ಬಸ್‌ ನಿಲುಗಡೆಗೆ ಒತ್ತಾಯಿಸಿ ಪ್ರತಿಭಟನೆ

| Published : Nov 12 2025, 02:30 AM IST

ಸಾರಾಂಶ

ಗಂಗಾವತಿಯಿಂದ ಕೊಪ್ಪಳ ಕಡೆಗೆ ಹೋಗುವ ಎಲ್ಲ ಬಸ್ ಬಸಾಪುರ ಮಾರ್ಗವಾಗಿಯೇ ತೆರಳುತ್ತವೆ. ಆದರೆ ಹಲವು ಬಸ್ ಗ್ರಾಮದಲ್ಲಿ ನಿಲುಗಡೆ ಮಾಡುವುದಿಲ್ಲ.

ಕೊಪ್ಪಳ: ತಾಲೂಕಿನ ಬಸಾಪುರ ಗ್ರಾಮದಲ್ಲಿ ಬಸ್ ನಿಲುಗಡೆ ಮಾಡಲಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಗ್ರಾಮಸ್ಥರು ಬಸ್ ತಡೆದು ಪ್ರತಿಭಟಿಸಿದ ಘಟನೆ ಮಂಗಳವಾರ ನಡೆದಿದೆ.

ಬಸಾಪುರು ಗ್ರಾಮದಲ್ಲಿ ಬಸ್‌ ನಿಲ್ಲಿಸಲಾರದ ಹಿನ್ನೆಲೆಯಲ್ಲಿ ಬಸ್‌ ತಡೆದು ಪ್ರತಿಭಟಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಬಸ್ ನಿಲ್ಲಿಸದಿದ್ದರೇ ನಾವು ಶಾಲಾ-ಕಾಲೇಜಿಗೆ ತೆರಳುವುದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಂಗಾವತಿಯಿಂದ ಕೊಪ್ಪಳ ಕಡೆಗೆ ಹೋಗುವ ಎಲ್ಲ ಬಸ್ ಬಸಾಪುರ ಮಾರ್ಗವಾಗಿಯೇ ತೆರಳುತ್ತವೆ. ಆದರೆ ಹಲವು ಬಸ್ ಗ್ರಾಮದಲ್ಲಿ ನಿಲುಗಡೆ ಮಾಡುವುದಿಲ್ಲ. ಜಿಲ್ಲಾ ಕೇಂದ್ರದಿಂದ ಐದಾರು ಕಿಮೀ ದೂರದಲ್ಲಿದ್ದರೂ ನಾವು ಸಕಾಲಕ್ಕೆ ಶಾಲಾ-ಕಾಲೇಜುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಸರಿಪಡಿಸಿ ಎಂದು ಗೊಗರೆಯುತ್ತಿದ್ದರೂ ಯಾರು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ವೇಳೆ ಆರೋಪಿಸಿದರು.