ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಹುಬ್ಬಳ್ಳಿಯ ಖಾಸಗಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಶನಿವಾರ ಬೆಳಗಾವಿ ಜಿಲ್ಲಾ ಜಂಗಮ ಸಂಘಟನೆ ಹಾಗೂ ಶ್ರೀರಾಮ ಸೇನಾ ಹಿಂದೂಸ್ತಾನ್ ಸಂಘಟನೆಗಳು ಚನ್ನಮ್ಮ ವೃತ್ತದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನೇಹಾಳ ಕೊಲೆ ಪ್ರಕರಣದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಇತ್ತೀಚಿನ ದಿನಗಳಲ್ಲಿ ಹಿಂದು ಧರ್ಮದ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಇಂಥ ಕ್ರೂರಿಗಳಿಗೆ ಶಿಕ್ಷೆ ಕೊಡದಿದ್ದರೆ ಮುಂದೆ ನಮ್ಮ, ನಿಮ್ಮ ಮನೆಯಲ್ಲಿಯೂ ಇಂಥ ಘಟನೆ ನಡೆಯಬಹುದು. ನೇಹಾ ಹಿರೇಮಠ ಕೊಲೆಗೈದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು..
ಮಹಾಂತೇಶ ವಕ್ಕುಂದ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ರಾಜ್ಯದಲ್ಲಿ ಕೋಮು ಗಲಭೆ ಹೆಚ್ಚಿವೆ. ನೇಹಾ ಹಿರೇಮಠಗೆ 9 ಬಾರಿ ಚೂರಿ ಇರಿದು ಹತ್ಯಗೈದಿದ್ದಾನೆ. ಇದರಿಂದ ಅವನ ಮನಸ್ಥಿತಿ ಹೇಗಿರಬರಬಹುದು ಎಂದು ಯೋಚಿಸಿ. ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಫಯಾಜ್ ನನ್ನು ರಕ್ಷಣೆ ಮಾಡದೆ ಎನ್ ಕೌಂಟರ್ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.ಶ್ರೀರಾಮ್ ಸೇನಾ ಹಿಂದೂಸ್ತಾನ್ ಸಂಘಟನೆಯ ಮುಖಂಡ ರಮಾಕಾಂತ ಕುಂಡುಸ್ಕರ್ ಮಾತನಾಡಿ, ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆಯ ಕುರಿತು ರಾಜ್ಯದ ಗೃಹ ಸಚಿವರು ಉಢಾಪೆ ಉತ್ತರ ನೀಡಿದ್ದಾರೆ ರಾಜ್ಯದ ಮಂತ್ರಿ ಮಕ್ಕಳಿಗೆ ಹೀಗೆ ಆಗಿದ್ದೇರೆ ಅರ್ಥವಾಗುತ್ತೀತ್ತು. ಆರೋಪಿಯನ್ನು ರಕ್ಷಣೆ ಮಾಡದೇ ನೇಹಾ ಕೊಂದವನನ್ನು ಎನ್ ಕೌಂಟರ್ ಮಾಡಬೇಕೆಂದು ಆಗ್ರಹಿಸಿದರು.
ಉಮಾ ಕರ್ಜಗಿ ಮಾತನಾಡಿ, ನಮ್ಮ ಮನೆ ಹೆಣ್ಣು ಮಗಳು ನೇಹಾಗೆ ನ್ಯಾಯ ಒದಗಿಸಿ ಕೊಡದೆ ಇದ್ದರೆ ಉಗ್ರ ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ನಾರಿ ಶಕ್ತಿ ಏನೂ ಅನ್ನುವುದು ತಿಳಿಸಿ ಕೂಡುತ್ತೇವೆ ಆಕ್ರೋಶ ವ್ಯಕ್ತಪಡಿಸಿದ್ದರು .ಪ್ರತಿಭಟನೆಯಲ್ಲಿ ಮಹಾಂತೇಶ ರಣಗಟ್ಟಿಮಠ, ವಿರೂಪಾಕ್ಷಿ ನೀರಲಗಿಮಠ, ಶಂಕ್ರಯ್ಯ ಹಿರೇಮಠ, ದಿಗ್ವಿಜಯ ಸಿದ್ನಾಳ, ಮಹಾಂತೇಶ, ಮುರುಗೇಶ ಹಿರೇಮಠ, ರೋಹಿತ್ ಉಮನಾಬಾದಿಮಠ, ಅರುಣ ಹೊಸಮಠ, ಶಂಕರ ಹಿರೇಮಠ, ಚಂದ್ರಶೇಖರ ಸಾಲಿಮಠ, ಮಹಾಂತೇಶ ಕವಟಗಿಮಠ ಈರಯ್ಯ ಖೋತ, ರವಿ ಯರಗಟ್ಟಿಮಠ, ವಿಜಯಶಾಸ್ತ್ರಿ ಹಿರೇಮಠ, ಅಶ್ವಿನಿ ಕುದರಿಮಠ, ಮಲ್ಲಿಕಾರ್ಜುನ, ಲಲಿತಾ ಹಿರೇಮಠ, ನೂರ್ಯಕಾಂತ ಗಣಾಚಾರಿ, ಕೃಷ್ಣಭಟ್, ಡಾ.ಬಸವರಾಜ ಬಾಗೋಜಿ, ಪ್ರಕಾಶ ಖೋತ, ಪ್ರಸನ್ನ ಪುರೋಹಿತ್, ಎಂ.ಜಿ. ಹಿರೇಮಠ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.