ಸಾರಾಂಶ
ಮಡಿಕೇರಿ ಕೊಡವ ಸಮಾಜದಿಂದ ಭಾನುವಾರ ಪ್ರತಿಭಟನೆ ನಡೆಯಿತು. ಈ ಸಂದರ್ಭ ಪ್ರಕರಣ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕಟ್ಟೆಮಾಡು ಮಹಾ ಮೃತ್ಯುಂಜಯ ದೇವಾಲಯದಲ್ಲಿ ಪ್ರಥಮ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಕೊಡವರ ಉಡುಪು ಧರಿಸಿ ಪ್ರವೇಶ ಮಾಡುವ ಸಂದರ್ಭ ನಿಷೇಧ ಮಾಡಿರುವುದನ್ನು ಖಂಡಿಸಿ ಮಡಿಕೇರಿ ಕೊಡವ ಸಮಾಜದಿಂದ ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ಕೊಡವ ಜನಾಂಗದವರು ಜಿಲ್ಲಾದ್ಯಂತ ಪ್ರಾಚೀನ ಕಾಲದಿಂದಲೂ ಕೊಡವ ಸಾಂಪ್ರದಾಯಿಕ ಉಡುಗೆಯೊಂದಿಗೆ ಭಕ್ತಿ ಪೂರ್ವಕ ವಾಗಿ ತೆರಳುವುದು ಧಾರ್ಮಿಕ ಆಚರಣೆಯ ನಂಬಿಕೆಯೊಂದಿಗೆ ಸಾಂಸ್ಕೃತಿಕ ಪ್ರದರ್ಶನ ನೀಡುತಿರುವುದು ಇಡೀ ಜಿಲ್ಲೆಗೆ ತಿಳಿದಿರುವ ವಿಷಯ. ಆದರೆ ಅರೆಭಾಷಿಕ ಗೌಡ ಜನಾಂಗದ ವರು ದ್ವೇಷ ಭಾವನೆಯಿಂದ ಗ್ರಾಮದ ಕೆಲವು ಕೊಡವ ಜನಾಂಗದವರು ತಮ್ಮ ಸಾಂಪ್ರದಾಯಿಕ ಉಡುಗೆಯೊಂದಿಗೆ ತೆರಳಿದ ಸಂದರ್ಭದ ದೇವಾಲಯ ಪ್ರವೇಶಿಸದಂತೆ ಅಡ್ಡಿಪಡಿಸಿರುವುದು ತೀವ್ರ ಖಂಡನೀಯ ಎಂದು ಕೊಡವ ಸಮಾಜದ ಪ್ರಮುಖರು ಹೇಳಿದರು.
ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತ ಬೊಳ್ಳಪ್ಪ, ಮಾಜಿ ಜಂಟಿ ಕಾರ್ಯದರ್ಶಿ ಶಾಂತಿಯಂಡ ಸನ್ನಿ ಪೂವಯ್ಯ ಅವರು ಮಾತನಾಡಿ ಪ್ರಕಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ನಡೆಯುವ ಎಲ್ಲ ಪ್ರತಿಭಟನೆಗಳಿಗೆ ಬೆಂಬಲ ನೀಡಲು ತೀರ್ಮಾನಿಸಲಾಯಿತು.