಪ್ರದೇಶಗಳಿಗೆ ಬರುತ್ತಾರೆ. ಆದರೆ ಕೆಲವು ಕಿಡಿಗೇಡಿಗಳು,ಪಾಗಲ ಪ್ರೇಮಿಗಳು ಹಿಂದು ಹೆಣ್ಣು ಮಕ್ಕಳ ಕಿರುಕುಳ ನೀಡುತ್ತಿರುವುದು ನಡೆಯುತ್ತಿದೆ ಇದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಬಂದಿತ ಆರೋಪಿಯನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಇಲ್ಲವೇ ಎನ ಕೌಂಟರ ನಡೆಸಬೇಕೆಂದು ಸಂಘಟನೆಗಳ ಮುಖಂಡರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆ ಮುಖಂಡರಾದ ಚಿತ್ರಶೇಖರ ಪಾಟೀಲ, ವಿಜಯಕುಮಾರ ಚೇಂಗಟಿ, ಗೋಪಾಲರಾವ ಕಟಿಮನಿ, ಸಂತೋಷ ಗಡಂತಿ, ಉಮಾ ಪಾಟೀಲ, ಮಲ್ಲು ಉಡುಪಿ, ಅನೀಲಕುಮಾರ ಜಮಾದಾರ, ಅಲ್ಲಮಪ್ರಭು ಹುಲಿ, ಅಮರನಾಥ ಲೊಡನೋರ, ಗುಂಡಪ್ಪ ಮಾಳಗಿ, ಗಿರಿರಾಜ ನಾಟಿಕಾರ, ಮಲ್ಲು ಕೊಡಂಬಲ, ಹರ್ಷವರ್ಧನ ಮ್ಯಾಕಲ, ರೇವಣಸಿದ್ದ ಮೋಘಾ, ರಾಮರೆಡ್ಡಿ ಪಾಟೀಲ ಚಿಮ್ಮನಚೋಡ ಮಾರುತಿ ಗಂಜಗಿರಿ ಇನ್ನಿತರಿದ್ದರು.