ಶಾಸಕ ಯತ್ನಾಳ ಉಚ್ಚಾಟನೆ ಖಂಡಿಸಿ ಪ್ರತಿಭಟನೆ

| Published : Apr 02 2025, 01:06 AM IST

ಸಾರಾಂಶ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿದಿಂದ ಉಚ್ಚಾಸಿದ್ದನ್ನು ಖಂಡಿಸಿ ಪಟ್ಟಣದ ಇಲ್ಲಿನ ಕಾಲಕಾಲೇಶ್ವರ ವೃತ್ತದಲ್ಲಿ ರೋಣ-ಗಜೇಂದ್ರಗಡ ಪಂಚಮಸಾಲಿ ಸಮಾಜದ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.

ಗಜೇಂದ್ರಗಡ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿದಿಂದ ಉಚ್ಚಾಸಿದ್ದನ್ನು ಖಂಡಿಸಿ ಪಟ್ಟಣದ ಇಲ್ಲಿನ ಕಾಲಕಾಲೇಶ್ವರ ವೃತ್ತದಲ್ಲಿ ರೋಣ-ಗಜೇಂದ್ರಗಡ ಪಂಚಮಸಾಲಿ ಸಮಾಜದ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ ಮಾತನಾಡಿ, ಮುಖಂಡರಾದ ಈಶ್ವರಪ್ಪ, ವಿಶ್ವನಾಥ ಹಾಗೂ ಈಗಿನ ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನು ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಿದರು. ಈ ತಂದೆ, ಮಗನಿಗೆ ತಮ್ಮ ಬೇಳೆಯಷ್ಟೇ ಬೆಳೆಯಬೇಕು. ಬೇರೆಯವರು ಯಾರು ಬೆಳೆಯಬಾರದು ಎನ್ನುವ ಮನಸ್ಥಿತಿಯ ಯಡಿಯೂರಪ್ಪ ಹಾಗೂ ಅವರ ಮಗನಿಗೆ ಮುಂದಿನ ದಿನಗಳಲ್ಲಿ ನಮ್ಮ ಸಮಾಜ ತಕ್ಕಪಾಠ ಕಲಿಸುತ್ತದೆ ಎಂದು ಎಚ್ಚರಿಸಿದರು.

ಚುನಾವಣೆ ವೇಳೆ ಯತ್ನಾಳ ಈ ಭಾಗದಲ್ಲಿ ಬಂದಾಗ ನಮ್ಮ ಮನಿಗೆ ನಾಷ್ಟಾಕ್ಕೆ, ಚಹಾ ಕುಡಿಯಲು ಬನ್ನಿ ಎಂದು ಕರೆದಿದ್ದ ಕೆಲ ನಾಯಕರು, ಇಂದು ಯತ್ನಾಳ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಗ ನಡೆಸುತ್ತಿರುವ ಸಭೆಗೆ ಹಾಜರಾಗಿಲ್ಲ. ಅವರಿಗೂ ಸಹ ತಕ್ಕ ಉತ್ತರವನ್ನು ನೀಡುತ್ತೇವೆ ಎಂದರು.

ಮುಖಂಡರಾದ ವಿಶ್ವನಾಥ ಜಿಡ್ಡಿಬಾಗಿಲ, ವೀರೇಶ ಸಂಗಮದ, ಅಯ್ಯಪ್ಪ ಅಂಗಡಿ, ರುದ್ರಗೌಡ ಸೊಲಬಗೌಡ್ರ, ಪ್ರಭು ಚವಡಿ ಮಾತನಾಡಿದರು. ಇದಕ್ಕೂ ಮುನ್ನ ಪಟ್ಟಣದ ಎಪಿಎಂಸಿ ಆವರಣದಲ್ಲಿ ಗಣೇಶ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಕಾಲಕಾಲೇಶ್ವರ ವೃತ್ತದಲ್ಲಿ ಸಭೆಯಾಗಿ ಮಾರ್ಪಟ್ಟಿತು.ಟಿ.ಎಸ್. ರಾಜೂರ, ಮುತ್ತಣ್ಣ ಸಂಗನಗೌಡ್ರ, ಕಳಕಪ್ಪ ಅಬ್ಬಿಗೇರಿ, ಭೀಮಣ್ಣ ಮ್ಯಾಗೇರಿ, ಬಸವರಾಜ ಮೂಲಿಮನಿ, ಮುತ್ತಣ್ಣ ಮೇಟಿ, ಮಹೇಶ ಪಲ್ಲೇದ, ರುದ್ರೇಶ ಕೇರಿ, ತುಳಸಪ್ಪ ಸುಳ್ಳದ, ಮಹಾಂತೇಶ ಬನ್ನಿಗೊಳ, ಮುತ್ತು ಚಳಗೇರಿ, ಶರಣಪ್ಪ ಹಿರೇಕೊಪ್ಪ ಸೇರಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.