ಸಾರಾಂಶ
- ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಂದ ಹೋರಾಟ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹಸಚಿವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಮಾತನಾಡಿ ರಾಷ್ಟ್ರದ ಪ್ರಜಾತಂತ್ರ ಮೋದಿ ಆಡಳಿತದಲ್ಲಿ ಅಪಾಯದ ಸ್ಥಿತಿಯಲ್ಲಿದೆ. ಅಧಿಕಾರಕ್ಕಾಗಿ ಬಿಜೆಪಿ, ಸಂಘ-ಪರಿವಾರದ ಕಾರ್ಯಕರ್ತರು ಎಲ್ಲಾ ಮಟ್ಟಕ್ಕೂ ಇಳಿಯುತ್ತಿದೆ. ಅಲ್ಲದೇ ವಿಶ್ವ ಬ್ಯಾಂಕ್‌ನಲ್ಲಿ ಕೇಂದ್ರ ಸರ್ಕಾರ ಸಾಲ ಪಡೆದು, ಬಿಹಾರದಲ್ಲಿ ಹಂಚಿಕೆಮಾಡಿ ಚುನಾವಣೆ ಎದುರಿಸಿದೆ ಎಂದು ಆರೋಪಿಸಿದರು.ಮಾಜಿ ಶಾಸಕ ಸಿ.ಟಿ.ರವಿ, ಸಿದ್ದರಾಮಯ್ಯ ಬಗ್ಗೆ ಪದೇ ಪದೇ ಅವಮಾನಿಸಿದ ಕಾರಣ ಚಿಕ್ಕಮಗಳೂರು ಸೇರಿದಂತೆ ಪ್ರತಿ ತಾಲೂಕಿನಲ್ಲಿ ಬಿಜೆಪಿ ಧೂಳಿಪಟವಾಗಿದೆ. ಅವರದೇ ಪಕ್ಷದ ಮಾಜಿ ಮುಖ್ಯಮಂತ್ರಿ ಲೈಂಗಿಕ ಕಿರುಕುಳ, ಚಿತ್ರತಾರೆ ಕರೆ ದೊಯ್ದ ಪ್ರಕರಣ ಹಾಗೂ ೧೫ಕ್ಕೂ ಮಂದಿ ಮುಂಬೈನಲ್ಲಿ ಅಶ್ಲೀಲ ವೀಡಿ ಯೋ ನಡೆಸಿದವರ ವಿರುದ್ಧ ಮಾತನಾಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.ದೆಹಲಿ ಕೆಂಪುಕೋಟೆಯಲ್ಲಿ ಬಾಂಬ್ ಸ್ಪೋಟಿಸಿ ಕೆಲವು ಇಸ್ಲಾಮೀಕರಣಕ್ಕೆ ಭಯೋತ್ಪಾದಕರು ಮುಂದಾದರೆ, ರಾಷ್ಟ್ರದಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಸಂಘಟನೆಗಳು ಮನಬಂದಂತೆ ಹೇಳಿಕೆ ನೀಡುವ ಮೂಲಕ ಹಿಂದೂ ಭಯೋತ್ಪಾದಕರಾಗಿ ಸನಾತನ ಧರ್ಮವನ್ನು ಅಪಮಾನಿಸುವ ಜೊತೆಗೆ ಧರ್ಮದ ಅದೋಗತಿಗೆ ಕಾರಣೀ ಭೂತರಾಗಿದ್ದಾರೆ ಎಂದು ಹೇಳಿದರು.ಇತ್ತೀಚೆಗೆ ಕ್ಷೇತ್ರದ ಮಾಜಿ ಶಾಸಕರು ಗೋಮಾಂಸ ಜಿಲ್ಲೆಯಲ್ಲಿ ವಿಪರೀತವಾಗಿದೆ ಎಂದು ಪ್ರತಿಭಟಿಸುತ್ತಾರೆ. ಕಳೆದ ಎರಡು ದಶಕಗಳಿಂದ ಶಾಸಕರಾಗಿದ್ದ ಸಿ.ಟಿ.ರವಿ ತಮ್ಮ ಅವಧಿಯಲ್ಲಿ ಗೋಮಾಂಸ ನಿಯಂತ್ರಣಕ್ಕೆ ತರದೇ ಕಮಿಷನ್ ಪಡೆಯುತ್ತಿ ದ್ದರೇ ಎಂದು ಪ್ರಶ್ನಿಸಿದ ಅವರು ಕೇವಲ ರಾಜಕೀಯ ಲಾಭಕ್ಕಾಗಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ದೂರಿದರು.ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ ಆರ್‌ಎಸ್‌ಎಸ್ ದೇಶಭಕ್ತರು, ಸಂವಿಧಾನ ಸಂರಕ್ಷಕರು ಎಂಬುದನ್ನು ಮರೆತು. ಬಾಯಿಗೆ ಬಂದಂತೆ ಹೇಳಿಕೆ ನೀಡುವ ಹೀನಾಯ ಸಂಸ್ಕೃತಿ ಸಂಘ-ಪರಿ ವಾರದಲ್ಲಿದೆ. ಗೃಹ ಸಚಿವರ ವೈಯಕ್ತಿಕ ಕುಟುಂಬದ ಬಗ್ಗೆ ಪರಿವಾರದ ಕಾರ್ಯಕರ್ತನ ಹೇಳಿಕೆಗೆ ಪೊಲೀಸರು ಬಂಧಿಸಿ ಕಾರಾಗೃಹ ಅತಿಥಿ ಮಾಡಿರುವುದು ಒಳ್ಳೆಯ ಕೆಲಸ ಎಂದರು.ಸಿದ್ದರಾಮಯ್ಯ ಬಗ್ಗೆ ಸಿದ್ದರಾಮುಲ್ಲಾ ಖಾನ್ ಎಂದ ವ್ಯಕ್ತಿಯನ್ನು ಮನೆಗೆ ಕಳಿಸುವ ಕೆಲಸ ಕಾಂಗ್ರೆಸ್ ಮಾಡಿದೆ. ಬಿಜೆಪಿ ವಿ. ಪಕ್ಷದ ನಾಯಕ ಈಚೆಗೆ ಹೇಳಿಕೆ ನೀಡಿ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಇಲ್ಲದಿದ್ದರೆ ಪಕ್ಷ ನಶಿಸಲಿದೆ ಎಂಬ ಆಧಾರವಿಲ್ಲದೇ ಹೇಳಿಕೆ ಅವರ ಮನಸ್ಥಿತಿ ತೋರಿಸುತ್ತದೆ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ ರಾಜ್ಯ ಕಾಂಗ್ರೆಸ್ ವರಿಷ್ಠರ ನಾಯಕರ ಬಗ್ಗೆ ಆವಾಚ್ಯ ಶಬ್ದಗಳ ಬಳಸಿ ನಿಂದಿಸಿರುವ ಗೂಂಡಾಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಸಂಸ್ಕೃತಿ, ಸಂಸ್ಕಾರ ಇಲ್ಲದ ಬಿಜೆಪಿ ಮುಖಂಡರು ರಾಜ್ಯ ಗೃಹಸಚಿವ ಪರಮೇಶ್ವರ್ ಹಾಗೂ ಮಕ್ಕಳ ಬಗ್ಗೆ ಮಾತನಾಡುವ ನೈತಿಕ ಯೋಗ್ಯತೆಯಿಲ್ಲ ಎಂದು ದೂರಿದರು.ಉಪ ಮುಖ್ಯಮಂತ್ರಿ ಡಿಕೆಶಿ ವಿರುದ್ಧ ಹಿಂಬದಿಯಲ್ಲಿ ನಿಂದಿಸುವ ಮುಖಂಡರು, ನೇರವಾಗಿ ಡಿಕೆಶಿ ಎದುರು ಹೇಳುವ ಸಾಮರ್ಥ್ಯವಿಲ್ಲ. ಮೂರ್ಖತನ ಬಿಟ್ಟು ಬಿಜೆಪಿ ಕಾರ್ಯಕರ್ತರು ಎಚ್ಚರಿಕೆ ವಹಿಸಬೇಕು. ಮುಂದೆ ಈ ರೀತಿ ಅವಾಚ್ಯ ಶಬ್ದಗಳ ಬಳಸಿದರೆ ಜಿಲ್ಲಾ ಬಿಜೆಪಿ ನಾಯಕರು ಮತ್ತು ಕಾರ್ಯ ಕರ್ತರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ದುರ್ವರ್ತನೆ ಯಿಂದ ಜನತೆ ಸೋಲುಣಿಸಿ, ಕಾಂಗ್ರೆಸ್ ಜೈಕಾರ ಹಾಕಿದರೂ, ಇನ್ನೂ ಬುದ್ದಿ ಹೀನರಾಗಿ ವರ್ತಿಸುತ್ತಿದ್ದಾರೆ. ಅಲ್ಲದೇ ಕಾಂಗ್ರೆಸ್ ವರಿಷ್ಟರ ನಾಯಕರನ್ನು ಅಪಮಾನಿಸುವ ಹೇಳಿಕೆ ಎಂದಿಗೂ ರಾಜ್ಯದ ಜನತೆ ಸಹಿಸುವುದಿಲ್ಲ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಸದಸ್ಯ ಎಂ.ಸಿ.ಶಿವಾನಂದಸ್ವಾಮಿ, ತಾಲೂಕು ಅಧ್ಯಕ್ಷ ಮಲ್ಲೇಶ್, ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಕೆಪಿಸಿಸಿ ವಕ್ತಾರ ಅನಂತು, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ಹನೀಫ್, ತಾಲೂಕು ಅಧ್ಯಕ್ಷ ಪ್ರವೀಣ್ ಬೆಟ್ಟಗೆರೆ, ನಗರಸಭಾ ಸದಸ್ಯರಾದ ಖಲಂಧರ್, ಜಾವೀದ್, ಶಾದಂ ಆಲಂ ಖಾನ್, ಮುಖಂಡರಾದ ಕೆ.ವಿ.ಮಂಜುನಾಥ್, ಹಿರೇಗೌಜ ಶಿವು, ಪ್ರಸಾದ್ ಅಮೀನ್, ಬಸವರಾಜ್, ಪ್ರಕಾಶ್ ರೈ, ಜಗದೀಶ್ ಮತ್ತಿತರರು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))